For Quick Alerts
ALLOW NOTIFICATIONS  
For Daily Alerts

30,000 ಸಮೀಪಕ್ಕೆ ಷೇರು ಮಾರುಕಟ್ಟೆ ಜಿಗಿತ

|

ಮುಂಬೈ, ಜ. 30: ಷೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಹಾಗೂ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಹೊಸ ದಾಖಲೆಯ ಎತ್ತರವನ್ನು ತಲುಪಿದೆ.

ಬೆಳಗಿನ ವಹಿವಾಟಿನಲ್ಲೇ ಏರಿಕೆಕಂಡುಬಂದಿದ್ದು 62.39 ಅಂಕಗಳ ಮುನ್ನಡೆ ಸಾಧಿಸಿದ ಸೆನ್ಸೆಕ್ಸ್ 29,844.16 ಅಂಕಗಳನ್ನು ತಲುಪಿ ದಾಖಲೆ ಬರೆಯಿತು. ನಿಫ್ಟಿ ಸಹ 44.25 ಅಂಕಗಳ ಮುನ್ನಡೆ ಸಾಧಿಸಿ 8,996.60 ಅಂಕ ದಾಖಲಿಸಿತು.[ತರಂಗಾಂತರ ಹಂಚಿಕೆ ನಂತರ ಮೊಬೈಲ್ ದರ ದುಪ್ಪಟ್ಟು?]

30,000 ಸಮೀಪಕ್ಕೆ ಷೇರು ಮಾರುಕಟ್ಟೆ ಜಿಗಿತ

ಕೇಂದ್ರ ಸರ್ಕಾರ ಕೋಲ್ ಇಂಡಿಯಾದ ಶೇ. 10 ರಷ್ಟು ಷೇರನ್ನು ಮಾರಾಟ ಮಾಡಲು ಮುಂದಾಗಿರುವುದು ಮಾರುಕಟ್ಟೆಯಲ್ಲಿನ ಏರಿಕೆಗೆ ಕಾರಣವಾಗಿದೆ. ಜತೆಗೆ ವಿದೇಶಿ ಹೂಡಿಕೆದಾರರ ಆಸಕ್ತಿ, ಬಜೆಟ್ ಕುರಿತ ಆಶಾಭಾವನೆಗಳು ಹೊಸ ಸಂಚಲನಕ್ಕೆ ಕಾರಣವಾಗಿವೆ.

ಕೋಲ್ ಇಂಡಿಯಾದ ಜತೆಗೆ, ಬಿಎಚ್ ಇಎಲ್, ಎನ್ ಟಿಪಿಸಿ, ಎಚ್ ಸಿಎಲ್, ಅಶೋಕ್ ಲೈಲೆಂಡ್, ಎಚ್ ಸಿಸಿ ಷೇರುಗಳು ಗಮನಾರ್ಹ ಏರಿಕೆ ದಾಖಲಿಸಿ ಮುನ್ನುಗ್ಗುತ್ತಿವೆ. ಐಟಿ ವಿಭಾಗದ ಷೇರುಗಳೊಂದಿಗೆ ಸಾರ್ವಜನಿಕ ರಂಗದ ಬ್ಯಾಂಕುಗಳು, ತೈಲ ಹಾಗೂ ಅನಿಲ ಕಂಪೆನಿಗಳ ಷೇರುಗಳು ಮಾರಾಟ ಭರಾಟೆಯಲ್ಲಿ ಏರಿಕೆ ಸಾಧಿಸಿವೆ.

English summary

Sensex hits another peak of 29,844.16; Nifty at 8,996.60

The Sensex is just about three hundred points away from hitting a record 30,000 points. As we write the markets keep scaling new highs. It's extremely difficult to find cheap buys at the current levels as share prices keeping scaling new highs.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X