Thought for the day
Your page will load in ...
Close Ad X
Advertisement
Englishहिन्दी മലയാളം தமிழ் తెలుగు
 
Share This Story

ಕ್ರೆಡಿಟ್ ಕಾರ್ಡ್ ಬೇಕೆ? ಆನ್ ಲೈನ್ ನಲ್ಲೇ ಅಪ್ಲೈ ಮಾಡಿ

Posted by:
Updated: Tuesday, September 25, 2012, 10:18 [IST]

Sbi Credit Cards Online Click2card Application

ಬೆಂಗಳೂರು, ಆ.29 : ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆ ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರ ಆಯ್ಕೆ ಗೊಂದಲಕ್ಕೆ ಪರಿಹಾರ ಕಂಡುಕೊಂಡಿದೆ. ಕ್ರೆಡಿಟ್ ಕಾರ್ಡ್ ಹೊಂದಲು ಬಯಸುವ ಗ್ರಾಹಕರಿಗೆ ಅನುಕೂಲವಾಗುವಂತೆ ಆನ್ ಲೈನ್ ಮೂಲಕ ಕಾರ್ಡ್ ಪ್ರಕ್ರಿಯೆ ಆರಂಭಿಸುವ ಕ್ಲಿಕ್2ಕಾರ್ಡ್ ಅಪ್ಲಿಕೇಷನ್ ಅನ್ನು ಎಸ್ ಬಿಐ ಆರಂಭಿಸಿದೆ.

ಕ್ರೆಡಿಟ್ ಕಾರ್ಡ್ ತಗೊಳ್ಳಿ ಎಂದು ನಿಮ್ಮ ಮೊಬೈಲ್ ಗೆ ಕರೆ ಬಂದಾಗ ಸರಿಯಾಗಿ ಮಾಹಿತಿ ದೊರೆಯದೆ ಅವಕಾಶ ತಪ್ಪಿಸಿಕೊಳ್ಳುವ ಗ್ರಾಹಕರಿಗೆ ಆನ್ ಲೈನ್ ಮೂಲಕ ಹೊಸ ಸೌಲಭ್ಯವನ್ನು ಎಸ್ ಬಿಐ ನೀಡುತ್ತಿದೆ.

'ಭಾರತದಲ್ಲಿ ಇಂಟರ್ ನೆಟ್ ಹಾಗೂ ಇ ಕಾಮರ್ಸ್ ಬೆಳೆಯುತ್ತಿದ್ದು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸೇವೆ ಒದಗಿಸುವ ಅಗತ್ಯತೆ ಇದೆ. ಹಲವು ಗ್ರಾಹಕರು ತಮ್ಮ ಫೈನಾನ್ಸ್ ಉತ್ಪನ್ನಗಳನ್ನು ಆನ್ ಲೈನ್ ನಲ್ಲಿ ನೋಡಬಯಸುತ್ತಾರೆ. ಇಂಥ ಗ್ರಾಹಕರನ್ನು ಗುರಿಯಾಗಿಟ್ಟುಕೊಂಡು ಈ ಅಪ್ಲಿಕೇಷನ್ ಆರಂಭಿಸಲಾಗಿದೆ 'ಎಂದು ಎಸ್ ಬಿಐ ಕಾರ್ಡ್ಸ್ ಹಾಗೂ ಪೇಮೆಂಟ್ ಸರ್ವೀಸರ್ ಪ್ರೈ.ಲೀ ನ ಸಿಇಒ ಕಡಾಂಬಿ ನರಹರಿ ಹೇಳಿದ್ದಾರೆ.


ಇಂಟರ್ ನೆಟ್ ಬಳಕೆ ಮಾಡುವ ಗ್ರಾಹಕರಿಗೆ ಅತಿ ಹೆಚ್ಚು ಅನುಕೂಲವಾಗುವ ಈ ಅಪ್ಲಿಕೇಷನ್ ಭಾರತದಾದ್ಯಂತ ಲಭ್ಯವಿರುತ್ತದೆ. Click2Card ಮೂಲಕ ಗ್ರಾಹಕರು ತಮ್ಮ ದಾಖಲೆಗಳನ್ನು ನಮೂದಿಸಿ ಅಗತ್ಯವಾದ ಮಾಹಿತಿಯನ್ನು ಪಡೆಯಬಹುದು.

ವೆಬ್ ಮೂಲಕ ಗ್ರಾಹಕ ನೀಡುವ ಮಾಹಿತಿ ಗೌಪ್ಯ ಹಾಗೂ ಸುರಕ್ಷಿತವಾಗಿರುತ್ತದೆ. ಗ್ರಾಹಕರು ತಮ್ಮ ಇಷ್ಟವಾದ ಕ್ರೆಡಿಟ್ ಕಾರ್ಡ್ ಯೋಜನೆಗೆ ಹೆಸರು ನೋಂದಾಯಿಸಬಹುದು.

ಗ್ರಾಹಕರ ಸಾಲ ಪಡೆಯುವಿಕೆ/ಹಿಂತಿರುಗಿಸುವಿಕೆ ಪೂರ್ವ ಇತಿಹಾಸ ಪರಿಗಣಿಸಿ ಕ್ರೆಡಿಟ್ ಕಾರ್ಡ್ ಅರ್ಜಿ ಸ್ವೀಕರಿಸಲಾಗುತ್ತದೆ. ಗ್ರಾಹಕರು ನೀಡಿದ ಮಾಹಿತಿ ಸೂಕ್ತವಾಗಿದ್ದರೆ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ. ಹಾಗೂ ಗ್ರಾಹಕರಿಗೆ ಬೇಕಾದ ಸೂಕ್ತ ಸಲಹೆಗಳು ಆನ್ ಲೈನ್ ನಲ್ಲೇ ಲಭ್ಯವಿರುತ್ತದೆ ಎಂದು ನರಹರಿ ಹೇಳಿದರು.

Story first published:  Wednesday, August 29, 2012, 17:51 [IST]
English summary
State Bank of India Cards has launched its online application service Click2Card. The customer can select a credit card from the choices offered. The interactive platform intuitively advises applicants on the credit card best suited for their lifestyle.
ಅಭಿಪ್ರಾಯ ಬರೆಯಿರಿ
Click here to type in Kannada
Company Search
Enter the first few characters of the company's name or the NSE symbol or BSE code and click 'Go'
Goodreturns iPad App
Goodreturns iPad App
Download GoodReturns iPad App and enjoy it. Learn more about Oneindia GoodReturns on the App Store.
Download Goodreturns iPad App