For Quick Alerts
ALLOW NOTIFICATIONS  
For Daily Alerts

ಡೆಬಿಟ್ ಕಾರ್ಡ್ ಬಳಸಿ ಆದಾಯ ತೆರಿಗೆ ತುಂಬುವುದು ಹೇಗೆ?

|

ಇಂದು ತೆರಿಗೆ ತುಂಬುವ ವಿಧಾನ ತಂತ್ರಜ್ಞಾನದ ನೆರವಿನಿಂದ ತುಂಬಾ ಸರಳವಾಗಿದೆ. ಸರತಿ ಸಾಲಿನಲ್ಲಿ ನಿಂತುಕೊಂಡು ಅಥವಾ ಸರಿಯಾದ ಶಾಖೆ ಹುಡುಕುವುದರಿಂದ ಮುಕ್ತಿ ಸಿಕ್ಕಿದೆ.

ನೇರ ತೆರಿಗೆಗಳಾದ ಆದಾಯ ತೆರಿಗೆ, ಟಿಡಿಎಸ್ ಗಳನ್ನು ನಿಮ್ಮ ಎಟಿಎಂ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಸುಲಭವಾಗಿ ಪಾವತಿ ಮಾಡಬಹುದು. ಹಾಗಾದರೆ ತೆರಿಗೆಯನ್ನು ಆನ್ ಲೈನ್ ಮೂಲಕ ಪಾವತಿ ಮಾಡುವುದು ಹೇಗೆ? ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಇಲ್ಲಿದೆ ಉತ್ತರ.[ಸುರಕ್ಷಿತ ಆನ್ ಲೈನ್ ಬ್ಯಾಂಕಿಂಗ್ ಗೆ 7 ಸೂತ್ರ]

ಡೆಬಿಟ್ ಕಾರ್ಡ್ ಬಳಸಿ ಆದಾಯ ತೆರಿಗೆ ತುಂಬುವುದು ಹೇಗೆ?

ಎಸ್ ಬಿಐ ಡೆಬಿಟ್ ಕಾರ್ಡ್ ನ್ನು ಉದಾಹರಣೆಯಾಗಿ ತೆಗೆದುಕೊಂಡು ಕೆಳಗಿನ ಹಂತಗಳನ್ನು ನೋಡಬಹುದು. ನೆಟ್ ಬ್ಯಾಂಕಿಂಗ್ ಮೂಲಕವೂ ತೆರಿಗೆ ತುಂಬಲು ಸಾಧ್ಯವಿದೆ. ನೀವು ಇದಕ್ಕಾಗಿ ಒನ್ ಟೈಮ್ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿಂದ ದೊರೆಯುವ ಪಾಸ್ ವರ್ಡ್ ಮೂಲಕ ಸುಲಭವಾಗಿ ಕಾರ್ಯನಿರ್ವಹಿಸಬಹುದು.

ಮೊದಲಿಗೆ ಸಿಬಿಡಿಟಿ (ಕಂದಾಯ ಇಲಾಖೆ) ಅಂತರ್ಜಾಲ ತಾಣಕ್ಕೆ ಪ್ರವೇಶ ಪಡೆಯಬೇಕಾಗುತ್ತದೆ. ಅಲ್ಲಿ ನಿಮಗೆ ತೆರಿಗೆ ಪಾವತಿ ಸಂಬಂಧದ ಮಾಹಿತಿಗಳು ದೊರೆಯಲಿದ್ದು ಮುಂದುವರಿಬಹುದು.[ಭಾರತದಲ್ಲಿ ಇ-ಇನ್ಶೂರೆನ್ಸ್ ಖಾತೆ ತೆರೆಯುವುದು ಹೇಗೆ?]

1. ಚಲನ್ ನಂಬರ್ ಅಗತ್ಯವಿದ್ದರೆ ಮೊದಲು ಭರ್ತಿ ಮಾಡಿ
2. ಪಾನ್ ನಂಬರ್ ಹಾಕಿದ ನಂತರ, ನಿಮ್ಮ ವಿಳಾಸ, ಯಾವ ವರ್ಷದ ತೆರಿಗೆ, ಮೆಜರ್ ಹೆಡ್, ಮೈನರ್ ಹೆಡ್ ಮತ್ತು ಹಣ ತುಂಬುವ ಮೊತ್ತವನ್ನು ತುಂಬಿರಿ.
3. ಬ್ಯಾಂಕ್ ಗಳ ಪಟ್ಟಿಯೊಂದು ನಿಮಗೆ ಕಾಣಸಿಗುತ್ತದೆ. ಅಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಆಯ್ಕೆ ಮಾಡಿಕೊಳ್ಳಿ
4. ನೀವು ಇದೀಗ ಎಸ್ ಬಿಐ ಆನ್ ಲೈನ್ ಗೆ ಪ್ರವೇಶ ಪಡೆಯುತ್ತೀರಿ
5. ಇಲ್ಲಿ ನಿಮಗೆ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಎಟಿಎಂ ಕಾರ್ಡ್ ಆಯ್ಕೆ ಸಿಗುತ್ತದೆ.
6. ಎಟಿಎಂ ಅಥವಾ ಡೆಬಿಟ್ ಕಾರ್ಡ್ ಆಯ್ಕೆ ಮಾಡಿಕೊಂಡು ಸಬ್ ಮಿಟ್ ಬಟನ್ ಕ್ಲಿಕ್ ಮಾಡಿ. ಇದಾದ ನಂತರ ನೀವು ಪೆಮೆಂಟ್ ಗೇಟ್ ವೇ ತಾಣಕ್ಕೆ ಪ್ರವೇಶ ಪಡೆಯುತ್ತೀರಿ.
7. ಕಾರ್ಡ್ ಗೆ ಸಂಬಂಧಿಸಿದ ಮಾಹಿತಿ ಭರ್ತಿ ಮಾಡಬೇಕಾಗುತ್ತದೆ. ಕಾರ್ಡ್ ನಂಬರ್, ಸಿವಿವಿ, ಪಿನ್ ಮತ್ತಿತರ ಮಾಹಿತಿ ತುಂಬಬೇಕಾಗುತ್ತದೆ.
8. ನಿಮ್ಮ ಮೂಲ ಕೋಡ್ ಮತ್ತು ಪಾಸ್ ವರ್ಡ್ ನೀಡಬೇಕು.
9. ಸಬ್ ಮಿಟ್ ಬಟನ್ ಕ್ಲಿಕ್ ಮಾಡಬೇಕು. ಮತ್ತೆ ನೀವು ಎಸ್ ಬಿಐ ಗೆ ನಿಮ್ಮ ಖಾತೆಯ ನಂಬರ್ ನೊಂದಿಗೆ ಪ್ರವೇಶ ಪಡೆಯುತ್ತೀರಿ.
10. ಈಗ ನಿವ್ವಳ ತೆರಿಗೆ ಮೊತ್ತವನ್ನು ಭರ್ತಿ ಮಾಡಿ. ನೀವು ಈಗ ಕೊನೆಯ ಹಂತದಲ್ಲಿದ್ದು ಎಲ್ಲಾ ಸರಿಯಿದೆಯೇ? ಎಂದು ಮತ್ತೊಮ್ಮೆ ತಾಣ ಪ್ರಶ್ನಿಸುತ್ತದೆ.
11. ಎಲ್ಲಾ ಮಾಹಿತಿಗಳನ್ನು ಇನ್ನೊಮ್ಮೆ ಪರಿಶೀಲಿಸಿ ಕನ್ ಫರ್ಮ್ ಬಟನ್ ಕ್ಲಿಕ್ ಮಾಡಿ.

ಕೊನೆ ಮಾತು: ಇದಾದ ನಂತರ ಒಂದು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ. ಇಲ್ಲವೇ ಪೇಜ್ ನ್ನು ಡೌನ್ ಲೋಡ್ ಮಾಡಿಟ್ಟುಕೊಳ್ಳುವುದು ಉತ್ತಮ.(ಗುಡ್ ರಿಟರ್ನ್ಸ್.ಇನ್)

English summary

How to Pay Income Tax Through SBI Debit Card?

These days paying your taxes are becoming easier, thanks to technology. Long queues and matching with branch timing was a difficult task earlier. Now, you can now pay Direct Taxes such as Income Tax, TDS etc with the help of your ATM-cum-Debit Card issued. Here, to simplify we have considered SBI debit card.
Story first published: Monday, December 1, 2014, 15:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X