For Quick Alerts
ALLOW NOTIFICATIONS  
For Daily Alerts

ಡಿಎಲ್ ಎಫ್ ಸಂಸ್ಥೆಗೆ ಮೂರು ವರ್ಷ ನಿಷೇಧ

|

ಮುಂಬೈ, ಅ. 13 : ರಿಯಲ್‌ ಎಸ್ಟೇಟ್‌ ಉದ್ಯಮ ಸಂಸ್ಥೆ ಡಿಎಲ್ ಎಫ್ ಮತ್ತು ಸಂಸ್ಥೆಯ ಆಡಳಿತ ಮಂಡಳಿಗೆ ಕಂಟಕ ಎದುರಾಗಿದೆ. ಡಿಎಲ್ ಎಫ್ ಅಧ್ಯಕ್ಷ ಕೆಪಿ ಸಿಂಗ್ ಸೇರಿದಂತೆ ಸಂಸ್ಥೆಯ ಪ್ರಮುಖ ಹುದ್ದೆಯಲ್ಲಿರುವ ಆರು ಅಧಿಕಾರಿಗಳಿಗೆ ಭಾರತದ ಸೆಕ್ಯೂರೀಟೀಸ್ ಮತ್ತು ಎಕ್ಸ್‌ಚೆಂಜ್‌ ಬೋರ್ಡ್[ಸೆಬಿ] ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಮೂರು ವರ್ಷಗಳ ಕಾಲ ಮಾರುಕಟ್ಟೆ ಕಡೆ ತಲೆ ಹಾಕದಂತೆ ಸೂಚಿಸಿದೆ.

 

ನೀವು ಕೆಲ ಕಾನೂನಾತ್ಮಕ ಸಂಗತಿಗಳನ್ನು ಜನರಿಂದ, ಸರ್ಕಾರದಿಂದ ಮುಚ್ಚಿಟ್ಟಿದ್ದೀರಿ, ಇದರಲ್ಲಿ ನಿಮಗೆ ಯಾವ ದೋಷ ಕಾಣಿಸಿಲ್ಲವೇ? ಅಪರಾಧ ಪ್ರಕರಣ ದಾಖಲಾಗಿದ್ದನ್ನು ಯಾಕೆ ಗಮನಕ್ಕೆ ತಂದಿಲ್ಲ ಎಂದು ಪ್ರಶ್ನಿಸಿರುವ ಸೆಬಿ ಡಿಎಲ್ ಎಫ್ ಸಂಸ್ಥೆಯ ಉಪಾಧ್ಯಕ್ಷ ಕೆಪಿ ಸಿಂಗ್‌ ಪುತ್ರ ರಾಜೀವ್ ಸಿಂಗ್ ಮತ್ತು ಪುತ್ರಿ ಪಿಯಾ ಸಿಂಗ್ ಅವರಿಗೂ ನಿಷೇಧ ಹೇರಿದೆ.[ಬಂಗಾರದ ಬೆಲೆ ಇಳಿಯಲು ಕಾರಣಗಳು]

 
ಡಿಎಲ್ ಎಫ್ ಸಂಸ್ಥೆಗೆ ಮೂರು ವರ್ಷ ನಿಷೇಧ

ಸಂಸ್ಥೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವಂತಿಲ್ಲ. ಕಂಪನಿಯ ಷೇರು, ಸಾರ್ವಜನಿಕರಿಗೆ ಭಾಗವಹಿಸಲು ಆಹ್ವಾನ ನೀಡುವುದು(ಐಪಿಒ) ಎಲ್ಲಕ್ಕೂ ನಿರ್ಬಂಧ ಹೇರಲಾಗಿದೆ ಎಂದು ಸೆಬಿಯ ಸದಸ್ಯ ರಾಜೀವ್ ಅಗರ್ ವಾಲ್ ತಮ್ಮ 43 ಪುಟಗಳ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಹೀಗೆ ಮುಂದುವರಿದರೆ ಡಿಎಲ್ ಎಫ್ ಮಾರುಕಟ್ಟೆಯ ಹಾದಿ ತಪ್ಪಿಸಬಹುದು. ಸುರಕ್ಷೆ ಮತ್ತು ಭದ್ರತೆ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಅಗರ್ ವಾಲ್ ತಿಳಿಸಿದ್ದಾರೆ.

ಸೆಬಿಯ ಹಲವಾರು ನಿಯಮಗಳನ್ನು ಡಿಎಲ್‌ ಎಫ್ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ವ್ಯಾಪಾರ ಮತ್ತು ಹೂಡಿಕೆಗೆ ಸಂಬಂಧಿಸಿದ ನಿಯಮಗಳನ್ನು ಗಾಳಿಗೆ ತೂರಿರುವ ಡಿಎಲ್‌ ಎಫ್‌ ಗೆ ನಿರ್ಬಂಧ ಹೇರದೆ ಬೇರೆ ದಾರಿ ಇಲ್ಲ ಎಂದು ಹೇಳಿದ್ದಾರೆ.[ಪಟ್ಟಿಯಲ್ಲಿ ಐವರು ಭಾರತೀಯ ಸಂಜಾತರು]

ಕೆಪಿ ಸಿಂಗ್ ಕುಟುಂಬ ಸೇರಿದಂತೆ ಡಿಎಲ್‌ ಎಫ್ ಮ್ಯಾನೆಜಿಂಗ್ ಡೈರೆಕ್ಟರ್ ಟಿಸಿ ಘೋಯಲ್, ಕಾಮೇಶ್ವರ ಸ್ವರೂಪ್ ಮತ್ತು ರಮೇಶ್ ಸಾಕಾ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಡಿಎಲ್‌ ಎಫ್ 2007ರಲ್ಲಿ ಐಪಿಒ ಮೂಲಕ ತನ್ನ ಬಂಡವಾಳವನ್ನು 9,187 ಕೋಟಿ ರೂ.ಗೆ ಹೆಚ್ಚಿಸಿಕೊಂಡಿತ್ತು.

English summary

SEBI bars DLF, six company executives from markets for 3 years

Regulator Sebi has barred realty major DLF, as also six top executives including Chairman K P Singh, from securities markets for three years, after finding the company guilty of "active and deliberate suppression" of material information at the time of its public offer. Those prohibited from the markets including Singh's son Rajiv Singh (Vice Chairman) and daughter Pia Singh (Whole Time Director), Sebi said in its order. 
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X