For Quick Alerts
ALLOW NOTIFICATIONS  
For Daily Alerts

30 ಸಾವಿರ ಮುಟ್ಟಿದ ಸೆನ್ಸೆಕ್ಸ್: ಷೇರುಪೇಟೆ ಹೊಸ ದಾಖಲೆ

|

ನವದೆಹಲಿ, ಮಾ. 3 : 265 ಅಂಕಗಳನ್ನು ಗಳಿಸಿಕೊಂಡ ಸೆನೆಕ್ಸ್ 30 ಸಾವಿರ ತಲುಪಿ ಹೊಸ ದಾಖಲೆ ನಿರ್ಮಿಸಿದೆ. ಬ್ಯಾಂಕಿಂಗ್ ಮತ್ತು ರಿಯಲ್ ಎಸ್ಟೇಟ್ ಷೇರುಗಳು ನಿರೀಕ್ಷೆಗೂ ಮೀರಿ ಲಾಭ ಗಳಿಸುತ್ತ ಮುನ್ನುಗ್ಗುತ್ತಿವೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಬುಧವಾರ ರೆಪೊ ದರಗಳನ್ನು ಕಡಿತಗೊಳಿಸಿದ್ದೇ ಏಕಾಏಕಿ ಏರಿಕೆಗೆ ಕಾರಣ ಎಂದು ಹೇಳಲಾಗಿದೆ. ರೆಪೊ ದರದಲ್ಲಿ 0.25ರಷ್ಟು ಮೂಲ ಅಂಕಗಳಷ್ಟು ಕಡಿತಗೊಳಿಸಿರುವ ಕಾರಣ 7.75ರಷ್ಟಿದ್ದ ರೆಪೋ ದರ ಇದೀಗ 7.50ಕ್ಕೆ ಇಳಿದಂತಾಗಿದೆ.[ಷೇರು ಮಾರುಕಟ್ಟೆ ಬಗ್ಗೆ ನಿಮಗೆ ಗೊತ್ತಿರದ 8 ಸಂಗತಿ]

30 ಸಾವಿರ ಮುಟ್ಟಿದ ಸೆನ್ಸೆಕ್ಸ್: ಷೇರುಪೇಟೆ ಹೊಸ ದಾಖಲೆ

ಬ್ಯಾಂಕಿಂಗ್ ಕ್ಷೇತ್ರದ ಷೇರುಗಳು ಅತಿ ಹೆಚ್ಚಿನ ಗಳಿಕೆ ಸಾಧಿಸಿವೆ. ಸಾರ್ವಜನಿಕ ವಲಯದ ಸಿಂಡಿಕೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಷೇರು ವಹಿವಾಟಿನ ನಾಯಕರಾಗಿ ಹೊರಹೊಮ್ಮಿವೆ. ಖಾಸಗಿ ವಲಯದ ಬ್ಯಾಂಕ್ ಗಳು ಸಹ ಉತ್ತಮ ಲಾಭ ಗಳಿಸಿವೆ. ಎಕ್ಸಿಸ್ ಬ್ಯಾಂಕ್, ಕೋಟಾಕ್ ಬ್ಯಾಂಕ್, ಯಸ್ ಬ್ಯಾಂಕ್ ಗಳೂ ಉತ್ತಮ ಲಾಭ ಪಡೆದಿವೆ.[ಹೊಸ ಹೂಡಿಕೆದಾರ ಅರಿತಿರಬೇಕಾದ ಸಪ್ತ ಸೂತ್ರ]

ಉಳಿದಂತೆ ರಿಯಲ್ ಎಸ್ಟೇಟ್ ಷೇರುಗಳು ಏರಿಕೆ ಹಾದಿಯಲ್ಲೇ ಸಾಗಿದ್ದು, ಕಳೆದ ವಾರ ಏರಿಳಿತ ಕಂಡಿದ್ದ ಮಾರುಕಟ್ಟೆ ಇದೀಗ ಏರಿಕೆ ಹಾದಿಯಲ್ಲೇ ಸಾಗುತ್ತಿದೆ. ಸೆನ್ಸೆಕ್ಸ್‌ 30 ಸಾವಿರ ಗಡಿ ದಾಟಿರುವುದು ಷೇರು ಪೇಟೆ ಇತಿಹಾಸದಲ್ಲಿ ಇದೇ ಮೊದಲು. ನಿಫ್ಟಿ ಸಹ 112.90 ಅಂಕಗಳ ಏರಿಕೆ ದಾಖಲಿಸಿದ್ದು 9109.15 ಅಂಕದಲ್ಲಿ ಕೊನೆಗೊಂಡಿದೆ.

English summary

Sensex Hits New Record 30,000 Points As RBI Cuts Interest Rates

Benchmark indices in the country scaled fresh lifetime highs after the Reserve Reserve Bank of India's (RBI) surprise decision to cut interest rates outside the Monetary policy for the second time in a row.
 
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X