For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್ ಹಣ ಬದಲಾವಣೆಗೆ ಬಯಸಿದ್ದೀರಾ?

|

ಕೆಲವೊಂದು ಸಂದರ್ಭ ಮ್ಯೂಚುವಲ್ ಫಂಡ್ ನಲ್ಲಿ ತೊಡಗಿಸಿರುವ ಹಣ ವನ್ನು ಮತ್ತೊಂದೆಡೆ ತೊಡಗಿಸುವುದು ಅನಿವಾರ್ಯ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. ಆದರೆ ನೀವು ಅದೇ ಸಂಸ್ಥೆಯಲ್ಲಿ ಹಣ ಬದಲಾವಣೆ ಮಾಡಲು ನೀವು ಬಯಸಿರುತ್ತೀರಿ. ಈಕ್ವಿಟಿ ಯೋಜನೆಯಿಂದ ಡೆಟ್ ಯೋಜನೆಗೆ ನೀವು ಹಣ ರವಾನಿಸಬೇಕು ಎಂದು ಅಂದುಕೊಳ್ಳುತ್ತೀರಿ. ಆದರೆ ಇದು ಹೇಗೆ ಸಾಧ್ಯ ಎಂಬ ಮಾಹಿತಿ ನಿಮ್ಮ ಬಳಿ ಇರುವುದಿಲ್ಲ.

 

ಹಣ ಬದಲಾವಣೆ ಅಥವಾ ಬೇರೆಡೆಗೆ ತೊಡಗಿಸಲು ಅನೇಕ ಕಾರಣಗಳು ಇರಬಹುದು ಆದರೆ ಪ್ರಮುಖವಾಗಿ ಬ್ಯಾಲೆನ್ಸ್ ಮತ್ತು ಹಿಂದಿರುಗುವ ಮೌಲ್ಯ ಮುಖ್ಯವಾಗುತ್ತದೆ.

 
ಮ್ಯೂಚುವಲ್ ಫಂಡ್ ಹಣ ಬದಲಾವಣೆಗೆ ಬಯಸಿದ್ದೀರಾ?

ಒಂದು ಮ್ಯೂಚುವಲ್ ಫಂಡ್ ಯೋಜನೆಯಿಂದ ಮತ್ತೊಂದಕ್ಕೆ ಬದಲಾವಣೆ ಮಾಡುವುದು ಹೇಗೆ?
ನೀವು ಇಷ್ಟಬಂದ ಯೋಜನೆಗಳಲ್ಲಿ ನಿಮ್ಮ ಹಣ ತೊಡಗಿಸಬಹುದು. ಇನ್ವೆಸ್ಟನಮೆಂಟ್ ಮತ್ತು ಪ್ಲಾನ್ಸ್ ಅನ್ವಯ ಕೆಲಸ ಮಾಡಿಕೊಳ್ಳಬಹುದು. ಎಲ್ಲ ಬಗೆಯ ಬದಲಾವಣೆಗಳ ಕಾರ್ಯತಂತ್ರ ಒಂದೇ ಆಗಿರುತ್ತದೆ. ನೀವು ಮಾಡಬೇಕಾದದ್ದು ಇಷ್ಟೇ, ನೀವು ಹಣ ತೊಡಗಿಸಿರುವ ಸಂಸ್ಥೆಯ ಟ್ರಾನ್ಸಾಕ್ಷನ್ ಸ್ಲಿಪ್ ನ್ನು ಮೊದಲು ಭರ್ತಿ ಮಾಡಬೇಕು. ಇದು ಸಾಮಾನ್ಯವಾಗಿ ಆನ್ ಲೈನ್ ನಲ್ಲಿ ಲಭ್ಯವಿರುತ್ತದೆ.[ಮ್ಯೂಚುವಲ್ ಫಂಡ್ ಹೂಡಿಕೆಗೆ ಮುನ್ನ 7 ಅಂಶ ಗಮನಿಸಿ]

ನಿಮ್ಮ ಅಕೌಂಟ್‌ ಸ್ಟೇಟ್ ಮೆಂಟ್ ಕೆಳಭಾಗದಲ್ಲಿ ಇದೇ ರೀತಿಯ ಸ್ಲಿಪ್ ಲಭ್ಯವಿರುತ್ತದೆ. ಇದನ್ನು ಭರ್ತಿ ಮಾಡಿ ನೀಡಿದರೂ ನಿಮ್ಮ ಕೆಲಸ ಆದಂತೆಯೇ. ನಿಮಗೆ ನೀವು ಹಣ ತೊಡಗಿಸಿರುವ ಕಂಪನಿಯ ಪಿನ್ ಹೊಂದಿದ್ದರೆ ಆನ್ ಲೈನ್ ಮೂಲಕವೇ ಕೆಲಸ ಮುಗಿಸಿಕೊಳ್ಳಬಹುದು.

ಹೂಡಿಕೆ ಬದಲಾವಣೆ ಹೊರೆಯಾಗುತ್ತದೆಯೇ?
ನೀವು ನಿಜವಾಗಿಯೂ ಬದಲಾವಣೆ ಬಯಸಿದ್ದೇ ಆದರೆ ಎಂಟ್ರಿ ಲೋಡ್ ಅಥವಾ ಎಗ್ಸಿಟ್ ಲೋಡ್ ಕಟ್ಟಲೇಬೇಕಾಗುತ್ತದೆ. ಹೊಸ ಮ್ಯೂಚುವಲ್ ಫಂಡ್ ಖರೀದಿಗೆ ಮುಂದಾದರೆ ಎಂಟ್ರಿ ಲೋಡ್ ಅಥವಾ ಹೊರಬರುವುದಾದರೆ ಎಗ್ಸಿಟ್ ಲೋಡ್ ತುಂಬಬೇಕಾದದ್ದು ಅನಿವಾರ್ಯ. ಈ ಶುಲ್ಕಗಳನ್ನು ತುಂಬಲು ಸಿದ್ಧರಿದ್ದರೆ ನೀವು ಬದಲಾವಣೆ ಮಾಡಿಕೊಳ್ಳಲು ಅಡ್ಡಿ ಇಲ್ಲ.

English summary

How to switch or change from one mutual fund scheme to another?

Sometimes you may find it necessary to switch from one mutual fund scheme to another within the same mutual fund house. This can happen for many reasons. Say you are not happy with the performance of a particular mutual fund or scheme and would like to switch or change to another.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X