For Quick Alerts
ALLOW NOTIFICATIONS  
For Daily Alerts

ಚೀನಾದ ಐಟಿ ಕ್ಷೇತ್ರಕ್ಕೆ 'ಆಲಿಬಾಬಾದ' ಜಾಕ್‌ ಮಾ ಅಧಿಪತಿ

|

ಬೀಜಿಂಗ್‌, ಸೆ. 26 : ಚೀನಾದಲ್ಲಿ ಐಟಿ ಕ್ಷೇತ್ರ ಅತಿ ವೇಗವಾಗಿ ಬೆಳೆಯುತ್ತಿದ್ದು, ಚೀನಾದ ಮೊದಲ ಹತ್ತು ಶ್ರೀಮಂತರ ಪಟ್ಟಿಯಲ್ಲಿ ಐದು ಜನ ಐಟಿ ದಿಗ್ಗಜರೇ ತುಂಬಿದ್ದಾರೆ. ಜನರಿಂದ ನಿರ್ವಹಿಸುವ ಅತಿದೊಡ್ಡ ಶೇರು ಮಾರುಕಟ್ಟೆ 'ಆಲಿಬಾಬಾ' ಸಂಸ್ಥಾಪಕ 'ಜಾಕ್ ಮಾ' ಚೀನಾದ ಅತಿದೊಡ್ಡ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. 24.4 ಬಿಲಿಯನ್ ಡಾಲರ್‌ ಆಸ್ತಿ ಹೊಂದಿರುವ ಜಾಕ್ ಮಾ ಚೀನಾದ ನಂ. 1 ಶ್ರೀಮಂತ ಪಟ್ಟ ಅಲಂಕರಿಸಿದ್ದಾರೆ.

 

ಹೂರೂನ್‌ ವಾರ್ಷಿಕ ಪಟ್ಟಿಯಲ್ಲೂ ಜಾಕ್‌ ಮಾ ಪ್ರಗತಿ ಸಾಧಿಸಿದ್ದಾರೆ. ಅದರಂತೆ ಪ್ರಾಪರ್ಟಿ ಡೆವಲಪರ್‌ 'ಡಲಿಯನ್ ವಾಂಡಾ' ಸಮೂಹದ ವಾಂಗ್ ಜೈಲಿನ್ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ಜೈಲಿನ್ 145 ಬಿಲಿಯನ್ ಯಾನ್ (ಸಿಎನ್‌ವೈ) ಆಸ್ತಿ ಹೊಂದಿದ್ದಾರೆ.

 
ಚೀನಾದ ಐಟಿ ಕ್ಷೇತ್ರಕ್ಕೆ 'ಆಲಿಬಾಬಾದ' ಜಾಕ್‌ ಮಾ ಅಧಿಪತಿ

ಇದೇ ಮೊದಲ ಬಾರಿಗೆ ಜಾಕ್ ಮಾ 150 ಬಿಲಿಯ ಯಾನ್ (ಚೀನಾದ ಕರೆನ್ಸಿ)ಗಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿದ್ದು ಚೀನಾ ಜನ ಮತ್ತು ಜಾಕ್‌ ಮಾ 'ಆಲಿಬಾಬಾಗೆ' ಧನ್ಯವಾದ ಹೇಳಲೇಬೇಕಿದೆ. ಸದ್ಯವೇ 'ಜಾಕ್‌ ಮಾ' ವಿಶ್ವದ 25 ನೇ ಅತಿ ಶ್ರೀಮಂತರಾಗಿ ಹೊರಹೊಮ್ಮಲಿದ್ದಾರೆ ಎಂದು ಕ್ಸಿಂಚುವಾ ಸುದ್ದಿ ಸಂಸ್ಥೆ ಹೇಳಿದೆ.

15 ವರ್ಷಗಳ ಹಿಂದೆ ಜಾಕ್‌ ಮಾ ಸ್ನೇಹಿತರ ಮನವೊಲಿಸಿ 60 ಸಾವಿರ ಡಾಲರ್‌ ವೆಚ್ಚದಲ್ಲಿ ತೆರೆದ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದೆ. ನ್ಯೂಯಾರ್ಕ್‌ ಸ್ಟಾಕ್‌ ಎಕ್ಸ್‌ ಚೆಂಜ್‌ ವರದಿಯಂತೆ 200 ಬಿಲಿಯನ್‌ ಡಾಲರ್‌ ಒಡೆತನ ಜಾಕ್‌ ಮಾ ಹೊಂದಿದ್ದಾರೆ.

ಮೂಲತಃ ಜಾಕ್‌ ಮಾ ಯಾವ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಬಡತನದಲ್ಲಿದ್ದ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಈ ಕಂಪನಿ ಶುರು ಮಾಡಿದ್ದರು ಎಂದು ಚೀನಾದ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಚೀನಾದ ಟಾಪ್‌ ಹತ್ತು ಜನ ಶ್ರೀಮಂತರಲ್ಲಿ 5 ಜನ ಐಟಿ ವಿಭಾಗದವರು ಎನ್ನುವುದು ಅಷ್ಟೇ ಮುಖ್ಯವಾದ ಸಂಗತಿ. ಇದು ಆ ದೇಶದಲ್ಲಿ ಆಗುತ್ತಿರುವ ಐಟಿ ಬೆಳವಣಿಗೆ ತಿಳಿಸುತ್ತದೆ. ಚೀನಾದ ಐದನೇ ಅತಿದೊಡ್ಡ ಶ್ರೀಮಂತರಾಗಿ ಪೋನಿ ಮಾ ಹೊರಹೊಮ್ಮಿದ್ದು ಇವರ ಆಸ್ತಿ 108.5 ಬಿಲಿಯನ್‌ ಯಾನ್. ಅಲ್ಲದೇ ಪೋನಿ ಸಹ ಐಟಿ ವಿಭಾಗಕ್ಕೆ ಸೇರಿದವರೆ ಎಂಬುದನ್ನು ಮನಗಾಣಬೇಕು.

ಒಂಭತ್ತನೇ ಸ್ಥಾನವನ್ನು ಜೆಡಿ ಡಾಟ್‌ ಕಾಮ್ ಸಂಸ್ಥೆಯ ಲೀ ಕ್ವಾಂಗ್ಡಾಂಗ್(53 ಬಿಲಿಯನ್‌ ಯಾನ್), ಹತ್ತನೇ ಸ್ಥಾನವನ್ನು ಚೀನಾದ ಸ್ಮಾರ್ಟ್‌ ಫೋನ್‌ ತಯಾರಿಕಾ ಕಂಪನಿ ಎಕ್ಸ್ಮೋನಿಯಾದ ಲೀ ಜುನ್ ( 45 ಬಿಲಿಯನ್‌ ಯಾನ್) ಪಡೆದುಕೊಂಡಿದ್ದಾರೆ.

Read more about: finance news bank ಭಾರತ
English summary

Alibaba founder Jack Ma becomes China's richest man

Riding the crest of the world's biggest IPO, Jack Ma, founder of e-commerce giant Alibaba, has become the richest man in China with a fortune of US dollar 24.4 billion, according to an annual list of the country's wealthiest people. Ma, 50, took top spot in the annual Hurun wealth bible from last year's number one, Wang Jianlin, founder of property developer Dalian Wanda Group, despite Wang's wealth growing 7 per cent. Wang ranked second on the list this year, with a fortune of 145 billion yuan.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X