For Quick Alerts
ALLOW NOTIFICATIONS  
For Daily Alerts

5 ಲಕ್ಷಕ್ಕಿಂತ ಕಡಿಮೆ ಆದಾಯ? ಐಟಿ ರಿಟರ್ನ್ಸ್ ಸಲ್ಲಿಸಬೇಡಿ

By Prasad
|

5 ಲಕ್ಷಕ್ಕೆ ಕಡಿಮೆ ಆದಾಯ? ಐಟಿ ರಿಟರ್ನ್ಸ್ ಬೇಡ
ನವದೆಹಲಿ, ಜು. 21 : ವರಮಹಾಲಕ್ಷ್ಮಿ ಹಬ್ಬ ಇನ್ನೇನು ಬರುತ್ತಿದೆ. ಹಣದ ಥೈಲಿ ತುಂಬುವಂತೆ ಲಕ್ಷ್ಮಿ ದೇವಿಯನ್ನು ಬೇಡಿಕೊಳ್ಳುವವರೇ ಎಲ್ಲ. ಹಣದ ಚಿಂತನೆಯ ಜೊತೆ ಸರಕಾರಕ್ಕೆ ನಮ್ಮ ಕಳೆದ ವರ್ಷದ ಆಯ-ವ್ಯಯದ ಲೆಕ್ಕಾಚಾರವನ್ನು ಕೊಡಲು ಇದು ಸಕಾಲ. ಐಟಿ ರಿಟರ್ನ್ಸ್ ತುಂಬಲು ಜುಲೈ 31 ಕಡೆಯ ದಿನಾಂಕ.

ಎಷ್ಟು ಆದಾಯ ಇರುವವರು ರಿಟರ್ನ್ ಸಲ್ಲಿಸಬೇಕು, ಎಲ್ಲಿ ಸಲ್ಲಿಸಬೇಕು, ಹೇಗೆ ಸಲ್ಲಿಸಬೇಕು, ಸರಕಾರದಿಂದ ನಮಗೇನಾದರೂ ಹಣ ಮರುಪಾವತಿ ಆಗಬೇಕಾ ಎಂಬಿತ್ಯಾದಿ ಪ್ರಶ್ನೆಗಳು ಅನೇಕ ನೌಕರರಲ್ಲಿ ಎದ್ದಿರುತ್ತವೆ. ಅಂಥವರಿಗಾಗಿ ಕೇಂದ್ರ ಸರಕಾರ ಶುಕ್ರವಾರ ಸುದ್ದಿಯೊಂದನ್ನು ಬಿಡುಗಡೆ ಮಾಡಿದೆ.

 

ಅದೇನೆಂದರೆ, ವಾರ್ಷಿಕ ಆದಾಯ 5 ಲಕ್ಷ ರು.ಗಿಂತ ಕಡಿಮೆ ಇರುವ, ಸಂಬಳ ಪಡೆಯುವ ನೌಕರರು ಪ್ರಸಕ್ತ ವರ್ಷದಿಂದ ಐಟಿ ರಿಟರ್ನ್ಸ್ ಫೈಲ್ ಮಾಡುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ವಾರ್ಷಿಕ ಆದಾಯ 5 ಲಕ್ಷ ರು.ಗಿಂತ ಕಡಿಮೆ ಇರಬೇಕು ಮತ್ತು ಬ್ಯಾಂಕ್ ಉಳಿತಾಯದ ಹಣದಿಂದ ಬರುವ ವಾರ್ಷಿಕ ಬಡ್ಡಿ 10 ಸಾವಿರ ರು.ಗಿಂತ ಕಡಿಮೆ ಇರಬೇಕು. ಅಂಥವರಿಗೆ ಮಾತ್ರ ಈ ವಿನಾಯಿತಿ ಲಭ್ಯ.

 

ಆದರೆ, ಹೆಚ್ಚುವರಿ ಹಣವನ್ನು ಸರಕಾರಕ್ಕೆ ಪಾವತಿಸಿದ್ದರೆ, ಆ ಹಣ ಪಡೆಯಬೇಕೆಂದು ಬಯಸುವವರು, ಅವರ ಆದಾಯ 5 ಲಕ್ಷ ರು.ಗಿಂತ ಕಡಿಮೆ ಇದ್ದರೂ ಐಟಿ ರಿಟರ್ನ್ಸ್ ಫೈಲ್ ಮಾಡಲೇಬೇಕು. ಬ್ಯಾಂಕ್ ಡೆಪಾಸಿಟ್ ಗಳಿಕೆಯ ಜೊತೆ 5 ಲಕ್ಷ ರು.ಗಿಂತ ಕಡಿಮೆ ಆದಾಯ ಇರುವ ಸಂಬಳದಾರರ ಸಂಖ್ಯೆ ದೇಶದಲ್ಲಿ 85 ಲಕ್ಷದಷ್ಟಿದೆ. ಈ ಎಲ್ಲರಿಗೂ ಈ ವಿನಾಯಿತಿ ದೊರೆಯಲಿದೆ.

ವಿನಾಯಿತಿ ಪಡೆಯಲು ಇಲ್ಲಿ ಇನ್ನೊಂದು ಷರತ್ತಿದೆ. ಅದೇನೆಂದರೆ, ಪ್ರತಿ ತಿಂಗಳು ಆದಾಯದಿಂದ ತೆರಿಗೆ ಕಡಿತ ಆಗಿರುವ ಬಗ್ಗೆ ಉದ್ಯೋಗದಾತನಿಂದ ಫಾರ್ಮ್ 16ರಲ್ಲಿ ಸರ್ಟಿಫಿಕೇಟ್ ಪಡೆದಿರಬೇಕು. ಹಾಗೆಯೆ, ಬ್ಯಾಂಕ್ ಡೆಪಾಸಿಟ್ ನಿಂದ ಸಿಗುವ ಗಳಿಕೆಯ ಬಗ್ಗೆ ಉದ್ಯೋಗದಾತನಿಗೆ ವರದಿ ಸಲ್ಲಿಸಿರಬೇಕು.

ರಿಟರ್ನ್ಸ್ ಎಲ್ಲಿ ಸಲ್ಲಿಸಬೇಕು? : ಯಾರು ಬೇಕಾದರೂ ಆನ್‌ಲೈನ್ ಮುಖಾಂತರ ಐಟಿ ರಿಟರ್ನ್ಸ್ ಸಲ್ಲಿಸಬಹುದಾಗಿದೆ. ಕರ್ನಾಟಕದ ಆದಾಯ ತೆರಿಗೆ ಪಾವತಿದಾರರಿಗೆ ಇಲ್ಲಿ ಸಂಪೂರ್ಣ ವಿವರ ನೀಡಲಾಗಿದೆ. ಐಟಿ ರಿಟರ್ನ್ ಫಾರ್ಮ್ ಎಲ್ಲಿ ಪಡೆಯಬಹುದು, ಹೇಗೆ ತುಂಬುವುದು, ಯಾವ ವಿಳಾಸಕ್ಕೆ ಕಳಿಸಬೇಕು ಎಂಬಿತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ. ಆದಾಯ ತೆರಿಗೆ ಪಾವತಿಸುವುದನ್ನು ಮರೆಯಬೇಡಿ. ಮರೆತರೆ ಮಹಾಲಕ್ಷ್ಮಿ ವರ ನೀಡಲಾರಳು!

English summary

Is your salary less than 5 lakh? | No need to file IT returns | 5 ಲಕ್ಷಕ್ಕಿಂತ ಕಡಿಮೆ ಆದಾಯ? ಐಟಿ ರಿಟರ್ನ್ಸ್ ಸಲ್ಲಿಸಬೇಡಿ

Is your salary less than Rs. 5 lakh? Then, there is no need to file IT returns from this financial year. Finance ministry announced about this exemption on July 20, 2012, Friday. Few more tips about who has to and where to file IT returns.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X