For Quick Alerts
ALLOW NOTIFICATIONS  
For Daily Alerts

ಬಿಲಿಯನೇರ್‌ಗಳ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

By ಮಧುಸೂದನ ಹೆಗಡೆ
|

ವಿಶ್ವದಲ್ಲಿ ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿರುವ ಲೆಕ್ಕದಲ್ಲಿ ಭಾರತಕ್ಕೆ ಆರನೇ ಸ್ಥಾನ. ಭಾರತದ ನೂರು ಜನ ಬಿಲಿಯನೇರ್‌ ಗಳ ಕೈಯಲ್ಲಿ ಒಟ್ಟು 157 ಬಿಲಿಯನ್‌ ಡಾಲರ್ ಹಣವಿದೆ. ವಿಶ್ವದಲ್ಲಿರುವ ಒಟ್ಟು ಬಿಲಿಯನೇರ್ ಗಳ ಸಂಖ್ಯೆ 2,325.

 

ವೆಲ್ತ್ ಎಕ್ಸ್‌ ಮತ್ತು ಯುಬಿಎಸ್‌ ಸಂಸ್ಥೆಯ 2014ರ ವರದಿ ಈ ಸಂಗತಿಯನ್ನು ಬಹಿರಂಗ ಮಾಡಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತ ಮೂರು ಜನ ಬಿಲಿಯನೇರ್ ಗಳನ್ನು ಕಳೆದುಕೊಂಡಿದೆ. ಆದರೆ ಭಾರತದ 6 ನೇ ಸ್ಥಾನಕ್ಕೆ ಯಾವ ಭಂಗ ಬಂದಿಲ್ಲ

 

ಸಿಡ್ಜರ್ಲೆಂಡ್, ಹಾಂಕ್‌ ಕಾಂಗ್ ಮತ್ತು ಫ್ರಾನ್ಸ್‌ ನಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಬಿಲಿಯನೇರ್‌ಗಳಿದ್ದಾರೆ.

ಭಾರತದ ವಾಣಿಜ್ಯ ರಾಜಧಾನಿ ಮುಂಬೈ
ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ವಿಶ್ವದ ಟಾಪ್‌ 20 ಬಿಲಿಯನೇರ್‌ಗಳು ಸೇರಿದಂತೆ 28 ಶ್ರೀಮಂತರು ವಾಸ್ತವ್ಯ ಹೂಡಿದ್ದಾರೆ. ನ್ಯೂಯಾರ್ಕ್‌ ನಲ್ಲಿ 103 ಬಿಲಿಯನೇರ್‌ಗಳು ವಾಸಿಸುತ್ತಿದ್ದು ವಿಶ್ವದಲ್ಲೇ ಶ್ರೀಮಂತ ನಗರವಾಗಿ ಹೊರಹೊಮ್ಮಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತದ ಬಿಲಿಯನೇರ್‌ಗಳ ಆದಾಯದಲ್ಲಿ ಕೊರತೆ ಕಂಡುಬಂದಿದೆ. ಆದರೆ ವಿಶ್ವದ ಬಿಲಿಯನೇರ್‌ಗಳ ಸಂಖ್ಯೆ ಮತ್ತು ಆದಾಯ ಏರುತ್ತಲೇ ಇದೆ ಎಂದು ವರದಿ ಹೇಳಿದೆ.

ಬಿಲಿಯನೇರ್‌ಗಳ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ರಾಷ್ಟ್ರಗಳ ಶ್ರೇಯಾಂಕ
ವಿಶ್ವದ ಒಟ್ಟು 40 ಬಿಲಿಯನೇರ್‌ ರಾಷ್ಟ್ರಗಳಲ್ಲಿ ಅಮೆರಿಕಕ್ಕೆ ಮೊದಲ ಸ್ಥಾನ. 2014ಕ್ಕೆ ಅನ್ವಯಿಸಿ ಹೇಳುವುದಾದರೆ ಅಮೆರಿಕ 571 ಬಿಲಿಯನೇರ್‌ಗಳನ್ನು ಹೊಂದಿದೆ. ನಂತರದ ಸ್ಥಾನಗಳು ಚೀನಾ(190), ಯುನೈಟೆಡ್ ಕಿಂಗ್ ಡಮ್ (130) ಪಾಲಾಗಿದೆ.

ಆದರೆ ವಿಶ್ವದ ಒಟ್ಟು ಬಿಲಿಯನೇರ್‌ಗಳ ಸಂಖ್ಯೆ 2,325ರ ದಾಖಲೆ ಸಂಖ್ಯೆ ತಲುಪಿದೆ. 2014 ರಲ್ಲಿ 155 ಹೊಸ ಶ್ರೀಮಂತರು ಈ ಪಟ್ಟಿಗೆ ಸೇರಿದ್ದಾರೆ. 2013ಕ್ಕೆ ಹೋಲಿಸಿದರೆ ಒಟ್ಟು ಶೇ.7ರಷ್ಟು ಹೆಚ್ಚುವರಿ ಕಂಡುಬಂದಿದೆ.

ವಿಶ್ವದ ಒಟ್ಟು ಬಿಲಿಯನೇರ್‌ ಗಳ ಸಂಪತ್ತಿನಲ್ಲಿ ಶೇ. 12ರಷ್ಟು ಹೆಚ್ಚಳ ಕಂಡಿದ್ದು 7.3 ಟ್ರಿಲಿಯನ್ ಡಾಲರ್ ಹೆಚ್ಚಳ ಕಂಡುಬಂದಿದೆ. ಪ್ರತಿಷ್ಠಿತ ಡೋವ್ ಜಾನ್ಸ್‌ ಕೈಗಾರಿಕೆಯ ಸಂಯೋಜಿತ ಬಂಡವಾಳಕ್ಕೂ ಸವಾಲು ಒಡ್ಡುವಷ್ಟು ಆದಾಯ ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.

775 ಬಿಲಿಯನೇರ್‌ಗಳನ್ನು(2.3 ಟ್ರಿಲಿಯನ್) ಹೊಂದಿರುವ ಯುರೋಪ್ ಶ್ರೀಮಂತರನ್ನು ಹೊಂದಿರುವ ಅತಿದೊಡ್ಡ ಖಂಡವಾಗಿ ಸ್ಥಾನ ಭದ್ರಪಡಿಸಿಕೊಂಡಿದೆ. ಆದರೆ ಏಷ್ಯಾ ಖಂಡ ಆದಾಯ ಹೆಚ್ಷಳದ ಶೇಕಡಾವಾರು(18.7) ಲೆಕ್ಕದಲ್ಲಿ ಎಲ್ಲರನ್ನೂ ಹಿಂದಿಕ್ಕಿದೆ.

ಏಷ್ಯಾ ಶ್ರೀಮಂತರ ಲೆಕ್ಕವೆಷ್ಟು?
ಪ್ರಪಂಚದ ಬಿಲಿಯನೇರ್‌ಗಳ ಪಟ್ಟಿಯಲ್ಲಿನ 2014 ರ ಶೇ.30ರ ಬೆಳವಣಿಗೆಗೆ ಏಷ್ಯಾದ ಕೊಡುಗೆ ಕಾರಣವಾಗಿದೆ. ಏಷ್ಯಾ ಖಂಡದಲ್ಲೂ ಶೇ.10 ರಷ್ಟು ಪ್ರಮಾಣದಲ್ಲಿ ಬಿಲಿಯನೇರ್‌ಗಳು ಹೆಚ್ಚಾಗಿದ್ದಾರೆ. ಹೊಸದಾಗಿ 52 ಜನ ಪಟ್ಟಿಗೆ ಸೇರಿದ್ದು ಅದರಲ್ಲಿ 33 ಜನ ಚೀನಾದವರು ಎಂಬುವುದು ವಿಶೇಷ ಎಂದು ವರದಿ ಹೇಳಿದೆ.

English summary

India home to 100 billionaires; 6th largest population globally

India has retained its sixth position in terms of number of billionaires with 100 such people collectively having US $175 billion in networth, while globally the number of uber-rich has reached a record high of 2,325 persons.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X