For Quick Alerts
ALLOW NOTIFICATIONS  
For Daily Alerts

ಬಾಡಿಗೆ ಕರಾರು ಪತ್ರ ತಯಾರಿ ಈಗ ಸುಲಭ!

By Mahesh
|

ಬೆಂಗಳೂರು, ನ.24: ಬಾಡಿಗೆಮನೆಯಲ್ಲಿ ವಾಸಿಸುವವರ ಅನುಕೂಲಕ್ಕಾಗಿ ಸುಲಭ ವಿಧಾನದಲ್ಲಿ ಬಾಡಿಗೆ ಕರಾರು ಪತ್ರ ತಯಾರಿಸುವ ವೆಬ್ ಸೈಟ್ ಬಗ್ಗೆ ನಿಮಗೆ ಇಲ್ಲಿ ಪರಿಚಯಿಸಲಾಗುತ್ತಿದೆ.

ಬಾಡಿಗೆ ಕರಾರು ಒಪ್ಪಂದ(rental agreement) ತಯಾರಿಸಲು housing.com ವೆಬ್ ತಾಣಕ್ಕೆ ಭೇಟಿ ಕೊಡಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಕರಾರನ್ನು ಬದಲಾಯಿಸಿಕೊಳ್ಳಿ. ಮನೆ, ಪಾರ್ಕಿಂಗ್, ಲಾಕ್ ಇನ್, ಅಪಾರ್ಟ್ಮೆಂಟ್ ಹೀಗೆ ವಿವಿಧ ರೀತಿಯ ಕರಾರು ಪತ್ರಗಳ ತಯಾರಿ ಕೂಡಾ ಸಾಧ್ಯವಿದೆ.
ಹೌಸಿಂಗ್.ಕಾಂನಲ್ಲಿ ಮಾಹಿತಿಗಳನ್ನು ತುಂಬಿದ ಮೇಲೆ ಒಪ್ಪಂದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿ ಪ್ರಕ್ರಿಯೆ ಪೂರ್ಣಗೊಳಿಸಿ ನಿಮ್ಮ ಮನೆ ಬಾಗಿಲಿಗೆ ಪತ್ರ ತಲುಪಲಿದೆ.

ಈ ಬಾಡಿಗೆ ಕರಾರು ಪತ್ರವನ್ನು ವಕೀಲರು ಹಾಗೂ ಕಾನೂನಿನ ತಜ್ಞರು ಪರಿಶೀಲಿಸಿ, ಕರಾರುವಾಕ್ ಆಗಿದೆ ಎಂದು ಪ್ರಮಾಣೀಕರಿಸಿದ ಮೇಲೆ ನಿಮ್ಮ ಕೈ ಸೇರುವುದರಿಂದ ಪತ್ರದ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ.

ಬಾಡಿಗೆ ಕರಾರು ಪತ್ರ ತಯಾರಿ ಈಗ ಸುಲಭ!

ಮೊದಲ ಬಾರಿಗೆ ವೆಬ್ ತಾಣಕ್ಕೆ ಭೇಟಿ ನೀಡುವವರು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಫೇಸ್ ಬುಕ್ ಅಥವಾ ಗೂಗಲ್ ಲಾಗ್ ಇನ್ ಐಡಿ ಕೂಡಾ ಬಳಸಬಹುದು.

ಬಾಡಿಗೆ ಕರಾರು ಪತ್ರ: ಮನೆ ಮಾಲೀಕ ಹಾಗೂ ಬಾಡಿಗೆದಾರರ ನಡುವಿನ ಕಾನೂನಿನ ಒಪ್ಪಂದವಾಗಿದ್ದು, ಮನೆ ಯಲ್ಲಿ ವಾಸ, ಮನೆಯ ವಸ್ತುಗಳ ಬಳಕೆ, ಬಾಡಿಗೆ, ಅಡ್ವಾನ್ಸ್, ಬಾಡಿಗೆ ಹೆಚ್ಚಳ ಇನ್ನಿತರ ವಿವರಗಳನ್ನು ಒಳಗೊಂಡಿರುತ್ತದೆ.

English summary

The Easiest Way to Create a Rental Agreement in India!

Now, you can create a rental agreement sitting on the couch and without moving an inch. Often it takes some time especially to fill all the details and going through the procedure.
Story first published: Monday, November 24, 2014, 13:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X