For Quick Alerts
ALLOW NOTIFICATIONS  
For Daily Alerts

ಯಾರೋ ಯುದ್ಧಮಾಡಿದರೆ ಕಿವಿಯೋಲೆ ದುಬಾರಿǃ

|

ಬೆಂಗಳೂರು, ಸೆ. 25 : ಯಾವುದೋ ರಾಷ್ಟ್ರ ಇನ್ನಾವುದೋ ದೇಶದ ಮೇಲೆ ಯುದ್ಧಕ್ಕೆ ನಿಂತರ ನೀವು ಹಾಕಿಕೊಳ್ಳುವ ಮೂಗುಬೊಟ್ಟು, ಕಿವಿಯೋಲೆ ದುಬಾರಿಯಾಗುತ್ತದೆ. ಇದು ವಿಚಿತ್ರ ಅನಿಸಿದರೂ ಅಷ್ಟೆ ಸಹ ಸತ್ಯ. ಕಳೆದ ಎರಡು ದಿನಗಳಿಂದ ಹಳದಿ ಲೋಹ ಏರಿಕೆ ಹಾದಿಯಲ್ಲಿ ಸಾಗತೊಡಗಿದೆ. ಅಮೆರಿಕದ ಫೆಡರಲ್‌ ಬ್ಯಾಂಕ್‌ನ ಕ್ರಮಗಳು ಚಿನ್ನ-ಬೆಳ್ಳಿ ಬೆಲೆ ಇಳಿಯಲು ಕಾರಣವಾಗಬಹುದೆಂಬ ಎಲ್ಲರ ನಿರೀಕ್ಷೆ ಹುಸಿಯಾಗಿದೆ.

ಯಾರೋ ಯುದ್ಧಮಾಡಿದರೆ ಕಿವಿಯೋಲೆ ದುಬಾರಿǃ

ಆದರೆ ಬೆಳ್ಳಿ ಇಳಿಕೆಯ ದಾರಿ ಹಿಡಿದಿದ್ದು ಚಿನ್ನ ವ್ಯತಿರಿಕ್ತವಾಗಿ ಚಲಿಸುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಮತ್ತು ಭಾರತೀಯ ಮಾರುಕಟ್ಟೆ ಎರಡೂ ಕಡೆ ಪರಿಸ್ಥಿತಿ ಒಂದೆ ಆಗಿದೆ. ಇತ್ತ ಶೇರು ಮಾರುಕಟ್ಟೆ ಸತತ ಕುಸಿತ ಕಾಣುತ್ತಿರುಚವುಸು ಅಚ್ಚರಿ ಮೂಡಿಸಿದೆ. ಗುರುವಾರ(ಸೆ. 26) ಅಂತ್ಯಕ್ಕೆ ಬಿಎಸ್‌ಇ 276 ಅಂಕ ಕುಸಿದು 26,468ಕ್ಕೆ ಬಂದು ನಿಂತಿದೆ. ಚಿನ್ನದ ಬೆಲೆಯಲ್ಲಿ ಕೊಂಚ ಮಟ್ಟಿನ ಏರಿಕೆ ಕಂಡುಬಂದಿದೆ.(ಕುಸಿಯುತ್ತಿರುವ ಬೆಳ್ಳಿ ಖರೀದಿಸುವ ಮುನ್ನ ಇತ್ತ ನೋಡಿ)

ಚಿನ್ನ ಏರಲು ಕಾರಣಗಳೇನು?
ಸಿರಿಯಾದ ಮೇಲೆ ಅಮೆರಿಕ ದಾಳಿ, ಡಾಲರ್‌ ಎದುರು ಕೊಂಚ ಕುಸಿದ ರೂಪಾಯಿ, ಹಬ್ಬದ ಸೀಸನ್‌ ಆರಂಭದ ಹಿನ್ನೆಲೆ, ಬ್ಯಾಂಕ್‌ಗಳಿಗೆ ಎದುರಾಗಿರುವ ನಿರಂತರ ರಜೆ ಎಲ್ಲವೂ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.

ಸಿರಿಯಾ ಮೇಲೆ ದಾಳಿ
ಮುಸ್ಲಿಂ ರಾಷ್ಟ್ರ ಸಿರಿಯಾದ ಮೇಲೆ ಅಮೆರಿಕ ಮತ್ತೆ ದಾಳಿ ಆರಂಭಿಸಿದೆ. ಇದು ನೆರವಾಗಿ ಚಿನ್ನದ ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಅಮೆರಿಕ ದಾಳಿ ಮುಂದುವರಿಸುವ ನಿರೀಕ್ಷೆಯಿದ್ದು ಬೆಲೆಯಲ್ಲಿ ಮತ್ತೆ ಹೆಚ್ಚಳ ಕಂಡುಬಂದರೆ ಆಶ್ಚರ್ಯವಿಲ್ಲ.

ರೂಪಾಯಿ ಕುಸಿತ
ಸೆ. 24 ರ ಅಂತ್ಯಕ್ಕೆ ಡಾಲರ್‌ ಎದುರು 60.96ರೂ. ಮೌಲ್ಯ ದಾಖಲಿಸಿದ್ದ ಭಾರತೀಯ ಕರೆನ್ಸಿ ಗುರುವಾರದ ಅಂತ್ಯಕ್ಕೆ 61.23ಕ್ಕೆ ಕುಸಿದಿದೆ. ಅಂದರೆ ಸುಮಾರು 30 ಪೈಸೆಗಳಷ್ಟು ಇಳಿಕೆ ಕಂಡಿದೆ. ಇದು ಆಭರಣ ಚಿನ್ನದ ಬೆಲೆ ಹೆಚ್ಚಳದ ಮೇಲೆ ನೇರ ಪರಿಣಾಮ ಬೀರಿದೆ.

ಬ್ಯಾಂಕ್‌ ನಿರಂತರ ರಜೆ
ಅಕ್ಟೋಬರ್‌ ಮೊದಲ ವಾರ ಎಲ್ಲಾ ಬ್ಯಾಂಕ್‌ಗಳಿಗೂ ಸಾರ್ವತ್ರಿಕ ರಜೆ ಎದುರಾಗಿರುವ ಹಿನ್ನೆಲೆಯಲ್ಲಿ ಹಣದ ವಹಿವಾಟಿನಹರಿವು ಹೆಚ್ಚಿದೆ. ಇದರ ಪರಿಣಾಮ ಬಂಡವಾಳ ಹೂಡಿಕೆಯಲ್ಲೂ ಏರುಪೇರು ಉಂಟಾಗಿದ್ದು ಬಂಗಾರದ ಬೆಲೆ ಮೇಲೆ ಪರಿಣಾಮ ಬೀರಿದೆ.

ಎಂಸಿಎಕ್ಸ್‌ ಏನು ಹೇಳುತ್ತದೆ?
ಅಂತಾರಾಷ್ಟ್ರೀಯ ಚಿನ್ನದ ಮಾರಕಟ್ಟೆ ಎಂಸಿಎಕ್ಸ್‌ನಲ್ಲೂ ಏರಿಕೆ ದಾಖಲಾಗಿದೆ. ಕೊಳ್ಳುವ ಚಿನ್ನ 26,725(ಸಾಮಾನ್ಯ) 26,567 (ಅಪರಂಜಿ) ರೂ. ಮತ್ತು ಮಾರಾಟದ ಚಿನ್ನ 26,735 (ಸಾಮಾನ್ಯ), 26,576 (ಅಪರಂಜಿ) ರೂ. ದಾಖಲಿಸಿದೆ. ಅಕ್ಟೋಬರ್‌ ಅಂತ್ಯದವರೆಗೂ ಏರಿಕೆಯ ಸ್ಥಿತಿಯೇ ಮುಂದುವರಿಯಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಪಸಿದ್ದಾರೆ.

English summary

Gold continues to gain ground on US airstrikes in Syria

Gold futures rose in the domestic market on Wednesday as investors and speculators booked fresh positions in the precious metal as escalating tensions in the Middle East amid US led airstrikes in Syria against Islamic State militants boosted safe haven inflows into the yellow metal. What are the real causes of Gold gain?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X