For Quick Alerts
ALLOW NOTIFICATIONS  
For Daily Alerts

ತರಂಗಾಂತರ ಹರಾಜಿಂದ 1 ಲಕ್ಷ ಕೋಟಿ ಆದಾಯ ನಿರೀಕ್ಷೆ

|

ತರಂಗಾಂತರ ಹಂಚಿಕೆ ಪ್ರಕ್ರಿಯೆ ಮಾರ್ಚ್ 4 ರಿಂದ ಆರಂಭವಾಗಲಿದ್ದು ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂ. ಗೂ ಅಧಿಕ ಆದಾಯ ನಿರೀಕ್ಷೆ ಮಾಡುತ್ತಿದೆ.

ಟೆಲಿಕಾಂ ಇಂಡಸ್ಟ್ರಿಗಳು ತರಂಗಾಂತರ ಹಂಚಿಕೆ ಮೇಲೆ 20,135 ಕೋಟಿ ಹೂಡಿಕೆ ಮಾಡಲಿದ್ದಾರೆ. ಕೋಲ್ ಇಂಡಿಯಾ ಷೇರು ಮಾರಾಟದಿಂದ ಗಳಿಸಿದ್ದಕ್ಕಿಂತ ಹೆಚ್ಚಿನ ಆದಾಯ ಗಳಿಸುವ ಲೆಕ್ಕಾಚಾರ ಕೇಂದ್ರ ಸರ್ಕಾರದ್ದಾಗಿದೆ.[ತರಂಗಾಂತರ ಹಂಚಿಕೆ ನಂತರ ಮೊಬೈಲ್ ದರ ದುಪ್ಪಟ್ಟು?]

ತರಂಗಾಂತರ ಹರಾಜಿಂದ 1 ಲಕ್ಷ ಕೋಟಿ ಆದಾಯ ನಿರೀಕ್ಷೆ

ಆರಂಭಿಕವಾಗಿ ಸರ್ಕಾರ 12,000 ಕೋಟಿಗೆ ಬಲೆ ನಿಗದಿ ಮಾಡಿದ್ದರೂ ಸಹ ಈಗಾಗಲೇ ಟೆಲಿಕಾಂ ಕಂಪನಿಗಳು 20,435 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿವೆ. ಈ ಪ್ರಮಾಣದ ಹೂಡಿಕೆಯೇ ತರಂಗಾಂತರ ಹಂಚಿಕೆಯ ಪ್ರಮುಖ್ಯ ಮತ್ತು ಅದರಲ್ಲಿರುವ ಲಾಭವನ್ನು ತೋರಿಸುತ್ತದೆ.

ಹಿಂದಿರುಗುವ ಖಾತ್ರಿ ಹಣ(ಇಎಂಡಿ)ಯೇ ಈ ಮಟ್ಟದಲ್ಲಿರುವುದುರಿಂದ ಸರ್ಕಾರಕ್ಕೆ ಅಪಾರ ಲಾಭವಾಗುವುದು ಖಂಡಿತ, ವ್ಯವಸ್ಥಿತವಾದ ಹರಾಜು ಪ್ರಕ್ರಿಯೆ ಮೂಲಕ ಆದಾಯ ಗಳಿಕೆ ಮುಖ್ಯ ಉದ್ದೇಶ ಎಂದು ಟೆಲಿಕಾಂ ಸಚಿವಾಲಯ ತಿಳಿಸಿದೆ. ಸರ್ಕಾರ ಮೂಲ ಧನದ ಆಧಾರದಲ್ಲಿ ಮತ್ತು 2ಜಿ ಮತ್ತು 3ಜಿ ತರಂಗಾಂತರ ಹಂಚಿಕೆಯ ಮೂಲಕ 82 ಸಾವಿರ ಕೋಟಿ ಹಣ ಆದಾಯ ನಿರೀಕ್ಷೆ ಮಾಡಲಾಗುತ್ತಿದೆ.

3ಜಿ ಮೆಗಾ ಹರ್ಟ್ಜ್ ವೊಂದಕ್ಕೆ ಸರ್ಕಾರ 2,100 ರೂ. ನಿಗದಿ ಮಾಡಿದೆ. ಈ ಹರಾಜಿನ ಮೂಲಕ 17,555 ಗಳಿಕೆ ಗುರಿ ಹೊಂದಲಾಗಿದೆ. ಉಳಿದಂತೆ 2 ಜಿಯ 800 MHz, 900 Mhz ಮತ್ತು 1800 MHz ಬ್ಯಾಂಡ್ ಗಳ ಹರಾಜು ಮಾಡಿ 64,840 ಕೋಟಿ ಆದಾಯ ಗಳಿಸಲಾಗುವುದು.

ಕೋಲ್ ಇಂಡಿಯಾ ಷೇರು ಹರಾಜು ಮೂಲಕ ಒಂದು ಲಕ್ಷ ಕೋಟಿ ರೂ. ಗೂ ಅಧಿಕ ಆದಾಯ ಗಳಿಸಲಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಈ ಬಾರಿ ನೀಡುವ ತರಂಗಾಂತರ ಹಂಚಿಕೆ ಹಕ್ಕು 2010 ಕ್ಕೆ ಹೋಲಿಸಿದರೆ ತುಂಬಾ ಕಡಿಮೆ. ಆದರೆ ಹಕ್ಕು ಪಡೆದುಕೊಳ್ಳಲು ಹೆಚ್ಚಿನ ಹಣ ನೀಡಬೇಕಾಗಿರುವುದು ಅನಿವಾರ್ಯ.

ಮಾರ್ಚ್ 4 ರಿಂದ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ಆರ್ ಜೆಯೋ 4,500 ಕೋಟಿ ರೂ. ಹೂಡಿಕೆಗೆ ಮುಂದೆ ಬಂದಿದೆ. ಉಳಿದಂತೆ ಭಾರತಿ ಏರ್ ಟೆಲ್ 4,336 ಕೋಟಿ, ಐಡಿಯಾ ಸೆಕ್ಯುಲರ್ 4,000 ಕೋಟಿ, ವೊಡಾಫೋನ್ 3,700 ಕೋಟಿ, ಟಾಟಾ ಟೆಲಿ ಸರ್ವೀಸಸ್ Rs 1,500 ಕೋಟಿ, ರಿಲಯನ್ಸ್ ಕಮ್ಯೂನಿಕೇಶನ್ಸ್ 1,175 ಕೋಟಿ, ಯುನಿನಾರ್ 724.95 ಕೋಟಿ ಮತ್ತು ಏರ್ ಸೆಲ್ 500 ಕೋಟಿ ಹೂಡಿಕೆ ಮಾಡಿವೆ ಎಂದು ಟೆಲಿಕಾಂ ಸಚಿವಾಲಯ ತಿಳಿಸಿದೆ.

2010 ರಲ್ಲಿ 9 ಕಂಪನಿಗಳು ಸೇರಿ 3ಜಿಗೆ 3,515 ಕೋಟಿ, 11 ಕಂಪನಿಗಳು ಬ್ರಾಡ್ ಬ್ಯಾಂಡ್ ಸೇವೆಗೆ 2,291 ಕೋಟಿ ರೂ. ನೀಡಿ ಹರಾಜು ಪಡೆದುಕೊಂಡಿದ್ದೇವು. ಅದಕ್ಕೆ ಹೋಲಿಸಿದರೆ ಈ ಬಾರಿಯ ಮೊತ್ತಕ್ಕೆ ಅಜಗಜಾಂತರ ವ್ಯತ್ಯಾಸವಾಗಿರುವುದನ್ನು ಕಾಣುತ್ತಿದ್ದೇವೆ(ಗುಡ್ ರಿಟರ್ನ್ಸ್.ಇನ್)

English summary

Spectrum Auction May Fetch Over Rs 1 Lakh Crores

With telecom operators depositing a huge Rs 20,435 crore as earnest money for spectrum auction, government is set to garner over Rs 1 lakh crore from sale of radiowaves, after generating similar amount through sale of coal blocks, reported PTI.
 
Story first published: Monday, February 23, 2015, 16:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X