For Quick Alerts
ALLOW NOTIFICATIONS  
For Daily Alerts

ಈತ ಸಂಭ್ರಮಿಸುವುದಕ್ಕೆ ಕಾರಣ ಬೇಕಿಲ್ಲǃ

|

ಬೆಂಗಳೂರು, ಸೆ. 29 : ಆತನ ಕಣ್ಣಲ್ಲಿ ಮಿಂಚಿತ್ತು, ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು. ಉತ್ಸಾಹದ ಚಿಲುಮೆಯಂತೆ ಕಾಣುತ್ತಿದ್ದವ ಮಕ್ಕಳಂತೆ ಲಾರಿಯನ್ನು ಏರಿ ಸಂಭ್ರಮಿಸಿದ. ಆತ್ಮವಿಶ್ವಾಸದ ಮಾತುಗಳನ್ನಾಡಿದ.

 

ಭಾನುವಾರ ಬೆಂಗಳೂರಿನ ಓರಿಯಾನ್ ಮಾಲ್‌ ಎದುರಿಗಿದ್ದವರಿಗೆ ದಿಢೀರ್ ಪ್ರತ್ಯಕ್ಷನಾದ ವ್ಯಕ್ತಿ ಯಾರೆಂಬುದು ಆ ಕ್ಷಣಕ್ಕೆ ಗೊತ್ತಾಗಲಿಲ್ಲ. ಬೋಳು ತಲೆ, ಅತ್ತ ಕುರ್ತಾನೂ ಅಲ್ಲದ, ಇತ್ತ ಸೂಟು ಬೂಟು ಅಲ್ಲದ ಡ್ರೆಸ್, ಕುತ್ತಿಗೆ ಮೇಲೊಂದು ಶಾಲು, ವಿಚಿತ್ರ ಅವತಾರದ ವ್ಯಕ್ತಿ ಲಾರಿ ಏರಿ ಸಂಭ್ರಮಿಸುತ್ತಿದ್ದ. ಹೌದು.. ಆನ್ ಲೈನ್‌ ಶಾಪಿಂಗ್ ಕಂಪನಿ ದೈತ್ಯ ಅಮೆಜಾನ್ ಡಾಟ್‌ ಕಾಮ್ ಸಿಇಒ ಜೆಫ್ ಬೆಜೋಸ್ ಭಾನುವಾರ ಸಂಭ್ರಮಿಸಿದ ಪರಿ ಹೀಗೆ ಇತ್ತು.

 
ಈತ ಸಂಭ್ರಮಿಸುವುದಕ್ಕೆ ಕಾರಣ ಬೇಕಿಲ್ಲǃ

ವಿಶ್ವವೇ ಇಂದು ಸಮತೋಲಿತವಾಗಿ ಸಾಗುತ್ತಿದೆ, ನಾವು ಅದರಂತೆ ವಹಿವಾಟು ನಡೆಸುತ್ತಿದ್ದೇವೆ. ಭಾರತೀಯರಿಗೆ ಏನು ಬೇಕೋ ಅದನ್ನೇ ನೀಡುತ್ತಿದ್ದೇವೆ ಎಂಬುದು ಒಂದು ವರ್ಷದಲ್ಲಿ ಒಂದು ಬಿಲಿಯನ್ ಡಾಲರ್ (ಆರು ಸಾವಿರ ಕೋಟಿ ರೂ) ವಹಿವಾಟು ನಡೆಸಿರುವ ಆನ್ ಲೈನ್‌ ಶಾಪಿಂಗ್ ಕಂಪನಿ ದೈತ್ಯ ಅಮೆಜಾನ್ ಡಾಟ್‌ ಕಾಮ್ ಸಿಇಒ ಜೆಫ್ ಬೆಜೋಸ್ ಸ್ಷಷ್ಟಮಾತು.(ಅಮೆಜಾನ್ ತೆರಿಗೆ ಹೇರಿಕೆಗೆ ದಿಗ್ವಿಜಯ್ ಡಿಚ್ಚಿǃ)

ಬೆಂಗಳೂರಿನ ಒರಾಯನ್ ಮಾಲ್ ಎದುರು ಭಾನುವಾರ ಪ್ರತ್ಯಕ್ಷರಾದ ಜೆಫ್ ಬೆಜೋಸ್ ಲಾರಿ ಏರಿ ಸಂಭ್ರಮಿಸಿದರು. ಅವರಿಗೆ ಅಮೆಜಾನ್ ಡಾಟ್ ಕಾಮ್ ಭಾರತದ ಮ್ಯಾನೇಜರ್ ಅಮಿತ್ ಅಗರ್‌ ವಾಲ್‌ ಸಾಥ್ ನೀಡಿದರು.

ಕರ್ನಾಟಕ ಸರ್ಕಾರ ಅಮೆಜಾನ್ ಮೇಲೆ ಹೇರಿರುವ ತೆರಿಗೆಯಿಂದ ವ್ಯಾಪಾರ-ವಹಿವಾಟಿಗೆ ಯಾವ ತೊಂದರೆಯೂ ಆಗಿಲ್ಲ. ಎಂದಿನಂತೆ ಕಂಪನಿ ನಡೆದುಕೊಂಡು ಹೋಗುತ್ತಿದೆ. ಜನರಿಗೆ ಏನು ಬೇಕೋ ಅದನ್ನೇ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಬೆಜೋಸ್ ಹೇಳಿದರು.

ಈತ ಸಂಭ್ರಮಿಸುವುದಕ್ಕೆ ಕಾರಣ ಬೇಕಿಲ್ಲǃ

ಸಾವಿರಾರು ಸಣ್ಣ ಉದ್ಯಮಿಗಳಿಗೆ ಕಂಪನಿ ನೆರವಾಗಿದೆ. ಪ್ರವಾಸದ ವೇಳೆ ಅನೇಕ ಅಧಿಕಾರಿಗಳನ್ನು ಭೇಟಿ ಮಾಡಲಿದ್ದೇನೆ. ನರೇಂದ್ರ ಮೋದಿ ಉದ್ಯಮ ಸ್ನೇಹಿ ನೀತಿ ಮೆಚ್ಚಲೇಬೇಕು. ಭಾರತದಲ್ಲಿ ಎರಡು ಮಿಲಿಯನ್ ಡಾಲರ್‌ ಬಂಡವಾಳ ಹೂಡಲು ಸಿದ್ಧರಾಗಿದ್ದೇವೆ. ಆಯ್ಕೆಗೆ ತಕ್ಕ ಅನಕೂಲತೆ ನಮ್ಮ ಆದ್ಯತೆ ಎಂದು ಹೇಳಿದರು.

ಅಮೆಜಾನ್ ಎದುರಾಳಿಗಳು ಯಾರು ?
ಬೆಂಗಳೂರು ಮೂಲದ ಫ್ಲಿಫ್ ಕಾರ್ಟ್, ಸ್ನಾಪ್‌ ಡೀಲ್ ಮತ್ತು ದೆಹಲಿ ಮೂಲದ ಇಬೇ ಅಮೆಜಾನ್‌ಗೆ ಪೈಪೋಟಿ ನೀಡುತ್ತಿವೆ. ಆದರೆ ವಹಿವಾಟಿನ ದೃಷ್ಟಿಯಲ್ಲಿ ಯಾವುದೂ ಸರಿಸಾಟಿಯಾಗುತ್ತಿಲ್ಲ. ಅತ್ತ ಚೀನಾದ 'ಅಲಿಬಾಬಾ' ನಿಂದಲೂ ನನಗೇನೂ ತೊಂದರೆಯಿಲ್ಲ ಎಂಬ ವಿಶ್ವಾಸದ ಮಾತು ಬೆಜೋಸ್ ಅವರದ್ದು.(ದಾಸ್ತಾನು ಎಲೆಕ್ಟ್ರಾನಿಕ್ ವಸ್ತುಗಳ ಮೇಲೂ ತೆರಿಗೆ ಭೂತ)

ಇದು ಎರಡನೇ ಭೇಟಿ

ಬೆಜೋಸ್ ಅವರು ಭಾರತಕ್ಕೆ ಭೇಟಿ ನೀಡುತ್ತಿರುವುದು ಎರಡನೇ ಸಾರಿ. ಹಿಂದೆ ಭಾರತದಲ್ಲಿ ಅಮೆಜಾನ್ ಆರಂಭವಾದಾಗ ಬಂದಿದ್ದರು. ಈಗ ತಮ್ಮ 9 ವರ್ಷದ ಮಗನ ಜತೆ ಆಗಮಿಸಿದ್ದು ದೆಹಲಿ, ಪುಣೆ, ಮುಂಬೈ ಮತ್ತಿತರ ಮಹಾನಗರಗಳ ಪ್ರವಾಸ ಮಾಡುವ ಚಿಂತನೆಯಿದೆ ಎಂದು ತಿಳಿಸಿದರು.

English summary

Amazon’s loves India business, ready to invest more

Jeff Bezos, founder and chief executive of Amazon.com Inc., said the world’s largest online retailer will continue to invest heavily in India and other businesses and markets that have significant potential, despite pressure from some investors to rein in spending and focus on boosting margins. Bezos is in India, two months after he said in late July that Amazon would pump in as much as $2 billion into its India business as it aims to become the leader in one of the fastest growing e-commerce markets and rev up sales growth outside of North America. Amazon launched its India marketplace in June 2013.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X