Thought for the day
Your page will load in ...
Close Ad X
Advertisement

ಕ್ರೆಡಿಟ್ ಕಾರ್ಡ್ ಶೂಲದಿಂದ ಪಾರಾಗುವುದು ಹೇಗೆ?

Posted by:
     Published: Wednesday, June 20, 2012, 16:37 [IST]

How Get Out Of Credit Card Debt
 

ಕ್ರೆಡಿಟ್ ಕಾರ್ಡ್ ನನಗೆ ಏಕೆ ಬೇಕು? ಎಂಬ ಪ್ರಶ್ನೆಗೆ ನಿಮ್ಮ ಬಳಿ ಸರಿಯಾದ ಉತ್ತರವಿದ್ದರೆ, ಕ್ರೆಡಿಟ್ ಕಾರ್ಡ್ ವ್ಯವಹಾರದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಕ್ರೆಡಿಟ್ ಕಾರ್ಡ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಕನಿಷ್ಠ ಜ್ಞಾನ ಇರದಿದ್ದರೆ, ನಿಮ್ಮ ಆರ್ಥಿಕ ಆರೋಗ್ಯ ಹದಗೆಡುವುದು ಗ್ಯಾರಂಟಿ.

ಕ್ರೆಡಿಟ್ ಕಾರ್ಡ್ ಹೊಸ ಹೊಸ ದಿಶೆಗಳನ್ನು ತೋರುತ್ತಾ ಆಸೆ ಹುಟ್ಟಿಸುವುದೇನೋ ನಿಜ. ಲೈಫ್ ಟೈಮ್ ಫ್ರೀ ಆಫರ್, ಕ್ಯಾಶ್ ಬ್ಯಾಕ್ ಆಫರ್, ಫುಲ್ ಫ್ರೀ ಸಾರ್ ಎಂದು ಕ್ರೆಡಿಟ್ ಕಾರ್ಡ್ ನೀಡುವ ಕಂಪನಿಯವರು ಆಡುವ ನಯವಾದ ಮಾತುಗಳಿಗೆ ಸಹಜವಾಗಿ ಎಲ್ಲರೂ ಮರುಳಾಗುತ್ತಾರೆ.

ಶಾಪಿಂಗ್, ಪಾರ್ಟಿ ಮಾಡುವ ಮನೋಭಾವ ಇರುವವರಿಗೆ ಕ್ರೆಡಿಟ್ ಕಾರ್ಡ್ ಪ್ರತಿಷ್ಠೆಯ ಅಂಗವಾಗಿ ಕಂಡರೂ ಬಿಲ್ ಕೈಗೆ ಬಂದಾಗ ಸಮಸ್ಯೆ ಅರಿವಾಗುತ್ತದೆ. ಯಾವುದೋ ಖೆಡ್ಡಾದಲ್ಲಿ ಬಿದ್ದ ಒಂಟಿ ಸಲಗದಂತೆ ಒದ್ದಾಡುವ ಸರದಿ ನಿಮ್ಮದಾಗಿರುತ್ತದೆ. ಇದಕ್ಕೆ ಪರಿಹಾರವೇ ಇಲ್ಲವೇ? ಖರ್ಚು ಕಮ್ಮಿ ಮಾಡದೆ ಕ್ರೆಡಿಟ್ ಕಾರ್ಡ್ ಸಾಲದಿಂದ ಹೇಗೆ ಪಾರಾಗಬಹುದು ನೋಡೋಣ...

ನಿಯಮ 1: ಅವಶ್ಯಕ ವೆಚ್ಚ ಹಾಗೂ ತುರ್ತು ವೆಚ್ಚಕ್ಕೂ ಐಷಾರಾಮಿ ಖರ್ಚು ಬಗ್ಗೆ ಗಮನವಿರಲಿ. ಮನೆ ಖರೀದಿ, ಮಕ್ಕಳ ಶಿಕ್ಷಣ, ಅವರ ಮದುವೆ, ಆರೋಗ್ಯ ಇವುಗಳಿಗೆ ಖರ್ಚು ಮಾಡಲೇಬೇಕಾದ ಅವಶ್ಯಕತೆ.

* ಐಷಾರಾಮಿ ಖರ್ಚಿನಲ್ಲಿ ವಿದೇಶಿ ಪ್ರವಾಸ, ದುಬಾರಿ ಗ್ರಾಹಕ ವಸ್ತುಗಳ ಖರೀದಿ, ಪಾರ್ಟಿಗಳು.. ಇತ್ಯಾದಿ ಸೇರುತ್ತದೆ.
* ಯಾವುದಕ್ಕೆ ಖರ್ಚು ಮಾಡಬೇಕು, ಯಾವುದಕ್ಕೆ ಖರ್ಚು ಮಾಡುವಾಗ ಸಾಲ ಹೊಂದಿಸುವುದನ್ನು ಸಮರ್ಥಿಸಿಕೊಳ್ಳಬಹುದು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. 3-6 ತಿಂಗಳ ಖರ್ಚುವೆಚ್ಚ ಲೆಕ್ಕ ಮಾಡಿಟ್ಟುಕೊಳ್ಳಿ(ಎಟಿಎಂ, ಬ್ಯಾಂಕ್ ವಿವರ ಸಹಾಯಕ್ಕೆ ಬರುತ್ತದೆ)

* ಆರೋಗ್ಯ ಏರುಪೇರಾದಾಗ ತುರ್ತು ಪರಿಸ್ಥಿತಿ ಕ್ರೆಡಿಟ್ ಕಾರ್ಡ್ ನಿಮ್ಮ ಕೈ ಹಿಡಿಯುತ್ತದೆ. ಆದರೆ ಮೋಜಿಗಾಗಿ ಸಾಲ ಪಡೆದು ಕೈ ಕಚ್ಚುವಂತೆ ಮಾಡಿಕೊಳ್ಳಬೇಡಿ.

* ತಿಂಗಳ ಬಜೆಟ್ ರೂಪಿಸಿ ಅದರಂತೆ ನಡೆದುಕೊಳ್ಳಿ, ಮನರಂಜನೆಗಾಗಿ ಹಣ ವ್ಯಯಮಾಡಬೇಡಿ. ಆನ್ ಲೈನ್ ಬಜೆಟ್ ಸಹಾಯಬೇಕಾದರೆ InvestmentYogi ವೆಬ್ ತಾಣಕ್ಕೆ ಭೇಟಿ ಕೊಡಿ.

ನಿಯಮ 2: ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಬಡ್ಡಿದರ ಇಳಿಕೆ ಕ್ರಮದಂತೆ ಕಾರ್ಡ್ 1 ನಿಮ್ಮ ಪ್ರಾಶಸ್ತ್ಯ ಅಯ್ಕೆಯಾಗಲಿ..
ಕಾರ್ಡ್ ಹೆಸರು: ಕಾರ್ಡ್ 1
ಬ್ಯಾಲೆನ್ಸ್ : X
ಬಡ್ಡಿ ದರ: ಶೇ 40

ಕಾರ್ಡ್ ಹೆಸರು: ಕಾರ್ಡ್ 2
ಬ್ಯಾಲೆನ್ಸ್ : Y
ಬಡ್ಡಿ ದರ: 36%

ಕಾರ್ಡ್ ಹೆಸರು: ಕಾರ್ಡ್ 3
ಬ್ಯಾಲೆನ್ಸ್ : Y
ಬಡ್ಡಿ ದರ: 36%

ಕಾರ್ಡ್ ಹೆಸರು: ಕಾರ್ಡ್ 4
ಬ್ಯಾಲೆನ್ಸ್ : Y
ಬಡ್ಡಿ ದರ: 32%

ನಿಯಮ 3: ನಿಮ್ಮ ಆದಾಯ ಮತ್ತು ಖರ್ಚು, ಆಸ್ತಿ ಮತ್ತು ಸಾಲ ಇವುಗಳನ್ನು ಪಟ್ಟಿ ಮಾಡಿ. ಸಾಲದ ಕಂತು ಅದು ಮನೆ ಸಾಲವೇ ಇರಲಿ ಅಥವಾ ಕಾರಿನ ಸಾಲವೇ ಇರಲಿ, ಇಎಂಐ ಒಟ್ಟು ಆದಾಯದ ಶೇ 40ರಷ್ಟನ್ನು ಮೀರದಿರಲಿ.

* ಆದಾಯ 20 ಸಾವಿರ ರೂಪಾಯಿ ಇದ್ದರೆ, EMI ಮೊತ್ತ 8 ಸಾವಿರ ರೂಪಾಯಿ ಮೀರದಿರಲಿ.
* ಒಟ್ಟು ಆಸ್ತಿಯನ್ನು ಲೆಕ್ಕ ಹಾಕಿ. ಆಸ್ತಿ, ಹೂಡಿಕೆ, ಎಫ್‌ಡಿ, ಪಿಎಫ್.. ಹೀಗೆ. ಸಾಲವನ್ನೂ ಲೆಕ್ಕ ಹಾಕಿ.
* ಸಾಲದ ಮೊತ್ತ ಆಸ್ತಿಯ ಶೇ 50ರಷ್ಟು ಮೊತ್ತವನ್ನು ಮೀರಿದಂತಿರಬೇಕು. ಒಟ್ಟು ಆಸ್ತಿಯ ಮೊತ್ತ 50 ಲಕ್ಷ ರೂಪಾಯಿ ಇದ್ದರೆ ಸಾಲ 25 ಲಕ್ಷ ರೂಪಾಯಿಯೊಳಗೆ ಮಿತಿಗೊಳಿಸಿ.

ನಿಯಮ 4: ಈಗ ಅನೇಕ ಕ್ರೆಡಿಟ್ ಕಾರ್ಡ್ ಕಂಪನಿಗಳು ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ ಒದಗಿಸುತ್ತದೆ. ಈ ಸೌಲಭ್ಯ ಬಳಸಿ ಒಂದು ಕಾರ್ಡ್ ನ ಸಾಲವನ್ನು ಮತ್ತೊಂದಕ್ಕೆ ವರ್ಗಾವಣೆ ಮಾಡಿಕೊಂಡು ಕೊಂಚ ನಿರಾಳತೆ ಪಡೆಯಬಹುದು.

ನಿಯಮ 5: ಎಂದಿಗೂ ಕನಿಷ್ಠ ಪಾವತಿ ಮಾಡಲು ಹೋಗಬೇಡಿ. ನೀವು ಕಟ್ಟುವ ಪಾವತಿ ಹಣ ಬಡ್ಡಿಗೆ ಸಾಕಾಗಿ ಹೋಗುತ್ತದೆ. ನಿಮ್ಮ ಅಸಲು ಹಾಗೆ ಉಳಿಯುತ್ತದೆ. ಪೂರ್ತಿ ಬಾಕಿ ಮೊತ್ತ ಪಾವತಿಸಲು ಅಸಾಧ್ಯವಾಗುವ ಪರಿಸ್ಥಿತಿ ತೋರುತ್ತದೆ.

ಪೂರ್ತಿ ಮೊತ್ತವನ್ನು ಒಮ್ಮೆಗೆ ಕಟ್ಟಲು ಯತ್ನಿಸಿ. ಬೇಕಿದ್ದರೆ ಉಳಿತಾಯ ಹೆಚ್ಚಿಸಿ ಸಾಲ ಪಾವತಿ ಮಾಡಿ. ಕೆಲವೆಡೆ ಪ್ರೀಪೇಮೆಂಟ್ ದಂಡ ಇರುತ್ತದೆ. ಶೇ 3 ರಷ್ಟು ಉಳಿತಾಯ ಮಾಡಿ ಕ್ರೆಡಿಟ್ ಕಾರ್ಡ್ ನಲ್ಲಿ ಶೇ 36 ರಷ್ಟು ಖರ್ಚು ಮಾಡಿದರೆ ಅದಕ್ಕೆ ಅರ್ಥವಿರುವುದಿಲ್ಲ. ಕ್ರೆಡಿಟ್ ಕಾರ್ಡ್ ಸಾಲ ಸಮಸ್ಯೆ ಪರಿಹಾರಕ್ಕೆ ಸ್ನೇಹಿತರು, ಕುಟುಂಬದವರಿಂದ ಆರ್ಥಿಕ ಸಹಾಯ ಪಡೆದರೂ ಅಡ್ಡಿಯಿಲ್ಲ.

ನಿಯಮ 6: ಕಟ್ಟ ಕಡೆಯ ಪ್ರಯತ್ನ ಎಂಬಂತೆ ವೈಯಕ್ತಿಕ ಸಾಲ(ಪರ್ಸನಲ್ ಲೋನ್) ಪಡೆದು ಕ್ರೆಡಿಟ್ ಕಾರ್ಡ್ ಸಾಲದ ಶೂಲದಿಂದ ತಪ್ಪಿಸಿಕೊಳ್ಳಿ. ಪರ್ಸನಲ್ ಲೋನ್ ಬಡ್ಡಿದರ ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಬಡ್ಡಿದರಕ್ಕಿಂತ ಕಮ್ಮಿ ಇರುತ್ತದೆ.

ನಿಯಮ 7: ಮೊದಲೇ ಹೇಳಿದಂತೆ ಅಗತ್ಯವಿದ್ದರೆ ಮಾತ್ರ ಕ್ರೆಡಿಟ್ ಕಾರ್ಡ್ ಬಳಸಿ. ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಅಪಾಯ ಇನ್ನಷ್ಟು ಜಾಸ್ತಿ. ಹಲವು ಕ್ರೆಡಿಟ್ ಕಾರ್ಡ್ ಗಳ ಸಂಭಾಳಿಸುವ ಕಲೆ ತಿಳಿಯದಿದ್ದರೆ ಅನಗತ್ಯ ಕಾರ್ಡ್ ಗಳನ್ನು ಬಳಸಲು ಹೋಗಬೇಡಿ

ಮನೆ ಸಾಲ, ಶಿಕ್ಷಣ ಸಾಲ, ಕ್ರೆಡಿಟ್ ಕಾರ್ಡ್ ಸಾಲಗಳನ್ನು ವಿಮೆ ಮೂಲಕ ತೀರಿಸುವ ಅವಕಾಶ ಇರುತ್ತದೆ. ಪ್ರಯತ್ನಿಸಿ. ಕ್ರೆಡಿಟ್ ಕಾರ್ಡ್ ನಿಮ್ಮ ಆಪ್ತ ಗೆಳಯನೂ ಆಗಬಹುದು. ಹಿತ ಶತ್ರುವಾಗಿ ಕೂಡಾ ಪರಿಣಮಿಸಬಹುದು.

English summary
One needs to understand how credit card debt works. Ignorance can be fatal to your fiscal health. Facts you should know. It is possible to get out of the debt trap provided you analyze the situation with a cool mind. Here is some of the rules which will assist you in getting out of debt and stay debt free
ಅಭಿಪ್ರಾಯ ಬರೆಯಿರಿ
Click here to type in Kannada