For Quick Alerts
ALLOW NOTIFICATIONS  
For Daily Alerts

ರುಪಾಯಿ ಕುಸಿತ: ದುಬಾರಿಯಾದ 5 ಫಾರೀನ್ ಐಟಂಗಳು

By Mahesh
|

ಕಳೆದ ತಿಂಗಳಿಗೆ ಹೋಲಿಸಿದರೆ ರುಪಾಯಿ ಮೌಲ್ಯ ಶೇ 10 ರಷ್ಟು ಕುಸಿದಿದೆ. 60 ರ ಗಡಿಯ ಹತ್ತಿರ ಸುಳಿದಾಡುತ್ತಿರುವ ರುಪಾಯಿಯ ಸರ್ವಕಾಲಿಕ ಪತನದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಪ್ರಮುಖವಾಗಿ ರುಪಾಯಿ ಮೌಲ್ಯ ಕುಸಿತ ನೇರ ಪರಿಣಾಮದಿಂದ 5 ಪ್ರಮುಖ ಅಂಶಗಳನ್ನು ಮರೆಯಬೇಕಾಗುತ್ತದೆ. ಅದು ಯಾವುದು?

ರುಪಾಯಿ ಮೌಲ್ಯ ಕುಸಿತ, ವಿತ್ತೀಯ ಕೊರತೆ ನೀಗಿಸಲು ಕೆಲವು ಕ್ರಮಗಳನ್ನು ಈಗಾಗಲೆ ತೆಗೆದುಕೊಳ್ಳಲಾಗಿದೆ. ಚಂದ್ರಶೇಖರ್ ಸಮಿತಿ ವರದಿ ಆಧಾರದ ಮೇಲೆ ಸೆಬಿ ನೀಡಿರುವ ಅಗತ್ಯ ಕ್ರಮಗಳನ್ನು ಪಾಲಿಸಲು ಮಾರ್ಗ ಸೂಚಿ ಸಿದ್ದವಾಗಿದೆ. ಅನಿಲ ದರ, ಎಫ್ ಡಿಐ ಮಿತಿ, ಕಲ್ಲಿದಲು ಗೊಂದಲ ಜೂನ್ ಅಂತ್ಯಕ್ಕೆ ಕೊನೆಗೊಳ್ಳಲಿದೆ ಎಂದು ವಿತ್ತ ಸಚಿವ ಚಿದಂಬರಂ ಭರವಸೆ ನೀಡಿದ್ದಾರೆ.

ಆದರೆ, ಡಾಲರ್ ಎದುರು ರುಪಾಯಿ ಮೌಲ್ಯ ಕುಸಿದರೆ ಜನಸಾಮಾನ್ಯರಿಗೇನು ಏನು ತೊಂದರೆ? ರುಪಾಯಿ ಮೌಲ್ಯ ಕುಸಿದರೆ ಯಾವ ರೀತಿ ಹೊರೆ ಎದುರಿಸಬೇಕಾಗುತ್ತದೆ? ಯುಪಿಎ ಸರ್ಕಾರ ಬೆಲೆ ಏರಿಕೆ ಬಾಂಬ್ ಮತ್ತೆ ಸ್ಫೋಟಗೊಳ್ಳುತ್ತದೆಯೇ? ಪೆಟ್ರೋಲ್, ಡೀಸೆಲ್, ಆಹಾರ, ಚಿನ್ನ, ಕೊನೆಗೆ ಬ್ಯಾಂಕ್ ಸಾಲದ ಮೇಲೆ ರುಪಾಯಿ ಮೌಲ್ಯ ಕುಸಿತ ನೇರ ಪರಿಣಾಮ ಬೀರಲಿದೆ. ಇದರ ಜೊತೆ ಇನ್ನಷ್ಟು ಅಂಶಗಳತ್ತ ತಪ್ಪದೇ ಗಮನ ಹರಿಸಬೇಕಿದೆ ಯಾವುದು ಇಲ್ಲಿದೆ ನೋಡಿ..

ವಿದೇಶಿ ಪ್ರವಾಸ

ವಿದೇಶಿ ಪ್ರವಾಸ

100 ಡಾಲರ್ ಇಟ್ಟುಕೊಂಡು ವಿದೇಶಕ್ಕೆ ಅದರಲ್ಲೂ ಅಮೆರಿಕ ಪ್ರವಾಸ ಮುಗಿಸುವ ಕನಸು ಈಗ ಕನಸಾಗೇ ಉಳಿಯಲಿದೆ. ಐದಾರು ಸಾವಿರ ರುಗಳಲ್ಲಿ ಏನು ಸಿಗುವುದಿಲ್ಲ. ಇನ್ನೂ 100 ಡಾಲರ್ ಹೆಚ್ಚಿನ ಹಣ ಪಾವತಿಸಿದರೆ ಹಾಲಿಡೇ ಗೆ ಹೋಗಬಹುದು. ರುಪಾಯಿ ಕುಸಿದರೆ ಪ್ರವಾಸ ಕೂಡಾ ಪ್ರಯಾಸವಾಗಲಿದೆ.

ವಿದೇಶದಲ್ಲಿ ವ್ಯಾಸಂಗ

ವಿದೇಶದಲ್ಲಿ ವ್ಯಾಸಂಗ

ಅಮೆರಿಕ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವವರಿಗೆ ರುಪಾಯಿ ಕುಸಿತ ಇನ್ನಷ್ಟು ಜೇಬಿಗೆ ಕತ್ತರಿ ಹಾಕಲಿದೆ. ಸುಮಾರು ಶೇ 10 ರಷ್ಟು ಹೆಚ್ಚಿನ ಪ್ರಮಾಣದ ಶುಲ್ಕ ಪಾವತಿಸಬೇಕಾಗುತ್ತದೆ. 100,000 ಡಾಲರ್ ಅಥವಾ 45 ಲಕ್ಷದಲ್ಲಿ ಮಕ್ಕಳ ವಿದ್ಯಾಭ್ಯಾಸ ಕನಸು ಈಗ $100,000 ಅಥವಾ 60 ಲಕ್ಷ ರು ಇದ್ದರೂ ಸಾಲುವುದಿಲ್ಲ.

ಇಂಧನ ದರ ಏರಿಕೆ
 

ಇಂಧನ ದರ ಏರಿಕೆ

ಅಂತಾರಾಷ್ತ್ರೀಯ ಮಾರುಕಟ್ಟೆಯಿಂದ ಪೆಟ್ರೋಲ್, ಡೀಸೆಲ್ ಆಮದು ಮಾಡಿಕೊಳ್ಳುವ ಭಾರತಕ್ಕೆ ರುಪಾಯಿ ಕುಸಿತದಿಂದ ಇಂಧನ ದರ ಏರಿಕೆ ಅನಿವಾರ್ಯವಾಗಿದೆ. ಇದು ಪರೋಕ್ಷವಾಗಿ ಆಹಾರ ಉತ್ಪನ್ನ, ತರಕಾರಿ ಬೆಲೆ ಏರಿಕೆಗೆ ಕಾರಣವಾಗಲಿದೆ.

ಫಾರೀನ್ ಮಾಲು ದುಬಾರಿ

ಫಾರೀನ್ ಮಾಲು ದುಬಾರಿ

ರುಪಾಯಿ ಅಪಮೌಲ್ಯದಿಂದ ಆಹಾರ ಉತ್ಪನ್ನಗಳು ಶೇ 20 ರಷ್ಟು ಏರಿಕೆಯಾಗುವ ಸಂಭವವಿದೆ. ಇದರ ಜೊತೆಗೆ ಆಹಾರ ಪದಾರ್ಥ ಆಮದು ಮಾಡಿಕೊಂಡರೂ ಅಥವಾ ಎಲೆಕ್ಟ್ರಾನಿಕ್ ವಸ್ತು ಸೇರಿ ಯಾವುದೇ ಉತ್ಪನ್ನ ಆಮದು ಮಾಡಿಕೊಂಡರೂ ಎಲ್ಲವೂ ದುಬಾರಿಯಾಗಲಿದೆ.

ಚಿನ್ನ ದುಬಾರಿ

ಚಿನ್ನ ದುಬಾರಿ

ಭಾರತದಲ್ಲಿ ಆಮದು ಚಿನ್ನದ ಖರೀದಿ ಮೇಲೆ ಹೆಚ್ಚಿನ ಸುಂಕ ಇರುವುದು ಗೊತ್ತೇ ಇದೆ. ಈಗ ರುಪಾಯಿ ಅಪಮೌಲ್ಯದ ಜೊತೆಗೆ ಅಮದು ಸುಂಕ ಹೆಚ್ಚಳ ಸೇರಿ ಆಮದು ಚಿನ್ನದ ದರ ಶೇ 10 ರಷ್ಟಾದರೂ ಅಧಿಕವಾಗಲಿದೆ. ಡಾಲರ್ ವಿರುದ್ಧ ರುಪಾಯಿ ಹೀಗೆ ಮುಂದುವರೆದರೆ ಚಿನ್ನ ಆಮದು ಮರೆಯಬೇಕಾಗುತ್ತದೆ

English summary

5 things that have become more expensive since the rupee dropped | ರುಪಾಯಿ ಕುಸಿತ: 5 ಅಂಶಗಳ ಬಗ್ಗೆ ಗಮನವಿಡಿ

The rupee has plunged almost 10 per cent in the last one month and is now set to breach the 60 level against the dollar. Here are 5 things that have become more expensive since the rupee fall.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X