For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್ ಹಣ ಹೂಡಿಕೆ ಎದುರಿಸುವ ಅಪಾಯಗಳು

|

ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಒಂದು ರೀತಿಯ ರಿಸ್ಕ್ ಇದ್ದಂತೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ನೀವು ಯಾವ ಬಗೆಯ ಫಂಡ್ ಗಳ ಮೇಲೆ ಹಣ ಹೂಡಿಕೆ ಮಾಡುತ್ತಿದ್ದೀರಿ ಅನ್ನೋದು ಬಹಳ ಸಹ ಮುಖ್ಯವಾಗುತ್ತದೆ.

ಯಾವುದಕ್ಕೂ ಇಂಗ್ಲಿಷ್ ಗಾದೆಯೊಂದನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ. "Mutual fund investments are subject to market risks ... ". ಕೆಲವೊಂದು ಷೇರು ಮಾರುಕಟ್ಟೆಗಳಲ್ಲಿ ಅತಿ ಹೆಚ್ಚಿನ ಅಪಾಯ ಎದುರಾಗುವ ಸಂಭವವೂ ಇರುತ್ತದೆ. ಗಿಲ್ಟ್ ವಿಭಾಗದಲ್ಲಿ ಹೂಡಿಕೆ ಮಾಡಿದರೆ ಅಪಾಯವೂ ಕಡಿಮೆ. ಲಾಭವೂ ಕಡಿಮೆ.[ಮುಸ್ಲಿಮರಿಗಾಗಿ ಎಸ್ ಬಿಐನಿಂದ ಮ್ಯೂಚುವಲ್ ಫಂಡ್]

ಮ್ಯೂಚುವಲ್ ಫಂಡ್ ಹಣ ಹೂಡಿಕೆ ಎದುರಿಸುವ ಅಪಾಯಗಳು

ಹಾಗಾದರೆ ಮ್ಯೂಚುವಲ್ ಫಂಡ್ ಹೂಡಕೆ ಎದುರಿಸುವ ಅಪಾಯಗಳು ಯಾವವು? ಎಂಬುದನ್ನು ನೋಡೋಣ
ಮಾರುಕಟ್ಟೆ ಬದಲಾವಣೆ
ಮಾರುಕಟ್ಟೆಯಲ್ಲಿನ ಪ್ರತಿದಿನದ ಬದಲಾವಣೆ, ನೀವು ಬಂಡವಾಳ ಹೂಡಿದ್ದ ಕಂಪನಿಯ ಅವನತಿ, ಎನ್ ಎವಿ(ನೆಟ್ ಅಸೆಟ್ ವ್ಯಾಲ್ಯೂ)ಯಲ್ಲಿನ ಬದಲಾವಣೆ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತಿರಬೇಕು.

ಷೇರುಗಳ ಮುಖಬೆಲೆ ಬದಲಾವಣೆ
ದಿಢೀರ್ ಎಂದು ಬದಲಾಗುವ ಷೇರುಗಳ ಮುಖಬೆಲೆ ನಿಮ್ಮ ಬಂಡವಾಳ ಹೂಡಿಕೆಗೆ ತೊಂದರೆ ತರಬಹುದು. ಡೆಟ್ ಅಥವಾ ಗಿಲ್ಟ್ ಫಂಡ್ ಗಳ ಮೇಲೆ ವಿಧಿಸಿದ್ದ ಬಡ್ಡಿ ದರದಲ್ಲಿ ಗಣನೀಯ ಏರುಪೇರಾದಾಗ ಸಮಸ್ಯೆ ಉಂಟಾಗುತ್ತದೆ. ಬಂಡವಾಳ ಹೂಡಿಕೆ ಕಡಿಮೆಯಾದಾಗ ಅಥವಾ ಲಿಕ್ವಿಡಿಟಿ ಸಂದರ್ಭಗಳು ಎದುರಾದಾಗ ಅಥವಾ ನೀವು ಹೂಡಕೆ ಮಾಡಿದ ಕಂಪನಿಯ ಷೇರು ಖರೀದಿಗೆ ಜನ ಮುಂದೆ ಬರದಿದ್ದಾಗಲೂ ನಷ್ಟ ಅನುಭವಿಸಬೇಕಾಗಬಹುದು.[ಕಡಿಮೆ ಅವಧಿಗೆ ಹೆಚ್ಚಿನ ರಿಟರ್ನ್ಸ್ ತರುವ 6 ಯೋಜನೆಗಳು]

ಡಿಪಾಲ್ಟ್ ರಿಸ್ಕ್
ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬಂಥ ಸ್ಥಿತಿ ಇಲ್ಲಿ ಕಂಡುಬರುತ್ತದೆ. ಡೆಟ್ ಅಥವಾ ಬಾಂಡ್ ಗಳಲ್ಲಿ ಹೂಡಿಕೆ ಮಾಡಿದ್ದೀರಿ ಎಂದು ಇಟ್ಟುಕೊಳ್ಳಿ. ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡಿದ ಕಂಪನಿಗೆ ಸಂಬಂಧಿಸಿದ ಷೇರುಗಳು ಪಾತಾಳ ಸೇರಿದರೆ ಇತ್ತ ನಿಮ್ಮ ಹೂಡಿಕೆ ಹಣಕ್ಕೂ ಆತಂಕ ಎದುರಾಗುತ್ತದೆ. ಇದೊಂದು ಸ್ವಯಂಚಾಲಿತ ಪ್ರಕ್ರಿಯೆಯಾಗಿದ್ದು ಕಣ್ಣಿಗೆ ಕಾಣಸಿಗಲ್ಲ.

ಕ್ರೆಡಿಟ್ ರಿಸ್ಕ್
ವಿವಿಧ ಏಜೆನ್ಸಿಗಳು ಕಂಪನಿಗಳ ಪ್ರಗತಿಯನ್ನು ರೇಟಿಂಗ್ ಮಾಡುತ್ತವೆ. ಕೆಲವೊಮ್ಮೆ ಮ್ಯೂಚುವಲ್ ಫಂಡ್ ಆಯ್ಕೆ ಮಾಡಿಕೊಳ್ಳುವ ಭರದಲ್ಲಿ ಶುಲ್ಕ ರೂಪದಲ್ಲಿ ಹೆಚ್ಚಿನ ಹಣ ನೀಡಿರುತ್ತೇವೆ. ಅತಿ ಹೆಚ್ಚಿನ ಮರುಪಾವತಿ ನಿರೀಕ್ಷೆಯಲ್ಲಿರುತ್ತೇವೆ. ಆದರೆ ಈ ಬದಲಾವಣೆಗಳು ನಿಮ್ಮ ಕಿಸೆಗೆ ಕನ್ನ ಹಾಕಬಹುದು. ಎಂಟ್ರಿ ಲೋಡ್, ಎಗ್ಸಿಟ್ ಲೋಡ್ ಗಾಗಿ ಮತ್ತೆ ಹಣ ವ್ಯಯಿಸುವ ಪರಿಸ್ಥಿತಿ ಎದುರಾಗಬಹುದು. (ಗುಡ್ ರಿಟರ್ನ್ಸ್‌. ಇನ್)

English summary

5 Risks Involved in Mutual Fund Investing

Investing in Mutual Fund can be risky depending on the the type of fund you are investing. Don't forget the famous sentence "Mutual fund investments are subject to market risks ... ". Such as investing is stock market will carry high risk and vastly depend on the market performance. If you are looking to invest in Gilt bonds, risk will be less.
Story first published: Friday, December 5, 2014, 13:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X