For Quick Alerts
ALLOW NOTIFICATIONS  
For Daily Alerts

ಸೆಬಿ ನಿಷೇಧ, ನೆಲ ಕಚ್ಚಿದ ಡಿಎಲ್ಎಫ್ ಷೇರು

By Mahesh
|

ಮುಂಬೈ, ಅ.14: ಡಿಎಲ್ಎಫ್ ಅಧ್ಯಕ್ಷ ಕೆಪಿ ಸಿಂಗ್ ಸೇರಿದಂತೆ ಸಂಸ್ಥೆಯ ಪ್ರಮುಖ ಆರು ಅಧಿಕಾರಿಗಳಿಗೆ ಷೇರು ಪೇಟೆ ಕಡೆ ಮೂರು ವರ್ಷಗಳ ಕಾಲ ತಲೆ ಹಾಕದಂತೆ ಸೆಕ್ಯೂರೀಟೀಸ್ ಮತ್ತು ಎಕ್ಸ್‌ಚೆಂಜ್‌ ಬೋರ್ಡ್[ಸೆಬಿ] ನಿರ್ಬಂಧ ಹೇರಿದ ಬೆನ್ನಲ್ಲೇ ಸಂಸ್ಥೆಯ ಷೇರುಗಳು ನೆಲಕಚ್ಚಿವೆ.

ಕೆಪಿ ಸಿಂಗ್ ಕುಟುಂಬ ಸೇರಿದಂತೆ ಡಿಎಲ್‌ ಎಫ್ ಮ್ಯಾನೆಜಿಂಗ್ ಡೈರೆಕ್ಟರ್ ಟಿಸಿ ಘೋಯಲ್, ಕಾಮೇಶ್ವರ ಸ್ವರೂಪ್ ಮತ್ತು ರಮೇಶ್ ಸಾಕಾ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಸೆಬಿ ಡಿಎಲ್ ಎಫ್ ಸಂಸ್ಥೆಯ ಉಪಾಧ್ಯಕ್ಷ ಕೆಪಿ ಸಿಂಗ್‌ ಪುತ್ರ ರಾಜೀವ್ ಸಿಂಗ್ ಮತ್ತು ಪುತ್ರಿ ಪಿಯಾ ಸಿಂಗ್ ಅವರಿಗೂ ನಿಷೇಧ ಹೇರಿದೆ.[ಮೂರು ವರ್ಷ ನಿಷೇಧದ ಸುದ್ದಿ ಓದಿ]

ಡಿಎಲ್ ಎಫ್ ಸಂಸ್ಥೆ ಷೇರುಗಳು ಮಂಗಳವಾರ ಬೆಳಗ್ಗೆ ಶೇ 27ರಷ್ಟು ಇಳಿಮುಖ ಕಂಡಿದೆ. ಸೋಮವಾರ ಷೇರುಗಳು ಶೇ 4ರಷ್ಟು ಇಳಿಕೆ ಕಂಡಿತ್ತು.

ಸೆಬಿ ನಿಷೇಧ, ನೆಲ ಕಚ್ಚಿದ ಡಿಎಲ್ಎಫ್ ಷೇರು

ಈ ಸಮಯಕ್ಕೆ(12.30) ಬಿಎಸ್ ಇನಲ್ಲಿ 108.90 ಮುಖಬೆಲೆಯ ಷೇರುಗಳು 37.80ರಷ್ಟು ಮೌಲ್ಯವನ್ನು ಕಳೆದುಕೊಂಡು ಶೇ 25.77ರಷ್ಟು ಕುಸಿತ ಕಂಡಿದೆ. ಇದೇ ವೇಳೆ ಎನ್ಎಸ್ಇಯಲ್ಲಿ 108.75 ರು ನಂತೆ ಶೇ 25.97ರಷ್ಟು ಇಳಿಮುಖವಾಗಿದೆ. ಡಿಎಲ್ ಎಫ್ ಷೇರುಗಳ ಸ್ಥಿತಿ ಹೀಗೆ ಇನ್ನಷ್ಟು ಕಾಲ ಮುಂದುವರೆಯುವ ಲಕ್ಷಣಗಳು ಗೋಚರಿಸುತ್ತಿದೆ.

ಸಂಸ್ಥೆ ಮೇಲಿರುವ 19,100 ಕೋಟಿ(3.13 ಯುಎಸ್ ಡಾಲರ್) ರು ಗೂ ಅಧಿಕ ಸಾಲದ ಹೊರೆಯನ್ನು ತಗ್ಗಿಸಲು ಆಸ್ತಿ ಮಾರಾಟವೊಂದೇ ದಾರಿ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸುಮಾರು 10,000 ಕೋಟಿ ವಾರ್ಷಿಕ ಆದಾಯ ಹೊಂದಿರುವ ರಿಯಲ್ ಎಸ್ಟೇಟ್ ಸಂಸ್ಥೆ ಡಿಎಲ್ ಎಫ್ ಮಾರುಕಟ್ಟೆ ಮೌಲ್ಯ 26,000 ಕೋಟಿ ರು ಮೀರುತ್ತದೆ. 20007ರಲ್ಲಿ ಐಪಿಒ ಮೂಲಕ 9.187 ಕೋಟಿ ರು ಗಳಿಸಿ ದಾಖಲೆ ಬರೆದ ಬೆನ್ನಲ್ಲೇ ಮಾರುಕಟ್ಟೆ ಮೌಲ್ಯವನ್ನು 1 ಲಕ್ಷ ಕೋಟಿ ರು((1.2 ಬಿಲಿಯನ್ ಡಾಲರ್)ಗೆ ಹೆಚ್ಚಿಸಿಕೊಂಡಿತು.

English summary

DLF shares slump to record low on SEBI ban order

DLF Ltd shares fell to a record low on Tuesday, wiping out $1.2 billion in market value, after the Securities and Exchange Board of India banned the property giant from capital markets and raised investor concerns about how it will service its debt.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X