For Quick Alerts
ALLOW NOTIFICATIONS  
For Daily Alerts

ಕುಸಿಯುತ್ತಿರುವ ಬೆಳ್ಳಿ ಖರೀದಿಸುವ ಮುನ್ನ ಇತ್ತ ನೋಡಿ

|

ಬೆಂಗಳೂರು, ಸೆ. 24 : ಆಭರಣ ಪ್ರಿಯರಿಗೆ ಇದು ಸಿಹಿಸುದ್ದಿ. ಕಳೆದ ನಾಲ್ಕು ವರ್ಷದ ಅವಧಿಯಲ್ಲೇ ಬೆಳ್ಳಿ ಅತಿ ಕಡಿಮೆ ದರಕ್ಕೆ ಕುಸಿದಿದೆ. ಕೆಜಿ ಬೆಳ್ಳಿ 40 ಸಾವಿರ ರೂಪಾಯಿಗಿಂತಲೂ ಕೆಳಗಿಳಿದಿದ್ದು 2010ರ ನವೆಂಬರ್‌ ನಂತರ ಅತಿ ಕಡಿಮೆ ಬೆಲೆ ದಾಖಲಿಸಿದೆ. ಚಿನ್ನ ಸಹ ಇಳಿಕೆ ಹಾದಿಯಲ್ಲಿದೆ.

 

ಕೇವಲ ದೇಶಿಯ ಮಾರುಟ್ಟೆಯೊಂದೆ ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೆಳ್ಳಿ ದರ ಇಳಿಕೆ ಕಂಡುಬಂದಿದ್ದು 17.74 ಡಾಲರ್‌ ಸಮೀಪ ದರ ಸುತ್ತುವರಿಯುತ್ತಿದೆ. ಅಕ್ಟೋಬರ್‌ ಕೊನೆಯ ವೇಳೆಗೆ ಭಾರತದಲ್ಲಿ ಬೆಳ್ಳಿ 39 ಸಾವಿರಕ್ಕೆ ಬಂದು ನಿಲ್ಲುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

 
ಕುಸಿಯುತ್ತಿರುವ ಬೆಳ್ಳಿ ಖರೀದಿಸುವ ಮುನ್ನ ಇತ್ತ ನೋಡಿ

ನೀವು ಬೆಳ್ಳಿ ಖರೀದಿಗೆ ಬಯಸಿದ್ದೀರಾ?
ಒಂದು ವೇಳೆ ಬೆಲೆ ಇಳಿದಿದೆ ಎಂದು ಬೆಳ್ಳಿ ಖರೀದಿಗೆ ಮುಂದಾಗುವದಾದರೆ ನೀವು ಕೆಲವೊಂದು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ. ಭಾರತದ ಬೆಳ್ಳಿ ಬೆಲೆ ನಿರ್ಧಾರದ ಮೇಲೆ ಪ್ರಭಾವ ಬೀರುವ ಸಂಗತಿಗಳು ಯಾವವು? ಎಂಬುದನ್ನು ನೋಡಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಾರುಟ್ಟೆಯಲ್ಲಿನ ಬೆಲೆ ಏರಿಕೆ ಅಥವಾ ಇಳಿಕೆ, ಡಾಲರ್‌ ಎದುರು ರೂಪಾಯಿ ಸ್ಥಿತಿಗತಿ ಎಲ್ಲವೂ ಮುಖ್ಯವಾಗುತ್ತದೆ. ಸದ್ಯ ರೂಪಾಯಿ ಡಾಲರ್‌ ಎದುರು ಸ್ಥಿರತೆ ಸಾಧಿಸುರುವುದು ಬೆಳ್ಳಿ ಬೆಲೆ ಇಳಿಕೆಗೆ ಕಾರಣವಾಗಿದೆ ಎನ್ನಬಹುದು.(ಪ್ರಾಪರ್ಟಿ ಕೊಳ್ಳುವ ಮೊದಲು ಈ 8 ದಾಖಲೆ ಪರಿಶೀಲಿಸಿ)

ಹೂಡಿಕೆದಾರರು ಲೋಹದ ಬದಲು ಶೇರಿಗೆ ಮುಗಿಬಿದ್ದರೆ?
ಹೂಡಿಕೆದಾರರು ಚಿನ್ನ-ಬೆಳ್ಳಿ ಖರೀದಿ ಮಾಡುವುದನ್ನು ಬಿಟ್ಟು ಬಂಡವಾಳವನ್ನು ಶೇರುಗಳ ಮೇಲೆ ತೊಡಗಿಸಿದ್ದು ಬೆಲೆ ಇಳಿಕೆಗೆ ಕಾರಣವಾಗಿದೆ. ಎಲ್ಲಿಯವರೆಗೆ ಅವರ ಚಿತ್ತ ಮತ್ತೆ ಲೋಹದ ಖರೀದಿಯತ್ತ ಹರಿಯುವುದಿಲ್ಲವೋ ಅಲ್ಲಿಯವರೆಗೆ ಚಿನ್ನ-ಬೆಳ್ಳಿ ಬೆಲೆ ಇಳಿಯುತ್ತಲೇ ಇರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

ಬೆಳ್ಳಿಯ ಆಭರಣ ತಯಾರಿಕೆಯಲ್ಲೂ ಕುಸಿತ
ಕಳೆದ ಐದಾರು ವರ್ಷದ ಅವಧಿಯಲ್ಲಿ ಜನ ಬೆಳ್ಳಿ ಆಭರಣಗಳಿಂದ ಕೊಂಚ ದೂರ ಸರಿದಿರುವುದು ಕಂಡುಬಂದಿತು.ಇದು ಬೆಳ್ಳೀಯ ಮೇಲಿನ ಬೇಡಿಕೆ ಕುಸಿಯಲು ಕಾರಣವಾಯಿತು.(ಯಾವ ಬ್ಯಾಂಕಿನಲ್ಲಿ ಬಡ್ಡಿದರ ಹೆಚ್ಚು? ಯಾವ್ದು ಬೆಸ್ಟ್?)

ಅಮೆರಿಕದ ಫೆಡರಲ್‌ ಬ್ಯಾಂಕ್ ನೀತಿ
ಆರ್ಥಿಕ ಕುಸಿತ ತಡೆಯಲು ಅಮೆರಿಕದ ಫೆಡರಲ್ ಬ್ಯಾಂಕ್ ತೆಗೆದುಕೊಂಡ 'ಕ್ಯೂಇ ತ್ರಿ' ಕಾರ್ಯಕ್ರಮ ಅಕ್ಟೋಬರ್‌ನಲ್ಲಿ ಕೊನೆಗೊಳ್ಳಲಿದೆ. ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೃವ್ಯದ ಹರಿವು ಕಡಿಮೆಯಾಲಿದೆ. ಕಳೆದ ಎರಡು ವರ್ಷಗಳಿಂದ ಕ್ಯೂಇ ತ್ರಿ ಯೋಜನೆ ಬೆಳ್ಳಿ ಮತ್ತು ಬಂಗಾರದ ಬೆಲೆ ಹೆಚ್ಚಳಕ್ಕೆ ಕಾರಣವಾಗಿತ್ತು. ಆದರೆ ಇದು ಬಹಳ ದಿನಗಳವರೆಗೆ ಮುಂದುವರಿಯಲ್ಲ ಎಂದು ಹೇಳಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬದಲಾವಣೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿನಿಮಯ ಬಂಡವಾಳ ದರದಲ್ಲೂ ಒತ್ತಡ ಕಂಡುಬಂದಿದೆ. ಇದು ಬೆಳ್ಳಿಯ ಮೇಲೂ ಒತ್ತಡತಂದಿದೆ. ಹೂಡಿಕೆದಾರರು ತೆಗೆಗೆದುಕೊಳ್ಳುವ ನಿರ್ಣಯಗಳು ನೇರ ಪರಿಣಾಮ ಬೀರುತ್ತಿವೆ.

ಕೊನೆ ಮಾತು
ಭಾರತೀಯ ರೂಪಾಯಿ ಇದೇ ತರಹ ತನ್ನ ದೃಢತೆ ಕಾಪಾಡಿಕೊಂಡು ಹೋದರೆ ಕೆಜಿ ಬೆಳ್ಳಿ 36 ಸಾವಿರಕ್ಕೆ ಬಂದು ತಲುಪಲಿದೆ. ಬಂಗಾರದ ದರ ಕೂಡಾ ಇಳಿಯಲಿದ್ದು ಹೂಡಿಕೆ ಮಾಡುವಾಗ ಎಲ್ಲವನ್ನೂ ಗಮನಿಸಬೇಕಾದ್ದು ಅವಶ್ಯ.

ಬೆಂಗಳೂರು ಮಾರುಕಟ್ಟೆ ಬುಧವಾರದ ಬೆಳ್ಳಿ ಬೆಲೆ (ಕೆಜಿ): 38,914 ರೂಪಾಯಿ

English summary

Silver at 4 year low! Should you buy the metal now?

Silver has hit a 4 year low in the domestic markets in Mumbai and also in the international markets. Silver is now well below the Rs 40,000 mark in Mumbai per KG. This level has not been since November of 2010. which means we the metal is now at a near 4 year low.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X