For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್ KYC ಬಗ್ಗೆ ತಿಳಿದುಕೊಳ್ಳಿ

By Mahesh
|

ಬೆಂಗಳೂರು, ನ.3: ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವಾಗ KYC ಅರ್ಜಿ ತುಂಬುವುದು ಸಾಮಾನ್ಯ ಪ್ರಕ್ರಿಯೆಯಾಗಿತ್ತು. ಅದರೆ, ಈಗ Know Your Customer ಅರ್ಜಿಗಳನ್ನು ತುಂಬ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲಾಗಿದೆ. ಪ್ರತ್ಯೇಕವಾಗಿ ವೈಯಕ್ತಿಕ ದಾಖಲೆ ತುಂಬಲು ಮತ್ತೊಂದು ಅರ್ಜಿ ನೀಡಲೇಬೇಕಿದೆ.

 

ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ(ಸೆಬಿ) ನಿರ್ದೇಶನದಂತೆ ನಿಮ್ಮ ಆದಾಯದ ಸಂಪೂರ್ಣ ವಿವರಗಳನ್ನು ಮ್ಯೂಚುವಲ್ ಫಂಡ್ ಸಂಸ್ಥೆಗಳಿಗೆ ನೀಡಬೇಕಾಗುತ್ತದೆ.

 

ಕಳೆದ ಡಿಸೆಂಬರ್ ತಿಂಗಳಿನಲ್ಲೇ ಈ ಹೊಸ ನಿಯಮ ಜಾರಿಗೆ ಬಂದಿದೆ. ಆದರೆ, ಎಲ್ಲೆಡೆ ಅನುಷ್ಠಾನ ಮಾತ್ರ ವಿಳಂಬವಾಗಿದೆ. ಈ ಮುಂಚೆ KYC ಅರ್ಜಿಯಲ್ಲೇ ನಿಮ್ಮ ಹೆಸರು, ವಿಳಾಸ, ವಾರ್ಷಿಕ ಆದಾಯ ಇನ್ನಿತರ ವಿವರಗಳನ್ನು ನೀಡಬೇಕಿತ್ತು. [ಆಫರ್ ಡಾಕ್ಯೂಮೆಂಟ್ ಎಂದರೇನು?]

ಮ್ಯೂಚುವಲ್ ಫಂಡ್ KYC ಬಗ್ಗೆ ತಿಳಿದುಕೊಳ್ಳಿ

ಅದರೆ, ಗ್ರಾಹಕರ ಆದಾಯ, ವ್ಯಯ ವಿವರಗಳ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಮ್ಯೂಚುವಲ್ ಫಂಡ್ ಸಂಸ್ಥೆಗಳು ಸೆಬಿಗೆ ತಿಳಿಸಿದ್ದರಿಂದ ಹೊಸ ಕ್ರಮಕ್ಕೆ ನಾಂದಿ ಹಾಡಲಾಗಿದೆ. ಇದರಿಂದಾಗಿ ಹೂಡಿಕೆದಾರರ ವಾರ್ಷಿಕ ಆದಾಯದ ಸಂಪೂರ್ಣ ಮಾಹಿತಿ ಲಭ್ಯವಾಗುತ್ತಿದೆ.

ಹೀಗಾಗಿ ಇನ್ಮುಂದೆ ಕೆವೈಸಿ ಅರ್ಜಿಗಳು ಭಾಗ 1 ಹಾಗೂ ಭಾಗ 2 ಆಗಿ ಗ್ರಾಹಕರಿಗೆ ಸಿಗಲಿದೆ. ಮೊದಲ ಭಾಗದಲ್ಲಿ ಸ್ವವಿವರಗಳು ಹಾಗೂ ಎರಡನೇ ಭಾಗದಲ್ಲಿ ಆದಾಯ ವಿವರಗಳನ್ನು ದಾಖಲಿಸಬೇಕಾಗುತ್ತದೆ.

ಮ್ಯೂಚುವಲ್ ಫಂಡ್ ಎಷ್ಟು ವರ್ಷದ ಅವಧಿಗೆ ಇದೆ ಒಂದು ವರ್ಷ, ಎರಡು ವರ್ಷ, ಮೂರು ವರ್ಷ ರಿಟರ್ನ್ಸ್, Sharpe ಅನುಪಾತ ಹಾಗೂ ಮಾಹಿತಿ ಅನುಪಾತದ ಮೇಲೆ ಅವಲಂಬಿಸಿರುತ್ತದೆ. ಹೀಗಾಗಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಹೂಡಿಕೆಗೆ ಮುನ್ನ ಈ ಅಂಶಗಳನ್ನು ಗಮನಿಸಿ ಜೊತೆಗೆ ಹೂಡಿಕೆ ಮಾಡುವ ಮುನ್ನ ಸರಿಯಾದ ಅರ್ಜಿ ನಮೂನೆಯನ್ನು ಸಲ್ಲಿಸಿ.

English summary

KYC forms in Mutual Funds undergo a change; Individuals need to fill the right one

In mutual funds, the Know Your Customer (KYC) forms have changed and you need to give your personal details in separate forms henceforth. According to the requirements specified by the Securities and Exchange Board of India (SEBI)
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X