For Quick Alerts
ALLOW NOTIFICATIONS  
For Daily Alerts

ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಷೇರುಗಳ ಬಗ್ಗೆ ತಿಳಿದುಕೊಳ್ಳಿ

|

ಷೇರು ಮಾರುಕಟ್ಟೆಯ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆಯೇ. ಅದರ ಆಳ, ಹರಿವು ಮತ್ತು ವಿಸ್ತಾರ ಸುಲಭವಾಗಿ ಅರ್ಥಕ್ಕೆ ಸಿಗಲಾರದು. ಷೇರುಗಳು, ದಿನ ವಹಿವಾಟು, ಸೂಚ್ಯಂಕ, ಏರಿಕೆ, ಇಳಿಕೆ ಈ ಬಗೆಯ ನೂರಾರು ಸಂಗತಿಗಳನ್ನು ಇದರಲ್ಲಿ ಅಡಕವಾಗಿರುತ್ತದೆ.[ಬ್ಯಾಂಕ್ ಡಿಪಾಸಿಟ್ ಬಿಟ್ಟು ಹೂಡಿಕೆ ಮಾಡಲು ಜಾಗವಿದೆ]

ಅದರಂತೆ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಕಂಪನಿಯೊಂದು ಮಾರುಕಟ್ಟೆಗೆ ಕಾಲಿಟ್ಟಾಗಲೇ ಈ ಬಗೆಯ ವರ್ಗಿಕರಣಕ್ಕೆ ಒಳಗಾಗುತ್ತದೆ. ಯಾವುದೇ ಒಂದು ಕಂಪನಿ 10 ರೂ. ಮುಖಬೆಲೆಯ 1 ಲಕ್ಷ ಷೇರುಗಳೊಂದಿಗೆ ಮಾರುಕಟ್ಟೆ ಪ್ರವೇಶ ಮಾಡಿದರೆ ಆ ಕಂಪನಿಯ ಮಾರುಕಟ್ಟೆ ಕ್ಯಾಪ್ ನ್ನು 10 ಲಕ್ಷ ಅಥವಾ 1 ಮಿಲಿಯನ್ ಎಂದು ಕರೆಯಬಹುದು. (ಗುಡ್ ರಿಟರ್ನ್ಸ್.ಇನ್)

ಲಾರ್ಜ್ ಕ್ಯಾಪ್ ಷೇರು ಎಂದರೇನು?

ಲಾರ್ಜ್ ಕ್ಯಾಪ್ ಷೇರು ಎಂದರೇನು?

ಹೆಸರೇ ಸೂಚಿಸುವಂತೆ ಕಂಪನಿಗಳ ವ್ಯವಹಾರ ದೊಡ್ಡ ಮಟ್ಟದಲ್ಲಿ ನಡೆಯತ್ತಿರುತ್ತದೆ. ಬಿಲಿಯನ್ ಲೆಕ್ಕಾಚಾರದಲ್ಲಿ ವಹಿವಾಟು ನಡೆಯುತ್ತಿರುವುದರಿಂದಲೇ ಲಾರ್ಜ್ ಕ್ಯಾಪ್ ಷೇರು ಎಂದು ಕರೆಸಿಕೊಂಡಿವೆ. ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಹಿಂದುಸ್ಥಾನ್ ಯುನಿಲಿವರ್, ಟಾಟಾದಂಥ ಬಹುದೊಡ್ಡ ಕಂಪನಿಗಳನ್ನು ಉದಾಹರಣೆಯಾಗಿ ನೀಡಬಹುದು.

ಮೊದಲಿಗೆ ಯಾವುದು ಲಾರ್ಜ್ ಕ್ಯಾಪ್ ಆಗಲ್ಲ

ಮೊದಲಿಗೆ ಯಾವುದು ಲಾರ್ಜ್ ಕ್ಯಾಪ್ ಆಗಲ್ಲ

ಮಾರುಕಟ್ಟೆಗೆ ಕಾಲಿಟ್ಟಾಗ ಯಾವ ಕಂಪನಿ ಷೇರುಗಳು ಲಾರ್ಜ್ ಕ್ಯಾಪ್ ಆಗಿರಲ್ಲ. ನಂತರ ಅವುಗಳ ವ್ಯವಹಾರ ವಿಸ್ತರಿಸಿದಂತೆ ನಿಜ ಬಂಡವಾಳದಲ್ಲಿ ಏರಿಕೆ ಕಂಡುಕೊಳ್ಳುತ್ತವೆ.

ಮಿಡ್ ಕ್ಯಾಪ್ ಷೇರುಗಳ ಕತೆಯೇನು?

ಮಿಡ್ ಕ್ಯಾಪ್ ಷೇರುಗಳ ಕತೆಯೇನು?

ಭಾರತದಲ್ಲಿ ಬಂಡವಾಳ ಹೂಡಿಕೆ ಪ್ರಮಾಣ ಅತೀ ಹೆಚ್ಚೂ ಇಲ್ಲ. ಅತೀ ಕಡಿಮೇನೂ ಇಲ್ಲ. ಹಾಗಾಗಿ ಮಧ್ಯಮ ಗಾತ್ರದ ಕಂಪನಿಗಳು ಹೇರಳವಾಗಿವೆ. ಎಬಿಬಿ, ಸೆಂಚುರಿ ಟೆಕ್ಸ್ ಟೈಲ್ಸ್, ಬಜಾಜ್ ಫೈನಾನ್ಸ್, ಗೋದ್ರೇಜ್ ಈ ರೀತಿಯ ನೂರಾರು ಕಂಪನಿಗಳ ಷೇರುಗಳನ್ನು ಮಿಡ್ ಕ್ಯಾಪ್ ವ್ಯಾಪ್ತಿಗೆ ಸೇರಿಸಬಹುದು. ಉಳಿದ ಷೇರುಗಳಿಗೆ ಹೋಲಿಸಿದರೆ ಮಿಡ್ ಕ್ಯಾಪ್ ಷೇರುಗಳ ವಹಿವಾಟಿನ ವೇಗ ಹೆಚ್ಚು. ಪ್ರತಿದಿನದ ವ್ಯವಹಾರದಲ್ಲಿ ಇದರ ಪಾಲು ಬಹಳ ದೊಡ್ಡದಾಗಿರುತ್ತದೆ

ಸ್ಮಾಲ್ ಕ್ಯಾಪ್ ಷೇರುಗಳು ಎಂದರೇನು?

ಸ್ಮಾಲ್ ಕ್ಯಾಪ್ ಷೇರುಗಳು ಎಂದರೇನು?

ಮೇಲಿನ ಎರಡು ಷೇರುಗಳಿಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಇವುಗಳ ಪ್ರಮಾಣ ಅತ್ಯಲ್ಪ. ಇವು ಏರಿಕೆ ಮತ್ತು ಇಳಿಕೆಯನ್ನು ಸಹ ಅಷ್ಟೇ ವೇಗವಾಗಿ ಪಡೆದುಕೊಳ್ಳುತ್ತವೆ. ನೀವು ರಿಸ್ಕ್ ತೆಗೆದುಕೊಳ್ಳಲು ಬಯಸುವರಾದರೆ ಈ ಬಗೆಯ ಷೇರು ಖರೀದಿಗೆ ಮುಂದಾಗಬಹುದು.

English summary

What is The Difference Between Large Cap, Mid Cap stock?

To understand the definition of the above, you first need to understand what cap or market capitalization actually means. Market capitalization of a company is arrived at by multiplying the number of outstanding shares of a company with the market price. So, if a company has one lakh shares outstanding and the market price of the stock is Rs 10, we say that the market cap is Rs 10 lakh or 1 million.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X