Thought for the day
Your page will load in ...
Close Ad X
Advertisement

ಗೋಳಾಟ ಬಿಡಿ ಐಡಿಬಿಐ ಗೋಲ್ಡ್ ಫಂಡ್ ನಲ್ಲಿ ಹೂಡಿ

Posted by:
     Updated: Thursday, July 26, 2012, 18:00 [IST]

Idbi Mutual Fund Launches Idbi Gold Fund
 

ಐಡಿಬಿಐ ಸಂಸ್ಥೆ ಗೋಲ್ಡ್ ಫಂಡ್ ಹೆಸರಿನಲ್ಲಿ ಹೊಸ ಮ್ಯೂಚುವಲ್ ಫಂಡ್ ಯೋಜನೆಯನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಈ ಯೋಜನೆಯ ನಿರಂತರ ಮಾರಾಟ ಹಾಗೂ ಖರೀದಿ ಆಗಸ್ಟ್ 23, 2012ರ ತನಕ ನಡೆಯಲಿದೆ.

ಬಂಡವಾಳ ಹೂಡಿಕೆ ಉದ್ದೇಶ: ಪ್ರಗತಿಯ ಉದ್ದೇಶ ಹೊಂದಿರುವ ಈ ಯೋಜನೆಯಿಂದ ಹೂಡಿಕೆದಾರರಿಗೆ ಐಡಿಬಿಐ ಗೋಲ್ಡ್ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್(IDBI ಗೋಲ್ಡ್ ETF) ಮೂಲಕ ರಿಟರ್ನ್ಸ್ ಸಿಗಲಿದೆ. ಈ ಯೋಜನೆಯ ಮೂಲಕ ನಿಗದಿತ NFO ಅವಧಿಯಲ್ಲಿ ಸುಮಾರು 10 ಕೋಟಿ ರು ಚಂದಾದಾರರ ಮೊತ್ತ ಸಂಗ್ರಹದ ಗುರಿಯನ್ನು ಐಡಿಬಿಐ ಹೊಂದಿದೆ.

ನಿಧಿ ಹಂಚಿಕೆ: ಈ ಯೋಜನೆಯ ಶೇ 95 ರಿಂದ ಶೇ 100 ರಷ್ಟು ನಿಧಿಯನ್ನು ಗೋಲ್ಡ್ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ನ ಯೂನಿಟ್ ನಲ್ಲಿ ಹೂಡಲಾಗುವುದು. ಇನ್ನೊಂದೆಡೆ ಶೇ 5 ರಷ್ಟು ನಿಧಿಯನ್ನು ರಿವರ್ಸ್ ರೆಪೊ/ ಕಡಿಮೆ ಅವಧಿ ನಿಶ್ಚಿತ ಠೇವಣಿ/ ಹಣಕಾಸು ಮಾರುಕಟ್ಟೆ ಹಾಗೂ ಐಡಿಬಿಐನ ಲಿಕ್ವಿಡ್ ಸ್ಕೀಮ್ ಗಳಲ್ಲಿ ತೊಡಗಿಸಲಾಗುವುದು.

ಈ ಯೋಜನೆಗಳು ಮಾಸಿಕ ಹಾಗೂ ತ್ರೈಮಾಸಿಕ ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್(SIP) ಹೊಂದಿದೆ. ಮಾಸಿಕ SIP ಮಾದರಿ ಅರ್ಜಿಯ ಕನಿಷ್ಥ ಬೆಲೆ 500 ರು ಪ್ರತಿ 12 ತಿಂಗಳಿಗೆ ಅಥವಾ 1000 ರು ಕನಿಷ್ಠ ಬೆಲೆ ಪ್ರತಿ ಆರು ತಿಂಗಳಿನ ದರದಲ್ಲಿ ದೊರೆಯಲಿದೆ.

ತ್ರೈಮಾಸಿಕ ಮಾದರಿ SIP ಅರ್ಜಿಯ ಅರ್ಜಿ ಶುಲ್ಕ 1500 ರು ಪ್ರತಿ ತ್ರೈಮಾಸಿಕ ಕನಿಷ್ಠ ನಾಲ್ಕು ತ್ರೈಮಾಸಿಕ ಅವಧಿಗೆ.

ಈ ಗೋಲ್ಡ್ ಫಂಡ್ ಯೋಜನೆಗೆ ಯಾವುದೇ ಆರಂಭಿಕ ಶುಲ್ಕ ಇರುವುದಿಲ್ಲ. ನಿರ್ಗಮನ ಶುಲ್ಕಗಳಲ್ಲಿ 12 ತಿಂಗಳೊಳಗೆ ಸ್ಕೀಮ್ ನಿಂದ ಹೊರಬಿದ್ದರೆ ಯೋಜನೆ ಮಂಜೂರಾದ ದಿನಾಂಕದಿಂದ ಅನ್ವಯವಾಗುವಮ್ತೆ ಶೇ 1 ರಷ್ಟು ಶುಲ್ಕ ವಿಧಿಸಲಾಗುತ್ತದೆ.

ಸ್ಥಳೀಯ ಮಾರುಕಟ್ಟೆಯ ಚಿನ್ನದ ಬೆಲೆಯನ್ನು ಆಧಾರಿಸಿ ವ್ಯವಹಾರ ನಡೆಸಲಾಗುತ್ತದೆ ಎಂದು ಯೋಜನೆಯ ವ್ಯವಸ್ಥಾಪಕ ವಿ ಬಾಲಸುಬ್ರಮಣ್ಯಂ ಹೇಳಿದ್ದಾರೆ.

ಮುಖ್ಯ ಮಾಹಿತಿ:
NFO ಆರಂಭ : ಜುಲೈ 25, 2012
NFO ಮುಕ್ತಾಯ : ಆಗಸ್ಟ್ 8, 2012
NFO: 10 ರು ಪ್ರತಿ ಯೂನಿಟ್ ಗೆ
ಕನಿಷ್ಠ ಅರ್ಜಿ ಶುಲ್ಕ: 5000 ರು ಹಾಗೂ ನಂತರ 10 ರ ಹತ್ತರ ಗುಣಕದಂತೆ ಲೆಕ್ಕಚಾರ
ವ್ಯವಸ್ಥಾಪಕ: ವಿ ಬಾಲಸುಬ್ರಮಣ್ಯಂ

(ಗುಡ್ ರಿಟರ್ನ್ಸ್.ಇನ್)

Story first published:  Monday, July 23, 2012, 17:33 [IST]
English summary
IDBI Mutual Fund has launched a new fund named as IDBI Gold Fund, an open ended fund of funds scheme. The scheme re-opens for continuous sale and repurchase from 23 August 2012.
ಅಭಿಪ್ರಾಯ ಬರೆಯಿರಿ
Click here to type in Kannada