For Quick Alerts
ALLOW NOTIFICATIONS  
For Daily Alerts

ಐಸಿಐಸಿಐ ಕೊಡುಗೆ: ಧ್ವನಿಯನ್ನೇ ಪಾಸ್ವರ್ಡ್ ಆಗಿ ಬಳಸಿ

By Mahesh
|

ಮುಂಬೈ, ಮೇ.26: ಬ್ಯಾಂಕ್ ಗ್ರಾಹಕರಿಗೆ ಪದೇ ಪದೇ ಪಾಸ್ವರ್ಡ್ ನೆನಪಿಟ್ಟುಕೊಳ್ಳುವುದು, ಬದಲಾಯಿಸುವುದು ಕಿರಿಕಿರಿಯಾಗುತ್ತದೆ. ಇಂಥ ಕಿರಿಕಿರಿ ಹೋಗಲಾಡಿಸಲು ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಐಸಿಐಸಿಐ ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.

ಈ ಹೊಸ ವ್ಯವಸ್ಥೆಯಲ್ಲಿ ಗ್ರಾಹಕರು ಪಾಸ್ವರ್ಡ್ ಬದಲಿಗೆ ತಮ್ಮ ಧ್ವನಿಯನ್ನೇ ಪಾಸ್ವರ್ಡ್ ಆಗಿ ಬಳಸಬಹುದಾಗಿದೆ. ಇದರಿಂದ ಬ್ಯಾಂಕಿಂಗ್ ಇನ್ನಷ್ಟು ಸುಲಭ, ಸರಳಗೊಳ್ಳಲಿದೆ ಎಂದು ಐಸಿಐಸಿಐ ಚೇರ್ಮನ್ ಚಂದಾ ಕೊಚರ್ ಹೇಳಿದ್ದಾರೆ.

ಐಸಿಐಸಿಐ ಮೊಬೈಲ್‌ ಬ್ಯಾಂಕಿಂಗ್‌ ನಡೆಸುವ ಗ್ರಾಹಕರು ಇನ್ಮುಂದೆ ಕಾರ್ಡ್‌ ನಂಬರ್‌, ಪಿನ್‌ ನಂಬರ್‌ ಬಳಸುವ ಅವಶ್ಯಕತೆ ಇರುವುದಿಲ್ಲ. ಈ ಯೋಜನೆಯನ್ನು ಬಳಸುವ ಮುನ್ನ ಗ್ರಾಹಕರು ತಮ್ಮ ದನಿಯ ಸ್ಯಾಂಪಲ್ ಬ್ಯಾಂಕಿಗೆ ನೀಡಬೇಕಾಗುತ್ತದೆ.

ಐಸಿಐಸಿಐ ಕೊಡುಗೆ: ಧ್ವನಿಯನ್ನೇ ಪಾಸ್ವರ್ಡ್ ಆಗಿ ಬಳಸಿ

ಪ್ರತಿಯೊಬ್ಬ ಗ್ರಾಹಕನ ಧ್ವನಿಯನ್ನು ವಿಶ್ಲೇಷಿಸಲಾಗುತ್ತದೆ. ಧ್ವನಿಯ ಏರಿಳಿತ, ಮಾತನಾಡುವ ವೇಗ, ಉಚ್ಚಾರ ಶೈಲಿ ಮುಂತಾದ ನೂರಾರು ಅಂಶಗಳನ್ನು ಪರಿಗಣಿಸಿ ಪಾಸ್ವರ್ಡ್ ತಯಾರಿಸಲಾಗುತ್ತದೆ.

ಬ್ಯಾಂಕ್ ಜೊತೆ ವ್ಯವಹರಿಸುವಾಗ ದನಿ ಆಧಾರಿತ ಪಾಸ್ವರ್ಡ್ ಬಳಸಿದಾಗ ಬ್ಯಾಂಕಿನ ಸಿಬ್ಬಂದಿ ಗ್ರಾಹಕನ ಧ್ವನಿ ಜೊತೆಗೆ ಸಂಗ್ರಹದಲ್ಲಿರುವ ಧ್ವನಿಯನ್ನು ಹೋಲಿಕೆ ಮಾಡುತ್ತಾರೆ. ಹೋಲಿಕೆಯಾದರೆ ಮಾತ್ರ ಮುಂದಿನ ಹಂತದ ವ್ಯವಹಾರ ಸಾಧ್ಯ.

ಐಸಿಐಸಿಐ ಬ್ಯಾಂಕಿನ ಸುಮಾರು 3.3 ಕೋಟಿ ಗ್ರಾಹಕರಿಗೆ ಈ ಹೊಸ ಯೋಜನೆ ಲಭ್ಯವಿರುತ್ತದೆ. ಸ್ಮಾರ್ಟ್ ಫೋನ್ ಬಳಸಿ ಗ್ರಾಹಕರು ಬ್ಯಾಂಕಿಂಗ್ ನಡೆಸುತ್ತಿದ್ದರೂ 16 ಅಂಕಿಗಳ ಕಾರ್ಡ್ ನಂಬರ್ ಹಾಗೂ 4 ಅಂಕಿ PIN ಹಾಗೂ ಇನ್ನಿತರ ಸುರಕ್ಷಿತ ವಿಧಾನ ಬಳಸಲು ಕಷ್ಟವಾಗುತ್ತಿತ್ತು. ಇದಕ್ಕೆಲ್ಲ ಹೊಸ ವಿಧಾನ ಪರಿಹಾರವಾಗುವ ಸಾಧ್ಯತೆಯಿದೆ ಎಂದು ಚಂದಾ ಹೇಳಿದ್ದಾರೆ. (ಪಿಟಿಐ)

English summary

Now Do Banking Transactions With Only Voice And No Password

Country's largest private lender ICICI Bank today said it has launched a service where customers can make transactions using just their voice, without using other means of authentication like a password.
Story first published: Tuesday, May 26, 2015, 17:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X