For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್ ಮೇಲೆ ತೆರಿಗೆ ಹೊರೆ ಇಲ್ಲ!

By Mahesh
|

ನವದೆಹಲಿ, ಜು.21: ದೀರ್ಘಕಾಲಿಕ ಮ್ಯೂಚುವಲ್ ಫಂಡ್ ಗಳ ಮೇಲೆ ಶೇ 20ರಷ್ಟು ಕ್ಯಾಪಿಟಲ್ ಗೇನ್ ಟ್ಯಾಕ್ಸ್ ವಿಧಿಸಲು ಸರ್ಕಾರ ಸಲ್ಲಿಸಿದ್ದ ಪ್ರಸ್ತಾಪನೆಯನ್ನು ಹಿಂಪಡೆಯಲು ವಿತ್ತ ಸಚಿವಾಲಯ ನಿರ್ಧರಿಸಿದೆ.

 

ಕೇಂದ್ರ ಮುಂಗಡ ಪತ್ರದಲ್ಲಿ ವಿಧಿಸಲಾಗಿದ್ದ ಶೇ.20ರಷ್ಟು ಕ್ಯಾಪಿಟಲ್ ಗೈನ್ ಟ್ಯಾಕ್ಸ್ ಪ್ರಸ್ತಾಪ ಹಿಂಪಡೆಯಲು ಕೇಂದ್ರ ಸರ್ಕಾರ ಹಿಂಪಡೆಯಲು ಮುಂದಾಗಿದೆ. ಈ ಬಗ್ಗೆ ಹಲವು ಹಂತಗಳಿಂದ ಬೇಡಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಇಂಥ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

 

ಬಜೆಟ್ ಮಂಡನೆಗಿಂತ ಮೊದಲು(ಜು.10) ಡೆಟ್ ಮ್ಯೂಚ್ಯುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದವರನ್ನು ಕೇಂದ್ರ ಸರ್ಕಾರದ ಹೊಸ ತೆರಿಗೆ ಪ್ರಸ್ತಾಪದಿಂದ ಹೊರಗಿಡಬೇಕು ಎಂದು ಮ್ಯೂಚುವಲ್ ಫಂಡ್ ಹೂಡಿಕೆದಾರರು ಒತ್ತಾಯಿಸುತ್ತಿದ್ದಾರೆ.[ಕೇಂದ್ರ ಬಜೆಟ್ ಮುಖ್ಯಾಂಶಗಳು]

ಮ್ಯೂಚುವಲ್ ಫಂಡ್ ಮೇಲೆ ತೆರಿಗೆ ಹೊರೆ ಇಲ್ಲ!

ಅರುಣ್ ಜೇಟ್ಲಿ ತಮ್ಮ ಬಜೆಟ್ ನಲ್ಲಿ ತೆರಿಗೆ ಪ್ರಸ್ತಾಪವನ್ನು ಹಾಲಿ ಶೇ.10ರಿಂದ ಶೇ.20ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಂಡಿಸಿದ್ದರು. ಸರಕರಿ ಸ್ವಾಮ್ಯದ ಬ್ಯಾಂಕ್ ಹಾಗೂ ಇತರೆ ಖಾಸಗಿ ಸಾಲ ನೀಡುವ ಹಣಕಾಸು ಸಂಸ್ಥೆಗಳನ್ನು ಸರಿದೂಗಿಸಲು ಅರುಣ್ ಜೇಟ್ಲಿ ಅವರು ಈ ತೆರಿಗೆ ಹೊರೆ ಹಾಕಲು ನಿರ್ಧರಿಸಿದ್ದರು. ಸರ್ಕಾರದ ಪ್ರಸ್ತಾವನೆ ವಿರುದ್ಧ ಸೆಬಿಗೆ Association of Mutual Funds in India(ಎಎಂಎಫ್ ಐ) ದೂರು ನೀಡಲು ಯೋಚಿಸಿತ್ತು.

ದೀರ್ಘಕಾಲಿಕ ಸಾಲ ಆಧಾರಿತ ಮ್ಯೂಚುವಲ್ ಫಂಡ್ ಅವಧಿಯನ್ನು 36 ತಿಂಗಳಿನಿಂದ 12 ತಿಂಗಳಿಗೆ ಇಳಿಸುವ ಆಲೋಚನೆಯನ್ನು ಸರ್ಕಾರ ಮುಂದಿಟ್ಟಿತ್ತು. ಆದರೆ, ಇದರಿಂದ ನಿಶ್ಚಿತ ಅವಧಿಯ ಮ್ಯೂಚುವಲ್ ಫಂಡ್(ಎಫ್ ಎಂಪಿ) ಹಾಗೂ ಕಡಿಮ ಅವಧಿಯ ಬಾಂಡ್ ಠೇವಣಿದಾರರಿಗೆ ಹೊಡೆತ ಬೀಳಲಿದೆ ಎಂದು ಎಎಂಎಫ್ ಐ ವಾದಿಸಿದೆ. ಇದಕ್ಕೆ ಸರ್ಕಾರ ಈಗ ಸೂಕ್ತವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ತೆರಿಗೆ ಬದಲಾವಣೆ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ.

English summary

Finance Ministry may tweak Budget 2014 proposal to double tax on debt mutual funds

Finance Ministry is contemplating to tweak the Budget proposal for hiking capital gains tax to 20 per cent for debt mutual fund investors from prospective effect instead of April 1, 2014.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X