For Quick Alerts
ALLOW NOTIFICATIONS  
For Daily Alerts

ವ್ಯವಸ್ಥಿತ ಹೂಡಿಕೆಗೆ ಅತ್ಯುತ್ತಮ ತಾಣ ಯಾವುದು?

|

ನೀವು ಹಣವನ್ನು ಹೂಡಿಕೆ ಮಾಡುವುದು ಸಾಮಾನ್ಯ. ಆದರೆ ಅದೇ ಹಣವನ್ನು ವ್ಯವಸ್ಥಿತ ರೀತಿಯಲ್ಲಿ ತೊಡಗಿಸುವುದು ಜಾಣ್ಮೆ. ಯಾವುದೇ ಒಂದು ನಿರ್ದಿಷ್ಟ ಅವಧಿಗೆ ಹಣ ಹೂಡಿಕೆ ಮಾಡುತ್ತಿದ್ದರೆ ಅದು ತರುವ ಲಾಭದ ಪ್ರಮಾಣವನ್ನು ಮೊದಲಿಗೆ ಲೆಕ್ಕ ಹಾಕಿಕೊಳ್ಳಬೇಕಾಗುತ್ತದೆ.

ಇಂಥ ಹೂಡಿಕೆಯನ್ನು ಎಸ್ ಐಪಿ(ಸಿಸ್ಟಮ್ಯಾಟಿಕ್ ಇನ್ ವೆಸ್ಟ್ ಮೆಂಟ್ ಪ್ಲಾನ್) ಎಂದು ಕರೆಯಲಾಗುತ್ತದೆ. ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ ಇಂಥ ಲಾಭ ಪಡೆದುಕೊಳ್ಳಬಹುದು. ಅದು ಈಕ್ಷಿಟಿ, ಡೆಟ್ ಅಥವಾ ಬ್ಯಾಲೆನ್ಸ್ ಯಾವುದೇ ಆಗಿರಬಹುದು.[ಮ್ಯೂಚುವಲ್ ಫಂಡ್ ಬಗ್ಗೆ ತಿಳಿದುಕೊಳ್ಳಿ]

ವ್ಯವಸ್ಥಿತ ಹೂಡಿಕೆಗೆ ಅತ್ಯುತ್ತಮ ತಾಣ ಯಾವುದು?


ಇಲ್ಲಿ ಕೆಲ ಅತ್ಯುತ್ತಮ ಎಸ್ ಐಪಿ ಯೋಜನೆಗಳನ್ನು ನೀಡಲಾಗಿದೆ, ಮುಂದೆ ನೋಡಿ

ಎಚ್ ಡಿ ಎಫ್ ಸಿ ಈಕ್ವಿಟಿ
ಭಾರತದಲ್ಲಿ ಒಂದು ಅತಿದೊಡ್ಡ ಮ್ಯೂಚುವಲ್ ಫಂಡ್ ಸಂಸ್ಥೆಯಾಗಿ ಎಚ್ ಡಿ ಎಫ್ ಸಿ ಹೊರಹೊಮ್ಮಿದೆ. ಸುಮಾರು 18 ಸಾವಿರ ಕೋಟಿ ರೂ. ಮೌಲ್ಯದ ಮೊತ್ತವನ್ನು ಹೊಂದಿದೆ.

1995ರಲ್ಲಿ ಸಂಸ್ಥೆ ತನ್ನ ಷೇರುಗಳನ್ನು ಮೊದಲೆ ಸಾರಿ ಬಿಡುಗಡೆ ಮಾಡಿತು. ಕಳೆದ ಎರಡು ದಶಕದಲ್ಲಿ ತನ್ನ ಗ್ರಾಹರಿಗೆ ಶೇ. 20 ರಿಟರ್ನ್ಸ್ ನೀಡುತ್ತಿದೆ. ಅಲ್ಲದೆ ಸಂಸ್ಥೆ ಬೆಳವಣಿಗೆಯೂ ಉತ್ತಮವಾಗಿದೆ.[ಮ್ಯೂಚುವಲ್ ಫಂಡ್ ಹಣ ಹೂಡಿಕೆ ಎದುರಿಸುವ ಅಪಾಯಗಳು]

ಎಚ್ ಡಿಎಫ್ ಸಿ ಜತೆಗೆ ಎಸ್ ಬಿಎಂ ಮತ್ತು ಐಸಿಐಸಿಐ ನ್ನು ತುಲನೆ ಮಾಡಬಹುದು. ಜತೆಗೆ ಇನ್ಫೋಸಿಸ್ ಮತ್ತು ಮಾರುತಿ ಕಂಪನಿಗಳು ಸಹ ಉತ್ತಮ ಮೊತ್ತವನ್ನೇ ಕಾಪಾಡಿಕೊಂಡು ಬಂದಿವೆ. ಅಲ್ಲದೇ ಎಚ್ ಡಿಎಫ್ ಸಿ ಅಭಿವೃದ್ಧಿ ಹೊಂದುತ್ತಿರುವ ಕಂಪನಿಗಳಲ್ಲಿ ಬಂಡವಾಳ ತೊಡಗಿಸಿರುವುದನ್ನು ನಾವು ಗಮನಿಸಬೇಕಾಗುತ್ತದೆ.

ನೀವು 5 ಸಾವಿರ ರೂ. ಹೂಡಿಕೆ ಮಾಡಲು ಮುಂದಾಗಿದ್ದೀರಿ ಎಂದರೆ 5 ನೂರು ರುಪಾಯಿಯನ್ನು ಎಸ್ ಐಪಿಯಲ್ಲಿ ಹಾಕುವುದು ಉತ್ತಮ. ಸಮತೋಲನೆ ಕಾಪಾಡಿಕೊಳ್ಳಲು ಇದು ಉತ್ತಮ ತಂತ್ರ.[ಕಡಿಮೆ ಅವಧಿಗೆ ಹೆಚ್ಚಿನ ರಿಟರ್ನ್ಸ್ ತರುವ 6 ಯೋಜನೆಗಳು]

ಎಚ್ ಡಿಎಫ್ ಸಿಯೇ ಅತಿ ಉತ್ತಮ ಯಾಕೆ?
ಕಳೆದ ಕೆಲ ವರ್ಷಗಳಿಂದ ಇದು ಒಂದೇ ಮಾನದಂಡ ಮತ್ತು ಬೆಲೆಯನ್ನು ಕಾಯ್ದುಕೊಂಡು ಬಂದಿದೆ. ಮೊದಲೇ ಹೇಳಿದಂತೆ ಉತ್ತಮ ರಿಟರ್ನ್ಸ್ ನೀಡುತ್ತಿದೆ. ಕಂಪನಿಯ ಧ್ಯೇಯ ಉದ್ದೇಶಗಳು ಸ್ಪಷ್ಟವಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಹಕರು ಯಾವ ಚಿಂತೆ ಮಾಡುವ ಅಗತ್ಯವಿಲ್ಲ.

ಎಸ್ ಬಿಐ ಬ್ಲ್ಯೂ ಚಿಪ್ ಫಂಡ್
ಕಳೆದ 4 ವರ್ಷದಿಂದ ಎಸ್ ಬಿಐ ಬ್ಲ್ಯೂ ಚಿಪ್ ಫಂಡ್ ಶೇ. 24 ರಿಟರ್ನ್ಸ್ ನೀಡುತ್ತಿದೆ. ಮಾರುತಿ ಮತ್ತು ಸನ್ ಫಾರ್ಮಾ ದಲ್ಲಿ ಬಂಡವಾಳ ಹೂಡಿಕೆ ಮಾಡಿರುವುದರಿಂದ ಪ್ರಗತಿ ಏರುಗತಿಯಲ್ಲಿ ಸಾಗುತ್ತಿದೆ. [ಹೊಸ ಹೂಡಿಕೆದಾರ ಅರಿತಿರಬೇಕಾದ ಸಪ್ತ ಸೂತ್ರ]

2006 ರಲ್ಲಿ ಫಂಡ್ ನ್ನು ಮೊದಲ ಬಾರಿಗೆ ಜಾರಿ ಮಾಡಲಾಯಿತು. ಆರಂಭದ ವರ್ಷದಲ್ಲಿ ಶೇ. 11 ರಿಟರ್ನ್ಸ್ ನೀಡುತ್ತಿತ್ತು. ನೀವು 5 ಸಾವಿರ ಹೂಡಿಕೆ ಮಾಡಿದರೆ 1 ಸಾವಿರ ರೂ. ಅನ್ನು ಸುರಕ್ಷಿತ ತಾಣದಲ್ಲಿ ಹಾಕಬೇಕಾಗಯತ್ತದೆ. ಇದರ ಜತೆ ರಿಲಯನ್ಸ್ ಸಹ ಸಂಬಂಧವಿರಿಸಿಕೊಂಡಿದೆ ಎಂಬುದನ್ನು ಗಮನಿಸಬೇಕು.

ಕೊನೆ ಮಾತು
ಎಚ್ ಡಿಎಫ್ ಸಿ ಮತ್ತು ಎಸ್ ಬಿಐ ಬ್ಲ್ಯೂ ಚಿಪ್ ಫಂಡ್ ಸುರಕ್ಷಿತ ತಾಣವೆಂದೇ ಪರಿಗಣಿಸಬಹುದು. ದಿಢೀರ್ ಎಂದು ಹೂಡಿಕೆ ಮಾಡುವ ಮುನ್ನ ಇಂಥ ಸಲಹೆಗಳನ್ನು ಪರಿಗಣಿಸುವುದು ಒಳಿತು.(ಗುಡ್ ರಿಟರ್ನ್ಸ್ . ಇನ್)

English summary

Best SIP Plans To Invest In in India

Systematic Investment Plans (SIPs) is a mechanism where you invest money each month or periodically, such that you grow a corpus after a specified period. SIPs is a term basically coined for investing in plans launched by mutual funds in India. This could be either through equity mutual funds, debt mutual funds or a balanced mutual fund which invests in both debt and equity. Here are some of the best SIP plans to invest in.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X