For Quick Alerts
ALLOW NOTIFICATIONS  
For Daily Alerts

ಆರ್ ಬಿಐ ನೀತಿ ಪ್ರಕಟ: ಬ್ಯಾಂಕಿಂಗ್ ಷೇರುಗಳು ಕುಸಿತ

By Mahesh
|

ಮುಂಬೈ, ಜೂ.2: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ಪ್ರಕಟಿಸಿದ ದ್ವೈಮಾಸಿಕ ಆರ್ಥಿಕ ನೀತಿಯಿಂದ ಷೇರುಪೇಟೆ ಕೊಂಚ ತಣ್ಣಗಾಗಿದೆ. ಬ್ಯಾಂಕಿಂಗ್ ಷೇರುಗಳ ಮೌಲ್ಯ ಇಳಿಮುಖವಾಗಿವೆ.

ಅರ್ಥ ವ್ಯವಸ್ಥೆಯ ಉತ್ತೇಜನ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಿರತೆ, ಹಣದುಬ್ಬರ ನಿಯಂತ್ರಣ ಹಿನ್ನೆಲೆಯಲ್ಲಿ ಶೇ 8ರಷ್ಟಿದ್ದ ರೆಪೋ ದರದಲ್ಲಿ 25 ಮೂಲಾಂಶ (bps) ತಗ್ಗಿಸಿ ಶೇ 7.75ಕ್ಕೆ ಇಳಿಕೆ ಮಾಡಲಾಗಿತ್ತು. ಈಗ ಶೇ 7.25ಕ್ಕೆ ಇಳಿಸಲಾಗಿದೆ. ಈ ವರ್ಷ ಮೂರನೇ ಬಾರಿಗೆ ರೆಪೋ ದರದಲ್ಲಿ ಇಳಿಕೆ ಮಾಡಲಾಗಿದೆ. ನಗದು ಮೀಸಲು ಅನುಪಾತ (ಸಿಆರ್ ಆರ್) ಶೇ.4ರ ಪ್ರಮಾಣದಲ್ಲೇ ಇದೆ ಯಾವುದೇ ಬದಲಾವಣೆ ಮಾಡಿಲ್ಲ. [ರೆಪೋ ದರ ಇಳಿಕೆ: ಗೃಹಸಾಲ, ವಾಹನ ಸಾಲ ಬಡ್ಡಿದರ ಇಳಿಕೆ?]

ಆರ್ ಬಿಐ ನೀತಿ ಪ್ರಕಟ: ಬ್ಯಾಂಕಿಂಗ್ ಷೇರುಗಳು ಕುಸಿತ
State Bank of India: Quotes, News
BSE 750.80BSE Quote6 (0.80%)
NSE 750.45NSE Quote5.65 (0.75%)
Punjab National Bank: Quotes, News
BSE 128.25BSE Quote1.3 (-1.01%)
NSE 128.25NSE Quote1.3 (-1.01%)

ಇಂಡಸ್ ಇಂಡ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕಿನ ಷೇರುಗಳು ಮಧ್ಯಾಹ್ನದ ವೇಳೆಗೆ ಶೇ 2 ರಷ್ಟು ಕುಸಿತ ಕಂಡಿದ್ದು, ಭಾರಿ ಹೊಡೆತ ಬಿದ್ದಿದೆ.ಉಳಿದಂತೆ ಯೆಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಹಾಗೂ ಆಕ್ಸಿಸ್ ಬ್ಯಾಂಕ್ ಷೇರುಗಳು ಇಳಿಮುಖವಾಗಿವೆ. ದಿನದ ಅಂತ್ಯಕ್ಕೆ

* ಕೆನರಾ ಬ್ಯಾಂಕ್ ಷೇರುಗಳು : ಬಿಎಸ್ ಇಯಲ್ಲಿ 326.35 ರು ನಂತೆ ಶೇ 4.66ರಷ್ಟು ಕುಸಿತ ಕಂಡಿದೆ. ಎನ್ ಎಸ್ ಇನಲ್ಲಿ 325.85 ರು ನಂತೆ ಶೇ 4.93ರಷ್ಟು ಇಳಿದಿದೆ.
* ಇಂಡಸ್ ಇಂಡ್ ಬ್ಯಾಂಕ್ : ಬಿಎಸ್ ಇಯಲ್ಲಿ 844.40 ರು ನಂತೆ ಶೇ 4.34ರಷ್ಟು ಕುಸಿತ ಕಂಡಿದೆ. ಎನ್ ಎಸ್ ಇನಲ್ಲಿ 847.15 ರು ನಂತೆ ಶೇ 4.05ರಷ್ಟು ಇಳಿದಿದೆ.
* ಯೆಸ್ ಬ್ಯಾಂಕ್ : ಬಿಎಸ್ ಇಯಲ್ಲಿ 846.60 ರು ನಂತೆ ಶೇ 3.72ರಷ್ಟು ಕುಸಿತ ಕಂಡಿದೆ. ಎನ್ಎಸ್ ಇನಲ್ಲಿ 845.70 ರು ನಂತೆ ಶೇ 3.85ರಷ್ಟು ಇಳಿದಿದೆ.
ಆರ್ ಬಿಐ ನೀಡಿರುವ ಆರ್ಥಿಕ ಮಾರ್ಗದರ್ಶಿಯಲ್ಲಿ ಬಡ್ಡಿದರ ಇಳಿಕೆ ಬಗ್ಗೆ ಹೆಚ್ಚಿನ ಸುಳಿವು ಸಿಕ್ಕಿಲ್ಲದ ಕಾರಣ ಬ್ಯಾಂಕಿಂಗ್ ವಲಯದ ಷೇರುಗಳು ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳ ಷೇರುಗಳು ಕೆಲ ಕಾಲ ಏರಿಳಿತ ಕಾಣುವ ಸೂಚನೆ ಸಿಕ್ಕಿದೆ. (ಗುಡ್ ರಿಟರ್ನ್ಸ್.ಇನ್)

English summary

Banking Stocks Fall As RBI Sounds Hawkish

Banking shares fell across the board on Tuesday(Jun.02)as the Reserve Bank of India (RBI) sounded hawkish, raising worries on further monetary easing.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X