Thought for the day
Your page will load in ...
Close Ad X
Advertisement
Englishहिन्दी മലയാളം தமிழ் తెలుగు
 
Share This Story

ಆರಂಭಿಕ ವೆಚ್ಚವಿಲ್ಲದೆ ಐಸಿಐಸಿಐನಲ್ಲಿ ಹೂಡಿಕೆ ಸಾಧ್ಯ!

Posted by:
Updated: Monday, July 23, 2012, 15:50 [IST]

Icici Prudential Us Bluechip Equity Fund

ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುಯಲ್ ಫಂಡ್ ಹೊಸ ಪ್ರಗತಿ ಕಾಣುವ ಈಕ್ವಿಟಿ ಫಂಡ್ ಹೊರ ತಂದಿದೆ. ಯುಎಸ್ ಬ್ಲು ಚಿಪ್ ಈಕ್ವಿಟಿ ಫಂಡ್ ಜುಲೈ 2,2012 ಕ್ಕೆ ಮುಕ್ತಾಯವಾಗಲಿದೆ.

ಕನಿಷ್ಠ ಹೂಡಿಕೆ ಮೊತ್ತವನ್ನು 5,000 ರು ಗೆ ಇಳಿಸಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಲ್ಲಿ ಐಸಿಐಸಿಐ ಸಂಸ್ಥೆಗಿದೆ.

ಅಮೆರಿಕದ ಸರ್ಕಾರ ಸುಸ್ಥಿತಿಯಲ್ಲಿದ್ದು, ಯುಎಸ್ ಮಾರುಕಟ್ಟೆಯಲ್ಲಿ ಸಂಸ್ಥೆ ಉತ್ತಮ ಸ್ಥಾನ ಹೊಂದಿದೆ. ಫೈನಾನ್ಸ್ ಅಕೌಂಟಿಂಗ್ ಹಾಗೂ ಕಾರ್ಪೊರೇಟ್ ಆಡಳಿತದಲ್ಲಿ ಯಾವುದೇ ತೊಂದರೆ ಇಲ್ಲದೆ ಗ್ರಾಹಕರು ಬಂಡವಾಳ ಹೂಡಿಕೆಗೆ ಮುಂದಾಗಬಹುದಾಗಿದೆ.

ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್ ಹಾಗೂ ನಾಸ್ಡಾಕ್ ನಲ್ಲಿ ಪಟ್ಟಿಯಲ್ಲಿರುವ ಸಂಸ್ಥೆಯ ಈಕ್ವಿಟಿ ಹಾಗೂ ಈಕ್ವಿಟಿ ಆಧಾರಿತ ಸಂಸ್ಥೆ ಸುರಕ್ಷತೆ (ಭಾರತ ಹಾಗೂ ವಿದೇಶಿ ಕಂಪನಿಗಳು ನೀಡುವ ADRs/GDRs)ಯ ಮೇಲೆ ಹೂಡಿಕೆ ಮಾಡುವ ಮೂಲ ಉದ್ದೇಶ ದೀರ್ಘ ಕಾಲದ ಬಂಡವಾಳ ಹೂಡಿಕೆ, ಪ್ರಗತಿ ನೀಡುವುದಾಗಿದೆ. ಇದನ್ನು ಐಸಿಐಸಿಐ ಪ್ರುಡೆನ್ಶಿಯಲ್ ಯುಎಸ್ ಬ್ಲೂಚಿಪ್ ಈಕ್ವಿಟಿ ಫಂಡ್ ಪೂರೈಸುತ್ತದೆ.

ಅರಂಭಿಕ ವೆಚ್ಚಗಳು ಎಂಟ್ರಿ ಲೋಡ್ ನ ಅಗತ್ಯತೆ ಇಲ್ಲ . ವಾಪಾಸ್ಸಾತಿ ವೆಚ್ಚಗಳು ಎಕ್ಸಿಟ್ ಲೋಡ್ ಗಾದರೆ
* ಯೂನಿಟ್ ನಿಂದ ಹೂಡಿಕೆಯ 3 ತಿಂಗಳಲ್ಲೇ ಹಿಂತೆದುಕೊಳ್ಳಲು ಬಯಸಿದರೆ ಈಕ್ವಿಟಿ ಮಂಜೂರಾದ ದಿನದಿಂದ ಶೇ 3ರಷ್ಟು ಮೂಲಧನ(NAV) ಕಡಿತಗೊಳ್ಳಲಿದೆ.
* ಈಕ್ವಿಟಿ ಮಂಜೂರಾದ ದಿನದಿಂದ 3 ತಿಂಗಳ ನಂತರ ಆದರೆ 1 ವರ್ಷ ಪೂರೈಸುವುದರೊಳಗೆ ಹೊರಬಂದರೆ ಶೇ 1 ರಷ್ಟು NAV ಅನ್ವಯವಾಗಲಿದೆ.
* 1 ವರ್ಷದ ನಂತರ ಯುನಿಟ್ ನಿಂದ ಹೊರಬಂದರೆ ಯಾವುದೇ ವೆಚ್ಚಗಳು ಇರುವುದಿಲ್ಲ.

ಐಸಿಐಸಿಐ ಪ್ರುಡೆನ್ಶಿಯಲ್, ಇದು ಐಸಿಐಸಿಐ ಬ್ಯಾಂಕ್ ಹಾಗೂ ಇಂಗ್ಲೆಂಡ್ ಮೂಲದ ಪ್ರುಡೆನ್ಶಿಯಲ್ ಸಂಸ್ಥೆಯ ಜಂಟಿ ಯೋಜನೆಯಾಗಿದೆ. ಸುಮಾರು 2 ಮಿಲಿಯನ್ ಗೂ ಅಧಿಕ ಹೂಡಿಕೆದಾರರನ್ನು ಹೊಂದಿರುವ ವಿಸ್ತೃತ ಸಂಸ್ಥೆಯಾಗಿದೆ.

ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಸೂರೆನ್ಸ್ ಕಂಪನಿ ಗ್ರಾಹಕರು ಮೊಬೈಲ್ ಮೂಲಕವೇ ಉತ್ಪನ್ನಗಳ ಸೇವೆ ಪಡೆಯಲು ನೆರವಾಗುವ ಇಂಟರ್‌ನೆಟ್ ತಾಣದ (m.iciciprulife.com ಅಥವಾ www.icici­pru­life.com) ಸೇವೆ ವಿವರ ಪಡೆಯಬಹುದಾಗಿದೆ.

Story first published:  Thursday, June 28, 2012, 15:38 [IST]
English summary
ICICI Prudential Mutual Fund launches open-ended growth growth fund named ICICI Prudential US Bluechip Equity Fund. The new fund will be open from till July 2, 2012, where investors can invest with minimum investment of Rs 5,000.
ಅಭಿಪ್ರಾಯ ಬರೆಯಿರಿ
Click here to type in Kannada
Company Search
Enter the first few characters of the company's name or the NSE symbol or BSE code and click 'Go'
Goodreturns iPad App
Goodreturns iPad App
Download GoodReturns iPad App and enjoy it. Learn more about Oneindia GoodReturns on the App Store.
Download Goodreturns iPad App