For Quick Alerts
ALLOW NOTIFICATIONS  
For Daily Alerts

ಡಾಲರ್ ಎದುರು ದಾಖಲೆ ಕುಸಿದ ಕಂಡ ರುಪಾಯಿ

By Mahesh
|

ಮುಂಬೈ, ಜೂ.10: 'ಯುಎಸ್ ಡಾಲರ್ ಎದುರು ರುಪಾಯಿ ಕುಸಿತ ಕಂಡರೆ ಸಾಫ್ಟ್ ವೇರ್ ಉದ್ಯೋಗಿಗಳಿಗೆ ಬಲು ಖುಷಿ, ದೇಶದ ಆರ್ಥಿಕ ತಜ್ಞರಿಗೆ ತಲೆಬಿಸಿ' ಎಂಬ ಟ್ವೀಟ್ ತಮಾಷೆಯಾಗಿ ಹರಿದಾಡಿದರೂ ಇದು ಸೋಮವಾರ(ಜೂ.10) ನುಂಗಲಾರದ ಸತ್ಯವಾಗಿತ್ತು.

ಅಮೆರಿಕದ ಡಾಲರ್ ಎದುರು ರುಪಾಯಿ ದಾಖಲೆಯ ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳಗ್ಗೆ ವಹಿವಾಟು ಆರಂಭದಲ್ಲೇ ಡಾಲರ್ ಎದುರು ರುಪಾಯಿ ಮೌಲ್ಯ 48 ಪೈಸೆಯಷ್ಟು ಇಳಿಕೆಯಾಗಿ 57.54ಕ್ಕೆ ಕುಸಿಯಿತು. ಅದರೆ, ಚೇತರಿಕೆ ಕಾಣಿಸಿಕೊಳ್ಳುವ ಲಕ್ಷಣ ಕಂಡು ಬರಲಿಲ್ಲ.

 

ಡಾಲರ್ ಬೇಡಿಕೆ ಹೆಚ್ಚಾಗಿದ್ದು, ಸಾಗರೋತ್ತರ ಕರೆನ್ಸಿ ಎದುರು ಡಾಲರ್ ಮೌಲ್ಯ ಚೇತರಿಕೆ ಕಂಡಿದ್ದು ರುಪಾಯಿ ಕುಸಿತಕ್ಕೆ ಕಾರಣವಾಯಿತು. ಯುರೋ ಎದುರು ಡಾಲರ್ ಸ್ಥಿರವಾಗಿದ್ದೆ ತಡ ಆಮದುದಾರರು ಡಾಲರ್ ಬೇಡಿಕೆ ಮುಗಿಬಿದ್ದರು ಅಲ್ಲಿಗೆ ರುಪಾಯಿ ಸ್ಥಿತಿ ಅಧೋಗತಿಗೆ ಇಳಿಯಿತು.

 

ಶುಕ್ರವಾರ ಡಾಲರ್ ಎದುರು 57.06ಕ್ಕೆ ಕುಸಿದಿದ್ದ ರುಪಾಯಿ ಇಂದು 57.94(ದಿನದ ಅಂತ್ಯಕ್ಕೆ 58 ರ ಗಡಿ ದಾಟಿದೆ) ರಷ್ಟು ಕುಸಿದು ಆಘಾತ ಮೂಡಿಸಿತು. ಚಾಲ್ತಿ ಖಾತೆ ವಿತ್ತೀಯ ಕೊರತೆ ಹಾಗೂ ಅಂತಾರಾಷ್ಟ್ರೀಯವಾಗಿ ಡಾಲರ್ ಸ್ಥಿತಿ ಸುಧಾರಿಸಿದ್ದು ಇದಕ್ಕೆ ಕಾರಣ.

ಆದರೆ, ರುಪಾಯಿ ಕುಸಿತದಿಂದ ಮಾರುಕಟ್ಟೆದಾರರು ಕಂಗಾಲಾಗುವುದು ಬೇಡ. ರುಪಾಯಿ ಸಮಸ್ಥಿತಿಗೆ ಮರಳಿದೆ ಎಂದು ವಿತ್ತ ಸಚಿವಾಲಯ ಪ್ರತಿಕ್ರಿಯಿಸಿದೆ. ಆದರೆ, 84 ಪೈಸೆ ಕಳೆದುಕೊಂಡಿರುವ ರುಪಾಯಿ ಏರಿಕೆ ಕಾಣುವ ಲಕ್ಷಣಗಳು ಕಾಣುತ್ತಿಲ್ಲ.

ಕಳೆದ ಅಕ್ಟೋಬರ್ -ಡಿಸೆಂಬರ್ 2012-13 ಅವಧಿಯಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಅಥವಾ ಜಿಡಿಪಿಯ ಚಾಲ್ತಿ ಖಾತೆ ಕೊರತೆ ಶೇ 6.7 ರಷ್ಟು ಕುಸಿದಿತ್ತು. ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ತಗ್ಗಿಸುವ ಪ್ರಯತ್ನಗಳೂ ನಿರೀಕ್ಷಿತ ಫಲ ನೀಡಿಲ್ಲ.

ವಿತ್ತೀಯಕೊರತೆ ನೀಗಿಸಲು ಚಿನ್ನದ ಆಮದು ಮೇಲೆ ನಿಯಂತ್ರಣ ಸಾಧಿಸಲೇ ಬೇಕಾಗಿದೆ. ವಿತ್ತೀಯ ಕೊರತೆ ಹೆಚ್ಚಿದ್ದಂತೆ ದೇಶದ ವಿದೇಶಿ ವಿನಿಯಮಕ್ಕೆ ಹೊಡೆತ ಬೀಳುತ್ತದೆ. ರುಪಾಯಿ ಮೌಲ್ಯ ವ್ಯತ್ಯಯವಾಗಲಿದೆ ಎಂದು ಚಿದಂಬರಂ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary

Rupee hits record low of 58 against dollar | ಡಾಲರ್ ಎದುರು ದಾಖಲೆ ಕುಸಿದ ಕಂಡ ರುಪಾಯಿ

The Indian rupee slumped to a record low of 58.160 against the dollar Monday on escalating worries over current account deficit and firming of the US currency globally. The government, however, said there was no cause for alarm and the currency would soon find its stable level.
Story first published: Monday, June 10, 2013, 18:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X