For Quick Alerts
ALLOW NOTIFICATIONS  
For Daily Alerts

ಹಬ್ಬದ ವೇಳೆ ಸಕತ್ ರಿಟರ್ನ್ಸ್ ನೀಡುವ ಷೇರುಗಳು

By Mahesh
|

ಬೆಂಗಳೂರು, ಅ.1: ವಾರದಿಂದ ವಾರಕ್ಕೆ ಸೆನ್ಸೆಕ್ಸ್ ಏರಿಳಿತ ನಿಫ್ಟಿಯಲ್ಲಾದ ಬದಲಾವಣೆ ಜೊತೆಗೆ ಹೂಡಿಕೆದಾರರಿಗೆ ಹಬ್ಬದ ಸೀಸನ್ ಬಂದರೆ ಒಂದಷ್ಟು ರಿಲೀಫ್.
ವಿದೇಶಿ ಹೂಡಿಕೆ ಮಾರಾಟದ ಜೊತೆ ನಾನಾ ರೀತಿಯಲ್ಲಿ ಟಿಪ್ಸ್ ಕೂಡಾ ಜನ ಸಾಮಾನ್ಯರಿಗೆ ಆರ್ಥಿಕ ಸಂಸ್ಥೆಗಳಿಂದ ಸಿಗುತ್ತದೆ.

ಈ ಹಬ್ಬದ ಸೀಸನ್ ಅಲ್ಲದೆ ಮುಂದಿನ ಕೆಲ ವರ್ಷಗಳಲ್ಲಿ ಹೆಚ್ಚಿನ ರಿಟರ್ನ್ಸ್ ತರಬಲ್ಲ ಷೇರುಗಳು ಯಾವುದು? ಯಾವ ಕಂಪನಿ ನಂಬಿಕೊಂಡು ಹೂಡಿಕೆ ಮಾಡಿದರೆ ನಾವು ಸೇಫ್? ಎಂಬ ಸರಳ ಪ್ರಶ್ನೆಗೆ ತಜ್ಞರು ನೀಡಿದ ಉತ್ತರ ನಿಮ್ಮ ಮುಂದಿಡುತ್ತಿದ್ದೇವೆ. ಇಲ್ಲಿ ನೀಡಿರುವ ಅಭಿಪ್ರಾಯ, ಶಿಫಾರಸು, ಸಲಹೆ ಆರ್ಥಿಕ ಸಂಸ್ಥೆಯ ನಿರ್ದೇಶನವನ್ನು ಆಧರಿಸಿವೆ.. ಟಾಪ್ 5 ಷೇರುಗಳು ಇಂತಿವೆ:

ಟಾಟಾ ಕಮೂನಿಕೇಷನ್ಸ್ ಷೇರುಗಳು

ಟಾಟಾ ಕಮೂನಿಕೇಷನ್ಸ್ ಷೇರುಗಳು

ಐಸಿಐಸಿಐ ಡೈರೆಕ್ಟ್ ಶಿಫಾರಸ್ಸಿನಂತೆ ಟಾಟಾ ಕಮ್ಯೂನಿಕೇಷನ್ಸ್ ಷೇರುಗಳನ್ನು ಖರೀದಿಸಬಹುದಾಗಿದೆ. ಷೇರಿನ ಮೇಲೆ ಟಾರ್ಗೆಟ್ 481 ರು ನಿರೀಕ್ಷಿಸಬಹುದು. ಉದ್ಯಮದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಬಹುದಾಗಿದೆ ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ.

ಸಾಂಘಿ ಇಂಡಸ್ಟ್ರೀಸ್ ಷೇರುಗಳು

ಸಾಂಘಿ ಇಂಡಸ್ಟ್ರೀಸ್ ಷೇರುಗಳು

ರಿಲಿಗೇರ್ ಸಂಸ್ಥೆ ಸಾಂಘಿ ಇಂಡಸ್ಟ್ರೀಸ್ ಷೇರುಗಳನ್ನು ಕೊಳ್ಳಬಹುದು ಎಂದು ಸೂಚಿಸಿದೆ. ಬೆಲೆ ಟಾರ್ಗೆಟ್ 90 ರು ನಷ್ಟಿದೆ. ಸದ್ಯಕ್ಕೆ ಷೇರುಗಳು 51 ರು ನಂತೆ ಟ್ರೆಂಡಿಂಗ್ ನಲ್ಲಿದೆ. ಕಡಿಮೆ ವ್ಯಾಲ್ಯುಯೇಷನ್ ಹೊಂದಿದ್ದರೂ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಷೇರುಗಳು ಮುಂದೆ ಹೂಡಿಕೆದಾರರ ಕೈ ಹಿಡಿಯಲಿದೆ ಎಂದು ರಿಲಿಗೇರ್ ಹೇಳಿದೆ.

ಆಸ್ಟ್ರಾ ಮೈಕ್ರೋವೇವ್ ಷೇರುಗಳು

ಆಸ್ಟ್ರಾ ಮೈಕ್ರೋವೇವ್ ಷೇರುಗಳು

ಫಸ್ಟ್ ಕಾಲ್ ರಿಸರ್ಚ್ ಸಂಸ್ಥೆ ಆಸ್ಟ್ರಾ ಮೈಕ್ರೋವೇವ್ ಷೇರುಗಳು ಒಳ್ಳೆ ಲಾಭ ತರಲಿದೆ ಎಂದು ಅಭಿಪ್ರಾಯ ಪಟ್ಟಿದೆ. ಸದ್ಯಕ್ಕೆ ಆಸ್ಟ್ರಾ ಮೈಕ್ರೋವೇವ್ ಕಂಪನಿಯ ಷೇರುಗಳು ಒಳ್ಳೆ ಸ್ಥಿತಿಯಲ್ಲಿದ್ದು ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಸಂಸ್ಥೆ ಹೇಳಿದೆ.

ಆಸ್ಟ್ರಾ ಮೈಕ್ರೋವೇವ್ ಸಂಸ್ಥೆ 135 ರು ನ ಟಾರ್ಗೆಟ್ ಬೆಲೆ ಹೊಂದಿದ್ದು ಮಧ್ಯಮ ಹಾಗೂ ದೀರ್ಘಕಾಲಿಕ ಹೂಡಿಕೆಗೆ ಹೇಳಿ ಮಾಡಿಸಿದ ಷೇರುಗಳಾಗಿವೆ ಎಂದು ಫಸ್ಟ್ ಕಾಲ್ ರಿಸರ್ಚ್ ಶಿಫಾರಸು ಮಾಡಿದೆ.

 

ಕೊಲ್ಟೆ ಪಾಟೀಲ್ ಡೆವಲಪರ್ಸ್ ಷೇರುಗಳು

ಕೊಲ್ಟೆ ಪಾಟೀಲ್ ಡೆವಲಪರ್ಸ್ ಷೇರುಗಳು

ಶೇರ್ ಖಾನ್ ಸಂಸ್ಥೆ ಕೋಲ್ಟೆ  ಪಾಟೀಲ್ ಸಂಸ್ಥೆ ಷೇರುಗಳನ್ನು ಕೊಳ್ಳುವಂತೆ ಶಿಫಾರಸು ಮಾಡಿದೆ. ಕೆಪಿಡಿಎಲ್ ಸಂಸ್ಥೆ ಷೇರುಗಳನ್ನು ಮುಂದಿನ 2 ವರ್ಷಗಳ ಅವಧಿಗೆ 250 ರು ಟಾರ್ಗೆಟ್ ನೊಂದಿಗೆ ಕೊಳ್ಳುವಂತೆ ಸೂಚಿಸಲಾಗಿದೆ. ರಿಯಲ್ ಎಸ್ಟೇಟ್ ಮಾರುಕಟ್ಟೆಯ ಷೇರುಗಳು ಸ್ಥಿರವಾಗಿ ಕೆಪಿಡಿಎಲ್ ಮುಂದುವರೆಯಲಿದೆ ಎಂದು Emkay ಗ್ಲೋಬಲ್ ಫಿನಾನ್ಶಿಯಲ್ ಸರ್ವೀಸ್ ರಿಸರ್ಚ್ ವರದಿ ನೀಡಿದೆ.

ಇಂಜಿನಿಯರ್ಸ್ ಇಂಡಿಯಾ ಷೇರುಗಳು

ಇಂಜಿನಿಯರ್ಸ್ ಇಂಡಿಯಾ ಷೇರುಗಳು

ಕೋಟಕ್ ಸೆಕ್ಯುರಿಟೀಸ್ ಸಂಸ್ಥೆ ಇಂಜಿನಿಯರ್ಸ್ ಇಂಡಿಯಾ ಷೇರುಗಳನ್ನು ಕೊಳ್ಳುವಂತೆ ಶಿಫಾರಸು ಮಾಡಿದೆ. ಸಾಗರೋತ್ತರ ಪ್ರದೇಶಗಳಿಂದ ಬರುತ್ತಿರುವ ಹೊಸ ಗುತ್ತಿಗೆಗಳು, ಮಾರುಕಟ್ಟೆಯಲ್ಲಿ ಏಳಿಗೆಯ ಮುನ್ನೋಟ ಇವುಗಳನ್ನು ಗಮನಿಸಿ ಇಂಜಿನಿಯರ್ಸ್ ಇಂಡಿಯಾ ಸಂಸ್ಥೆ ಷೇರುಗಳ ಮೇಲೆ ಹಣ ಹೂಡಿಕೆ ಮಾಡಬಹುದು ಎಂದು ಕೋಟಕ್ ಸೂಚಿಸಿದೆ.

English summary

5 stocks that have the potential to give 50-100% returns

5 stocks that have the potential to give 50-100% returns. The Sensex and the Nifty have corrected a little this week on the back of heavy selling from foreign funds. Here are a few stocks that can give super returns in the next few years.
Story first published: Wednesday, October 1, 2014, 15:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X