For Quick Alerts
ALLOW NOTIFICATIONS  
For Daily Alerts

ಹೊಸ ಹೂಡಿಕೆದಾರ ಮಾಡುವ ತಪ್ಪುಗಳು ಯಾವವು?

|

ಈಗ ತಾನೆ ಷೇರು ಮಾರುಕಟ್ಟೆಗೆ ಕಾಲಿಡಬೇಕು, ಅಥವಾ ಹೊಸದಾಗಿ ಹೂಡಕೆ ಮಾಡಬೇಕು ಎಂದು ಅಂದುಕೊಂಡು ಆಗಮಿಸುವವರು ಸಾಮಾನ್ಯವಾಗಿ ಒಂದೇ ಕಡೆ ಎಡವುತ್ತಾರೆ. ನಂತರ ನಷ್ಟ ಮಾಡಿಕೊಂಡು ಮಾರುಕಟ್ಟೆ ಸಹವಾಸವೇ ಸಾಕಪ್ಪಾ ಎಂದು ಹಿಂದಕ್ಕೆ ತೆರಳುತ್ತಾರೆ.

ಹಾಗಾದರೆ ತಪ್ಪು ಹೆಜ್ಜೆ ಇಡುವುದು ಎಲ್ಲಿ? ಅಥವಾ ನಮ್ಮನ್ನು ದಿಕ್ಕು ತಪ್ಪಿಸುವವರು ಯಾರು? ಸಲಹೆ ಸೂಚನೆಗಳನ್ನು ಪಡೆಯದೇ ಮುಂದುವರಿಯುವುದು ಅಪಾಯಕಾರಿಯೇ? ಈ ಎಲ್ಲ ಅಂಶಗಳ ಮೇಲೆ ಗಮನ ಹರಿಸಬೇಕಾಗುತ್ತದೆ.[ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಷೇರುಗಳ ಬಗ್ಗೆ ತಿಳಿದುಕೊಳ್ಳಿ]

ಹೊಸ ಹೂಡಿಕೆದಾರ ಮಾಡುವ ತಪ್ಪುಗಳು ಯಾವವು?

ಹೊಸ ಹೂಡಿಕೆದಾರ ಸಾಮಾನ್ಯವಾಗಿ ಮಾಡುವ ತಪ್ಪುಗಳಿವು
* ಹಣದ ಹೂಡಿಕೆ ಬಗ್ಗೆ ಸದಾ ಯೋಚಿಸುತ್ತಿರುವುದು
ಒಮ್ಮೆ ಹೂಡಿಕೆ ಮಾಡಿ ಬಿಟ್ಟರೆ ಒತ್ತಮ. ಅದನ್ನು ಬಿಟ್ಟು ಹೂಡಿಕೆ ಮಾಡಿದ ನಂತರ, ಇಲ್ಲಿ ಮಾಡಬಾರದಿತ್ತು, ಬೇರೆಡೆ ಮಾಡಿದ್ದರೆ ಹೆಚ್ಚಿನ ಲಾಭ ಸಿಗುತ್ತಿತ್ತು ಎಂದು ಕೊರಗುತ್ತ ಕುಳಿತುಕೊಂಡರೆ ಮಾನಸಿಕ ನೆಮ್ಮದಿಯೂ ಹಾಳಾಗಿ ಹೋಗುತ್ತದೆ. ನೀವು ಯಾವ ಪ್ರಮಾಣದ ಹೂಡಿಕೆ ಮಾಡಿದ್ದೀರಿ ಎಂಬ ಸಂಗತಿಯೂ ಪ್ರಮುಖವಾಗುತ್ತದೆ.

* ಚಿಂತನೆ ಮತ್ತು ಯೋಜನೆ ಕೊರತೆ
ದಿಢೀರ್ ಎಂದು ಏಕಾಏಕಿ ಹೂಡಿಕೆ ಮಾಡುವುದು ಯಾವ ಕಾರಣಕ್ಕೂ ಸಲ್ಲ. ನಿಮ್ಮ ಹಣಕಾಸು ಸ್ಥಿತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹಣ ಹಾಕಬೇಕಾಗುತ್ತದೆ. ಆದರೆ ಅರ್ಧ ಜನ ಇದನ್ನು ಮಾಡದೇ ದಿಢೀರ್ ಎಂದು ಹೂಡಿಕೆ ಮಾಡಿ ನಂತರ ಪರಿತಪಿಸುತ್ತಾರೆ.[ಬ್ಯಾಂಕ್ ಡಿಪಾಸಿಟ್ ಬಿಟ್ಟು ಹೂಡಿಕೆ ಮಾಡಲು ಜಾಗವಿದೆ]

* ಜನರ ಹಿಂಬಾಲಿಸುವಿಕೆ

ಜನರು ಯಾವ ರೀತಿ ಹೂಡಿಕೆ ಮಾಡುತ್ತಿದ್ದಾರೆ, ಮಾರುಕಟ್ಟೆಯ ಇವತ್ತಿನ ಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಆದರೆ ಇದೇ ಅಂತಿಮವಲ್ಲ. ಜನರ ಹಿಂಬಾಲಿಕೆ ಕಡಿಮೆ ಮಾಡುವುದು ಒಳ್ಳೆಯದು.

* ಕಲಿಕೆ ಇಲ್ಲ, ಖಾಲಿ ತಲೆ
ಜಿಡಿಪಿ ದರ, ಹಣದುಬ್ಬರ, ಆರ್ಥಿಕ ಸ್ಥಿತಿ ದಿಕ್ಕು ಈ ಬಗ್ಗೆ ಅಲ್ಪವನ್ನಾದರೂ ತಿಳಿದುಕೊಂಡು ಮುಂದಕ್ಕೆ ಹೆಜ್ಜೆ ಇಡಬೇಕಾಗುತ್ತದೆ. ಅದನ್ನು ಬಿಟ್ಟು ಒಂದಿಷ್ಟು ಹಣ ಕೈ ಯಲ್ಲಿ ಇದ್ದರೆ ನೇರವಾಗಿ ಮಾರುಕಟ್ಟೆಗೆ ಹಾಕುವುದು ಸರಿಯಲ್ಲ.

* ಗೋಜಲು ಮಾಡಿಕೊಳ್ಳುವುದು
ವಿಮೆ, ಮ್ಯೂಚುವಲ್ ಫಂಡ್, ಹೂಡಿಕೆ, ಬಂಡವಾಳ ಎಲ್ಲವನ್ನು ಒಂದರ ಒಳಗೆ ಒಂದು ಸೇರಿಸಿ ಗೋಜಲುಮಯ ಮಾಡಿಕೊಂಡರೇ ನೀವು ಪರಿತಪಿಸುತ್ತೀರಿ. ಹಾಗಾಗಿ ಒಮ್ಮೆ ಸರಳವಾಗಿ ಯೋಚಿಸಿ ಹಣ ಹೊಂದಿಕೆ ಮಾಡಿಕೊಂಡು ಸರಿಯಾದ ಕಡೆ ಹೂಡಿಕೆ ಮಾಡಿ

ಕೊನೆ ಮಾತು
ಹೂಡಿಕೆ ಮಾಡಲು ಅನೇಕ ಜನರು ವಿವಿಧ ಸಲಹೆಗಳನ್ನು ನೀಡುತ್ತಾ ರೆ. ಎಲ್ಲವನ್ನು ಒಪ್ಪಿಕೊಳ್ಳಲೇಬೇಕು ಎಂದೇನಿಲ್ಲ. ಅಂತಮಿವಾಗಿ ಮಾರುಕಟ್ಟೆಯ ದಿಢೀರ್ ಬೆಳವಣಿಗೆಗಳು ನಿಮ್ಮ ಲಾಭ ನಷ್ಟವನ್ನು ನಿರ್ಧರಿಸುತ್ತದೆ.(ಗುಡ್ ರಿಟರ್ನ್ಸ್.ಇನ್)

English summary

Are You A New Investor Whose Making These Mistakes?

Individuals who are looking to invest or just started investing should be very careful as they are new to the field. When you are planning to hold any financial product for long term with an expectation of capital appreciation or return on investing can be said an investment.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X