For Quick Alerts
ALLOW NOTIFICATIONS  
For Daily Alerts

ಎಫ್ಎಂ ಬಿಡ್ಡಿಂಗಿಗೆ ಅನುಮತಿ, ಸನ್ ಟಿವಿ ಷೇರುಗಳು ಏರಿಕೆ

By Mahesh
|

ಮುಂಬೈ, ಜುಲೈ 27: ಮಾರನ್ ಬ್ರದರ್ಸ್ ಒಡೆತನದ ಸನ್ ನೆಟ್ವರ್ಕ್ಸ್ ಸಂಸ್ಥೆ ಷೇರು ಹೊಂದಿರುವವರಿಗೆ ಶುಭ ಸುದ್ದಿ ಸಿಕ್ಕಿದೆ. ಎಫ್ ಎಂ ರೇಡಿಯೋ ವಾಹಿನಿಗಾಗಿ ನಡೆಯುವ ಇ ಹರಾಜಿನಲ್ಲಿ ಸನ್ ನೆಟ್ವರ್ಕ್ ಪಾಲ್ಗೊಳ್ಳಲು ಅನುಮತಿ ಸಿಕ್ಕ ಬೆನ್ನಲ್ಲೇ ಷೇರುಪೇಟೆಯಲ್ಲಿ ಸೋಮವಾರ ಸಂಸ್ಥೆಯ ಷೇರುಗಳು ಭರ್ಜರಿ ಜಿಗಿತ ಕಂಡಿದೆ.

ಸನ್ ನೆಟ್ವರ್ಕ್ ಗೆ ಸೇರಿದ 33 ಟಿವಿ ಚಾನೆಲ್ ಹಾಗೂ 45 ಎಫ್ ಎಂ ವಾಹಿನಿಗಳಿಗೆ ಭದ್ರತಾ ಅನುಮತಿ ನೀಡಲು ಗೃಹ ಸಚಿವಾಲಯ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.. ಸನ್ ನೆಟ್ವರ್ಕ್ ಸಂಸ್ಥೆ ಪರವಾನಗಿ ರದ್ದು, ಪ್ರಸಾರ ಸ್ಥಗಿತದ ಭೀತಿ ಎದುರಿಸುತ್ತಿದೆ. [ಸನ್ ನೆಟ್ವರ್ಕ್ 33 ಟಿವಿ ವಾಹಿನಿ, 45 ಎಫ್ ಎಂ ಬಂದ್?]

ಭಾರತದ ಅತಿದೊಡ್ಡ ಟಿವಿ ಜಾಲ ಹೊಂದಿರುವ ಸಂಸ್ಥೆಗಳ ಪೈಕಿ ಸನ್ ನೆಟ್‍ವರ್ಕ್ ಕೂಡಾ ಒಂದಾಗಿದೆ. ಸುಮಾರು 95 ದಶಲಕ್ಷಕ್ಕೂ ಅಧಿಕ ಮನೆಗಳನ್ನು ತಲುಪುತ್ತಿರುವ ಮಾರನ್ ಸೋದರರ ಸನ್ ನೆಟ್ವರ್ಕ್ ಇತ್ತೀಚೆಗೆ ತಮ್ಮ ಟಿವಿ ಚಾನೆಲ್ ಹಾಗೂ ಎಫ್ ಎಂ ವಾಹಿನಿಗಳ ಭದ್ರತಾ ಪರವಾನಗಿ ನವೀಕರಣ ಅರ್ಜಿ ಸಲ್ಲಿಸಿತ್ತು. ಅದರೆ, ಆರ್ಥಿಕ ಸುರಕ್ಷತಾ ನಿಯಮಗಳನ್ನು ಪಾಲಿಸುವಲ್ಲಿ ಕಲಾನಿಧಿ ಮಾರನ್ ಅವರ ಸಂಸ್ಥೆ ವಿಫಲವಾಗಿರುವುದರಿಂದ ಲೈಸನ್ಸ್ ನವೀಕರಣವಾಗಿರಲಿಲ್ಲ.

ಎಫ್ಎಂ ಬಿಡ್ಡಿಂಗಿಗೆ  ಅನುಮತಿ, ಸನ್ ಟಿವಿ ಷೇರುಗಳು ಏರಿಕೆ

ಹರಾಜಿನಲ್ಲಿ ಪಾಲ್ಗೊಳ್ಳಲು ಅನುಮತಿ: ಸನ್ ನೆಟ್ವರ್ಕ್ ಒಡೆತನದ 33ಕ್ಕೂ ಅಧಿಕ ಟಿವಿ ಚಾನೆಲ್ ಗಳು ಹಾಗೂ 45ಕ್ಕೂ ಅಧಿಕ ಎಫ್ ಎಂ ಚಾನೆಲ್, ಸೂರ್ಯನ್ ಎಫ್ ಎಂ ಹಾಗೂ ರೆಡ್ ಎಫ್ ಎಂ ಎಲ್ಲವೂ ಪ್ರಸಾರ ಸ್ಥಗಿತಗೊಳಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಸನ್ ನೆಟ್ವರ್ಕ್ ಇದೆ. ಅದರೆ, ಎಫ್ ಎಂ ವಾಹಿನಿ ಇ ಹರಾಜಿನಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ಮದ್ರಾಸ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. [ಷೇರುಪೇಟೆಯಲ್ಲಿ ಸನ್ ಟಿವಿ ನೆಟ್ವರ್ಕ್ ಈ ದಿನ ವಹಿವಾಟು]

ಈ ಬಗ್ಗೆ ಆದೇಶ ನೀಡಿದ ಮದ್ರಾಸ್ ಹೈಕೋರ್ಟ್, ಮುಂದಿನ ಆದೇಶದ ತನಕ ಹರಾಜಿನ ಫಲಿತಾಂಶ ಗೌಪ್ಯವಾಗಿ ಮುಚ್ಚಿದ ಲಕೋಟೆಯಲ್ಲಿಡಬೇಕು ಎಂದು ಹೇಳಿತ್ತು. ನಂತರ ದೆಹಲಿ ಹೈಕೋರ್ಟ್ ರೆಡಿಯೋ ಎಫ್ ಎಂ ಇ ಹರಾಜು ಮೂರನೇ ಹಂತದಲ್ಲಿ ಪಾಲ್ಗೊಳ್ಳಲು ಯಾವುದೇ ಅಡ್ಡಿಯಿಲ್ಲ ಎಂದು ತೀರ್ಪು ನೀಡಿತು.

ಈ ಸುದ್ದಿ ಹೊರಬರುತ್ತಿದ್ದಂತೆ ಸನ್ ಟಿವಿ ಷೇರುಗಳು ಶೇ 7ರಷ್ಟು ಮೇಲಕ್ಕೇರಿತ್ತು. ಬಿಎಸ್ ಇಯಲ್ಲಿ ಸನ್ ಟಿವಿ ಷೇರುಗಳು ಸೋಮವಾರ ಬೆಳಗ್ಗೆ 295.00 ರು ಮುಖಬೆಲೆಯಂತೆ ಆರಂಭವಾಗಿ 12.70 ರು ನಂತೆ ಶೇ 4.54 ರಷ್ಟು ಏರಿಕೆ ಕಂಡಿತು. ಇದೇ ವೇಳೆ ಎನ್ ಎಸ್ ಇನಲ್ಲಿ 295 ರು ನಂತೆ ವಹಿವಾಟು ನಡೆಸಿ 292.35 ರು ನಂತೆ ಶೇ 4.52 ರಷ್ಟು ಏರಿಕೆ ಕಂಡು 12.65 ರು ನಷ್ಟು ಮೇಲಕ್ಕೇರಿದೆ.

English summary

Sun TV Rallies 7 Per Cent As Red FM Allowed to Bid In FM Auctions

Shares in Sun TV rallied a huge 7 per cent after the Delhi High Court allowed the company to take part in the e-auction for phase III of Radio FM.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X