
LIC ಮ್ಯೂಚುಯಲ್ ಫಂಡ್ ತನ್ನ ಹೊಚ್ಚ ಹೊಸ ಯೋಜನೆ LIC NOMURA MF Fixed Maturity Plan - Series 53 ಯನ್ನು ಹೊರ ತಂದಿದೆ. ಕೊಂಚ ದೀರ್ಘ ಕಾಲ(367 ದಿನಗಳು)ವಾದರೂ ಹೂಡಿಕೆದಿಂದ ಯಾವುದೇ ನಷ್ಟವಿಲ್ಲ ಎಂದು ಸಂಸ್ಥೆ ಹೇಳಿದೆ.
ಹೊಸ ನಿಧಿ ಯೋಜನೆಯ ಪ್ರತಿ ಯೂನಿಟ್ ಗೆ 10 ರು ದರದಂತೆ ಸಿಗಲಿದೆ . New Fund Offer (NFO) ಚಂದಾದಾರರಾಗಲು ಜುಲೈ 9 ಕೊನೆ ದಿನಾಂಕ.
ಸೆಬಿ ನೀಡಿರುವ ಮಾಹಿತಿ ಪ್ರಕಾರ ಆರಂಭಿಕ ಶುಲ್ಕ ಇರುವುದಿಲ್ಲ. ಈ ಯೋಜನೆ ಸ್ಟಾಕ್ ಎಕ್ಸ್ ಚೇಂಜ್ ಅಥವಾ ಇತರೆ ಷೇರು ವ್ಯವಹಾರದಲ್ಲಿ ಕಾಣಿಸಿಕೊಳ್ಳುವುದರಿಂದ ನಿರ್ಗಮನ ಶುಲ್ಕ ಕೂಡಾ ವಿಧಿಸಲಾಗುತ್ತಿಲ್ಲ. ಈ ಯೋಜನೆಯಿಂದ ನಿರ್ಗಮಿಸ ಬಯಸುವ ಹೂಡಿಕೆದಾರರು ಕೂಡಾ ಸ್ಟಾಕ್ ಎಕ್ಸ್ ಚೇಂಜ್ ಮೂಲಕ ನಿರ್ಗಮಿಸಬಹುದು.
ಕನಿಷ್ಠ ಅರ್ಜಿ ಮೊತ್ತ 10,000 ರು ಆಗಿದ್ದು ತದನಂತರ 10 ರ ಹತ್ತರ ಗುಣಕದಂತೆ ಲೆಕ್ಕಚಾರ ಹಾಕಲಾಗುತ್ತೆ. ಈ ಯೋಜನೆಯಲ್ಲಿ ಪ್ರಗತಿ ಹಾಗೂ ಡಿವಿಡೆಂಡ್ ಎರಡೂ ಆಯ್ಕೆಗಳೂ ಇದೆ.
CRISIL ನ ಕಡಿಮೆ ಅವಧಿ ಬಾಂಡ್ ನಿಧಿ ಸೂಚ್ಯಂಕದಂತೆ ಗುಣಮಟ್ಟಕಾಯ್ದುಕೊಳ್ಳಲಾಗಿದೆ. ವೈಡಿ ಪ್ರಸನ್ನ ಯೋಜನೆಯ ವ್ಯವಸ್ಥಾಪಕರಾಗಿರುತ್ತಾರೆ.
ನಿಧಿ ಹಂಚಿಕೆ: ಬಡ್ಡಿದರ ಇಳಿಕೆಯಲ್ಲಿನ ತೊಂದರೆಗಳನ್ನು ನಿವಾರಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಬಂಡವಾಳ ಹೂಡಿಕೆ ಹಾಗೂ ಶಾಶ್ವತ ಆದಾಯ ಭದ್ರತಾ ಹೂಡಿಕೆಗಳನ್ನು ಹಣ ತೊಡಗಿಸಲಾಗುತ್ತದೆ. ಹೀಗಾಗಿ ಶೇ 0 ರಿಂದ 100ರವರೆಗೆ ಆಸ್ತಿಯನ್ನು ಸಾಲ ಹಾಗೂ ಹಣಕಾಸು ಮಾರುಕಟ್ಟೆ ಉಪಕರಣಗಳನ್ನು ತೊಡಗಿಸಲಾಗುತ್ತದೆ. 367 ದಿನಗಳ ನಂತರ ಯೋಜನೆ ಸಾಕಾರಗೊಳ್ಳುತ್ತದೆ.
Dion Global Solutions Ltd


















