For Quick Alerts
ALLOW NOTIFICATIONS  
For Daily Alerts

60ರ ಗಡಿ ಮುಟ್ಟಿದ ರುಪಾಯಿ, ಬೆಲೆ ಏರಿಕೆ ನಿಶ್ಚಿತ

By Mahesh
|

ಬೆಂಗಳೂರು, ಜೂ.26: ಡಾಲರ್ ಎದುರು ರುಪಾಯಿ ಮೌಲ್ಯ ಮತ್ತೊಮ್ಮೆ ಭಾರಿ ಕುಸಿತ ಕಂಡಿದೆ. ಬುಧವಾರ ಪ್ರತಿ ಡಾಲರ್ ಗೆ 60ರ ಗಡಿ ದಾಟಿದೆ. ದೇಶದ ಷೇರುಮಾರುಕಟ್ಟೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರುಪಾಯಿ ಮೌಲ್ಯ ಇಷ್ಟು ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಷೇರುದಾರರಲ್ಲಿ ಆತಂಕವನ್ನುಂಟು ಮಾಡಿದೆ. ಇದರ ಜೊತೆಗೆ ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ಖಾತ್ರಿಯಾಗಿದೆ.

ಮಂಗಳವಾರ ಡಾಲರ್ ಎದುರು 59.67 ಗಡಿ ಮುಟ್ಟಿದ್ದ ರುಪಾಯಿ ಜೂ.20 ರಂದು 59.98 ತನಕ ಸಾಗಿ 60 ರ ಗಡಿ ಮುಟ್ಟುವ ಸೂಚನೆ ನೀಡಿತ್ತ್ತು. ಈಗ ಪ್ರತಿ ಡಾಲರ್ ಗೆ 61 ಪೈಸೆ ದಾಟುವ ಭಯವೂ ಇದೆ. ವಿದೇಶಿ ಹೂಡಿಕೆದಾರರು, ವಿತ್ತೀಯ ಕೊರತೆ, ಸಾಲ ಮಾರುಕಟ್ಟೆ ವ್ಯತ್ಯಯ ಹೀಗೆ ಮುಂದುವರೆಯುವ ಲಕ್ಷಣಗಳಿವೆ. ಫಾರೀನ್ ಐಟಂಗಳತ್ತ ಭಾರತೀಯರು ಕಣ್ಣು ಹಾಕದಿದ್ದರೆ ವಾಸಿ ಏಕೆ? ಇಲ್ಲಿದೆ ಉತ್ತರ ಓದಿ

ಕಳೆದ ಹಲವು ದಿನಗಳಿಂದ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಕಂಡಿದ್ದು, ಇದರ ಹೊಡೆತ ಷೇರುಮಾರುಕಟ್ಟೆ ಮೇಲೂ ಆಗಿದೆ. ಅಮೆರಿಕದ ಡಾಲರ್ ಎದುರು ಭಾರತೀಯ ರುಪಾಯಿ ಮೌಲ್ಯ ಕುಸಿದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಡಾಲರಿಗೆ 60.62 ಪೈಸೆಗೆ ತಲುಪಿದೆ.

ಡಾಲರ್ ಬೇಡಿಕೆ ಹೆಚ್ಚಾಗಿದ್ದು, ಕರೆನ್ಸಿ ಎದುರು ಡಾಲರ್ ಮೌಲ್ಯದಲ್ಲಿ ಚೇತರಿಕೆ ಕಂಡಿದ್ದು, ರುಪಾಯಿ ಮೌಲ್ಯ ಮತ್ತಷ್ಟು ಕುಸಿಯಲು ಕಾರಣವಾಯಿತು. ಯುಎಸ್ ರಿಸರ್ವ್ ಚೇರ್ಮನ ಬೆನಾಂರ್ಕೆ ಪ್ರಕಾರ, ಭಾರತದಲ್ಲಿನ ಈಕ್ವಿಟಿ ಹಾಗೂ ವಿದೇಶಿ ಬಾಂಡ್ ಮಾರಾಟ ಅಧಿಕವಾಗಲಿದೆ. ಇದರಿಂದ ಡಾಲರ್ ಬೇಡಿಕೆ ಹೀಗೆ ಮುಂದುವರೆಯುವುದರಿಂದ ರುಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.

ಡಾಲರ್ ಬೇಡಿಕೆ ಹೆಚ್ಚಾಗಿದ್ದು, ಸಾಗರೋತ್ತರ ಕರೆನ್ಸಿ ಎದುರು ಡಾಲರ್ ಮೌಲ್ಯ ಚೇತರಿಕೆ ಕಂಡಿದ್ದು ರುಪಾಯಿ ಕುಸಿತಕ್ಕೆ ಕಾರಣವಾಯಿತು. ಯುರೋ ಎದುರು ಡಾಲರ್ ಸ್ಥಿರವಾಗಿದ್ದೆ ತಡ ಆಮದುದಾರರು ಡಾಲರ್ ಬೇಡಿಕೆ ಮುಗಿಬಿದ್ದರು ಅಲ್ಲಿಗೆ ರುಪಾಯಿ ಸ್ಥಿತಿ ಅಧೋಗತಿಗೆ ಇಳಿಯಿತು.

ವಿತ್ತೀಯಕೊರತೆ ನೀಗಿಸಲು ಚಿನ್ನದ ಆಮದು ಮೇಲೆ ನಿಯಂತ್ರಣ ಸಾಧಿಸಲೇ ಬೇಕಾಗಿದೆ. ವಿತ್ತೀಯ ಕೊರತೆ ಹೆಚ್ಚಿದ್ದಂತೆ ದೇಶದ ವಿದೇಶಿ ವಿನಿಯಮಕ್ಕೆ ಹೊಡೆತ ಬೀಳುತ್ತದೆ. ರುಪಾಯಿ ಮೌಲ್ಯ ವ್ಯತ್ಯಯವಾಗಲಿದೆ ಎಂದು ಚಿದಂಬರಂ ಹೇಳಿದ್ದರು.

ಆದರೆ, ಯಾವುದೇ ಕ್ರಮಗಳು ರುಪಾಯಿ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗಿಲ್ಲ. ಯುಪಿಎ ಸರ್ಕಾರ ಬೆಲೆ ಏರಿಕೆ ಬಾಂಬ್ ಮತ್ತೆ ಯಾವಾಗ ಸ್ಫೋಟಗೊಳ್ಳುತ್ತದೆ ಎಂಬುದು ಜನ ಸಾಮಾನ್ಯರನ್ನು ಕಾಡುತ್ತಿದೆ. ಪೆಟ್ರೋಲ್, ಡೀಸೆಲ್, ಆಹಾರ, ಚಿನ್ನ, ಕೊನೆಗೆ ಬ್ಯಾಂಕ್ ಸಾಲದ ಮೇಲೆ ರುಪಾಯಿ ಮೌಲ್ಯ ಕುಸಿತ ನೇರ ಪರಿಣಾಮ ಬೀರಲಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ಓದಿ

English summary

Rupee slips below 60 against dollar; hits new record low | 60ರ ಗಡಿ ಮುಟ್ಟಿದ ರುಪಾಯಿ, ಬೆಲೆ ಏರಿಕೆ ನಿಶ್ಚಿತ

The Indian rupee hit another record low on Wednesday and slipped the psychological resistance level of 60 against a dollar, due to high month-end demands for the US currency by importers and sustained outflow of money.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X