Thought for the day
Your page will load in ...
Close Ad X
Advertisement
Englishहिन्दी മലയാളം தமிழ் తెలుగు
 
Share This Story

ಎಸ್ ಬಿಐ ಉದ್ಯಮ ಸಾಲದ ಬಡ್ಡಿದರ ಇಳಿಕೆ

Posted by:
Published: Saturday, June 16, 2012, 17:00 [IST]

Sbi Slashes Lending Rates Ahead Rbi Policy Meet

ನವದೆಹಲಿ, ಜೂ.16: ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್‌ಬ್ಯಾಂಕ್ ತನ್ನ ಸಾಲದ ಬಡ್ಡಿದರವನ್ನು ಇಳಿಕೆ ಮಾಡಿದೆ. ವಿಶೇಷವಾಗಿ ಕಿರು ಹಾಗೂ ಮಧ್ಯಮ ಉದ್ಯಮಗಳಿಗಾಗಿ ನೀಡುವ ಸಾಲ ದ ಬಡ್ಡಿದರವನ್ನು ಶೇ.05-ಶೇ.3.5ರಷ್ಟು ಕಡಿತಗೊಳಿಸುವುದಾಗಿ ಭಾರತೀಯ ಸ್ಟೇಟ್‌ಬ್ಯಾಂಕ್ ಶುಕ್ರವಾರ ಬಿಎಸ್ ಇಗೆ ನೀಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.

ಗೃಹ ಸಾಲ ಹಾಗೂ ರಿಟೇಲ್ ಸಾಲಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಎಸ್‌ಬಿಐ ಚೇರ್ಮನ್ ಎ.ಕೃಷ್ಣ ಕುಮಾರ್ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಾಲದ ಬಡ್ಡಿದರ ಕಡಿತವನ್ನು ಕೃಷ್ಣ ಕುಮಾರ್ ಘೋಷಿಸಿದರು.

ಆದರೆ, ಮೂಲಬಡ್ಡಿದರವು ಶೇ.10ರಷ್ಟೇ ಮುಂದುವರಿಯಲಿದೆ. ಹಣದುಬ್ಬರವು ಶೇ.8ಕ್ಕೆ ತಲುಪಿರುವುದರಿಂದ ಬಡ್ಡಿದರದಲ್ಲಿ ದೊಡ್ಡ ಕಡಿತವನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಎಸ್ ಬಿಐ ಮುಖ್ಯಸ್ಥ ಕೃಷ್ಣ ಹೇಳಿದ್ದಾರೆ.

ಆದರೆ ಕೈಗಾರಿಕಾ ಕ್ಷೇತ್ರವು ಎಪ್ರಿಲ್‌ನಲ್ಲಿ ಶೇ.0.1ರಷ್ಟು ನಿಕೃಷ್ಟ ಮಟ್ಟದ ಬೆಳವಣಿಗೆ ಸಾಧಿಸಿರುವ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ವಲಯವು ತನ್ನ ಹಣಕಾಸು ನೀತಿಯಲ್ಲಿ ತುಸು ಸಡಿಲಿಕೆ ಮಾಡಬೇಕಾಗಿದೆ ಎಂದು ತಿಳಿದು ಬಂದಿದೆ.

ಆರ್ ಬಿಐ ನಿಯಮ ಬದಲಾವಣೆ ಬಗ್ಗೆ ಸೋಮವಾರ(ಜೂ.17) ಮಹತ್ವದ ಸಭೆ ನಡೆಯಲಿದೆ. ಹಣದುಬ್ಬರ ದರ ಶೇ 7.5ರಷ್ಟಿರುವುದರಿಂದ ರೇಟ್ ಇಳಿಕೆಯಲ್ಲಿ ಆರ್ ಬಿಐ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ, ಆದರೆ, ಕೈಗಾರಿಕಾಗಳ ಪ್ರಗತಿಯಲ್ಲಿ ಇಳಿಕೆ ಕಂಡು ಬಂದಿರುವುದರಿಂದ ಬಡ್ಡಿ ದರ ಇಳಿಕೆಗೆ ಮುಂದಾದರೂ ಅಚ್ಚರಿಯೇನಿಲ್ಲ ಎನ್ನಲಾಗಿದೆ.

ಆದರೆ, industrial production (IIP) ಶೇ 0.1% ರಷ್ಟಿದೆ ಎಂದರೆ ಅನೇಕ ತಜ್ಞರು ಒಪ್ಪುತ್ತಿಲ್ಲ. 3-5% ರಷ್ಟು ಪ್ರಗತಿ ಇರಬೇಕು. ಕೈಗಾರಿಕಾ ಪ್ರಗತಿ 7% ರಷ್ಟಾದರೆ ಸ್ವಲ್ಪ ನಿರಾಳತೆ ಮೂಡಲಿದೆ. ಆದರೆ. ಯುರೋ ಆರ್ಥಿಕ ಬಿಕ್ಕಟ್ಟು ಮುಂದುವರೆದರೆ ಭಾರತದಲ್ಲೂ ಪ್ರಗತಿ ಕುಂಠಿತವಾಗಲಿದೆ.

English summary
The country's largest public sector lender, State Bank of India (SBI) has announced cut in lending rates between 0.5-3.5 per cent mainly for the small and medium enterprises and the agriculture sector.
ಅಭಿಪ್ರಾಯ ಬರೆಯಿರಿ
Click here to type in Kannada
Company Search
Enter the first few characters of the company's name or the NSE symbol or BSE code and click 'Go'
Goodreturns iPad App
Goodreturns iPad App
Download GoodReturns iPad App and enjoy it. Learn more about Oneindia GoodReturns on the App Store.
Download Goodreturns iPad App