For Quick Alerts
ALLOW NOTIFICATIONS  
For Daily Alerts

ಟ್ರೇಡರ್ ಮತ್ತು ಇನ್ ವೆಸ್ಟರ್ ನಡುವಿನ ವ್ಯತ್ಯಾಸವೇನು?

|

ಇನ್ ವೆಸ್ಟರ್ ಮತ್ತು ಟ್ರೇಡರ್ ನಡುವಿನ ವ್ಯತ್ಯಾಸ ಗುರುತಿಸುವುದು ಕಷ್ಟಸಾಧ್ಯವೇ ಹೌದು. ಕೆಲವೊಮ್ಮೆ ವ್ಯಕ್ತಿಗಳು ಎರಡು ಪಾತ್ರವನ್ನು ನಿಭಾಯಿಸುತ್ತಿರುವ ಉದಾಹರಣೆಗಳಿರುತ್ತವೆ. ನೀವು ಷೇರನ್ನು ಕೊಳ್ಳುವಿಕೆ ಮತ್ತು ಮಾರಾಟ ಮಾಡುವಿಕೆ ಎರಡರಲ್ಲೂ ತೊಡಗಿಕೊಂಡಾಗ ತನ್ನಿಂದ ತಾನೇ ಈ ಪಾತ್ರಗಳು ನಿಮ್ಮನ್ನು ಆವರಿಸುತ್ತವೆ.

ಹಾಗಾದರೆ ಟ್ರೇಡರ್ ಮತ್ತು ಇನ್ ವೆಸ್ಟರ್ ಅಂದರೆ ಯಾರು? ಮಾರುಕಟ್ಟೆಯಲ್ಲಿ ಅವರ ಪಾತ್ರವೇನು? ಎಂಬುದನ್ನು ಸೂಚ್ಯವಾಗಿ ತಿಳಿದುಕೊಳ್ಳೊಣ.

ಟ್ರೇಡರ್ ಮತ್ತು ಇನ್ ವೆಸ್ಟರ್ ನಡುವಿನ ವ್ಯತ್ಯಾಸವೇನು?

ಟ್ರೇಡರ್ ಅಂದರೆ ಯಾರು?
* ಈತ ಮಾರುಕಟ್ಟೆಯ ಶಾರ್ಟ್ ಟರ್ಮ್ ಅಥವಾ ಅಲ್ಪಕಾಲಿಕ ಯೋಜನೆಗಳ ಮೇಲೆ ತನ್ನ ಗುರಿಯನ್ನು ಕೇಂದ್ರಿಕರಿಸಿರುತ್ತಾನೆ
* ತಾಂತ್ರಿಕ ಅಂಶ ಮತ್ತು ಚಾರ್ಟ್ ಗಳಿಗೆ ಒತ್ತು ನೀಡುತ್ತಾನೆ.
* ಸಾಮಾನ್ಯವಾಗಿ ಉತ್ಪಾದಕ ಮಾರುಕಟ್ಟೆಯ ಮೂಲಕವೇ ಈತನ ಖರೀದಿ ವ್ಯವಹಾರಗಳು ನಡೆಯುತ್ತವೆ.
* ಅಲ್ಪ ಕಾಲದ ಮಾರಾಟದಲ್ಲಿ ಇಂಥ ವ್ಯಕ್ತಿಗಳ ಭಾಗವಹಿಸುವಿಕೆ ಹೆಚ್ಚಿರುತ್ತದೆ.
* ಷೇರಿನ ಮೂಲಭೂತ ತತ್ವಗಳನ್ನು ಅಭ್ಯಸಿಸಬೇಕಾದ ಅಗತ್ಯ ಟ್ರೇಡರ್ ಗೆ ಇರುವುದಿಲ್ಲ.

ಇನ್ ವೆಸ್ಟರ್ ಅಂದರೆ ಯಾರು?
* ಮಾರುಕಟ್ಟೆಯ ಲಾಂಗ್ ಟರ್ಮ್ ಯೋಜನೆಯ ಮೇಲೆ ತನ್ನ ಹೂಡಕೆಯನ್ನು ನಿರ್ಧಾರ ಮಾಡುತ್ತಾನೆ.
* ಚಾರ್ಟ್ ಮತ್ತಿತರ ವಿಚಾರಗಳ ಮೇಲೆ ಗಮನ ನೀಡಬಹುದು, ನೀಡದೆಯೂ ಇರಬಹುದು.
* ಸಾಮಾನ್ಯವಾಗಿ ಈತ ಉತ್ಪಾದಕ ಮಾರುಕಟ್ಟೆಯತ್ತ ಸುಳಿಯುವುದಿಲ್ಲ
* ಕೊಂಡ ಷೇರನ್ನು ತಕ್ಷಣಕ್ಕೆ ಮಾರಾಟ ಮಾಡಲು ಬಯಸುವುದಿಲ್ಲ
* ಷೇರು ಮಾರುಕಟ್ಟೆಯ ಮೂಲತತ್ವಗಳನ್ನು ಅಭ್ಯಾಸ ಮಾಡಿಕೊಂಡೇ ಮುಂದಿನ ಹೆಜ್ಜೆ ಇಡುತ್ತಾನೆ.

ಸಂಕ್ಷಿಪ್ತ ವಿವರಣೆ
ಟ್ರೇಡರ್ ಮತ್ತು ಇನ್ ವೆಸ್ಟರ್ ನಡುವೆ ಅನೇಕ ವ್ಯತ್ಯಾಸಗಳಿವೆ. ಟ್ರೇಡರ್ ಸಾಮಾನ್ಯವಾಗಿ ಅಲ್ಪಾವಧಿ ಲಾಭಕ್ಕೆ ಗಮನ ನೀಡಿದರೆ, ಇನ್ ವೆಸ್ಟರ್ ಲಾಂಗ್ ಟರ್ಮ್ ಯೋಜನೆಗಳಿಗೆ ಮಹತ್ವ ನೀಡುತ್ತಾನೆ.

ಮಾರುಕಟ್ಟೆಯ ಮೂಲತತ್ವ ಟ್ರೇಡರ್ ಗೆ ಬೇಕಾಗಿಲ್ಲ. ಗ್ರಾಫ್ಸ್ ಮತ್ತು ಚಾರ್ಟ್ ಆಧಾರದಲ್ಲಿಯೇ ಈತ ದೈನಂದಿನ ವ್ಯವಹಾರ ನಡೆಸುತ್ತಾನೆ. ಕೆಲ ಜನರ ಸಲಹೆ ಪಡೆದು ಶಾರ್ಟ್ ಟರ್ಮ್ ಮೇಲೆ ಹಣ ಹೂಡಿಕೆ ಮಾಡುತ್ತಾನೆ.

ಆದರೆ ಇನ್ ವೆಸ್ಟರ್ ಪ್ರತಿ ಷೇರಿನ ಮೇಲೆ ಬರುವ ಲಾಭ ಲೆಕ್ಕ ಹಾಕುತ್ತಾನೆ. ಅಲ್ಲದೇ ಇತರ ಷೇರು ಮಾರುಕಟ್ಟೆಗಳ ಟ್ರೇಂಡ್ ನ್ನು ಅಭ್ಯಸಿಸಿ ಮುಂದೆ ಸಾಗುತ್ತಾನೆ. ಹಿಂದಿನ 100 ದಿನಗಳ ಬದಲಾವಣೆ ಟ್ರೇಡರ್ ಗೆ ಮುಖ್ಯವಾದರೆ ಇನ್ ವೆಸ್ಟರ್ ತಿಂಗಳುಗಳ ಕಾಲದ ಬದಲಾವಣೆ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾನೆ.

ಕೊನೆ ಮಾತು: ನೀವು ಒಬ್ಬ ಟ್ರೇಡರ್ ಅಥವಾ ಇನ್ ವೆಸ್ಟರ್ ಎಂದು ಗುರುತಿಸುವುದು ಸ್ವಲ್ಪ ಕಷ್ಟವೇ ಹೌದು. ನೀವು ಯಾವುದೇ ಪಾತ್ರದಲ್ಲಿದ್ದರೂ ಹಣ ಗಳಿಕೆ ಮಾಡಿಕೊಳ್ಳಲು ಸಾಧ್ಯವಿದೆ. ನೀವು ಮಾರುಕಟ್ಟೆಯನ್ನು ಯಾವ ರೀತಿ ಅರ್ಥೈಸಿ ಮುಂದಕ್ಕೆ ಸಾಗುವ ನಿರ್ಧಾರ ಮಾಡುತ್ತಿರಿ ಎಂಬ ಆಧಾರದಲ್ಲಿ ಲಾಭ ನಷ್ಟಗಳ ಲೆಕ್ಕಾಚಾರವಾಗುತ್ತದೆ. (ಗುಡ್ ರಿಟರ್ನ್ಸ್. ಇನ್)

English summary

What Is The Difference Between Investing And Trading?

This is not a very difficult answer to give for those who have been associated with the stock markets for a long time. In fact, when you buy and sell shares you can either be a investor or a trader or do both at the same time.
Story first published: Monday, March 30, 2015, 17:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X