For Quick Alerts
ALLOW NOTIFICATIONS  
For Daily Alerts

ಸೋಮವಾರ ಏರಿಕೆ ಸಾಧಿಸಿದ ಷೇರುಗಳ ಪಟ್ಟಿ

|

ಸೋಮವಾರದ ಮಾರುಕಟ್ಟೆ ತಲ್ಲಣಗಳಿಂದ ಹೊರತಾಗಿರಲಿಲ್ಲ. ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 109 ಅಂಕ ನಷ್ಟ ಮಾಡಿಕೊಂಡರೆ, ನಿಫ್ಟಿ 31 ಅಂಕ ಕಳೆದುಕೊಂಡಿತು. ಹಾಗಾದರೆ ಯಾವ ಯಾವ ಷೇರುಗಳು ಏರಿಕೆ ಮತ್ತು ಇಳಿಕೆ ಸಾಧಿಸಿದವು ಎಂಬುದರ ಮೇಲೆ ಒಂದು ನೋಟ ಇಲ್ಲಿದೆ.

 

ಜಿಲೈಟ್ ಇಂಡಿಯಾ
ಕಂಪನಿ ತನ್ನ ವರದಿಯಲ್ಲಿನ 72.83 ಕೋಟಿ ಲಾಭ ಸಾಧಿಸಿದ ಕಾರಣ ಜಿಲೈಟ್ ಷೇರುಗಳು ಶೇ.1.43 ಏರಿಕೆ ಸಾಧಿಸಿದವು. ಇದು ‌‌ಷೇರು ಮಾರುಕಟ್ಟೆಯಲ್ಲಿ ಸೋಮವಾರ ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡಿತು.

 
ಸೋಮವಾರ ಏರಿಕೆ ಸಾಧಿಸಿದ ಷೇರುಗಳ ಪಟ್ಟಿ

ಭಾರ್ತಿ ಇನ್ಪ್ರಾಟೆಲ್
ಭಾರ್ತಿ ಇನ್ಪ್ರಾಟೆಲ್ ನ ಸುಮಾರು 600 ಕೋಟಿ ರು,. ಮೌಲ್ಯದ ಸಷೇರುಗಳು ಮಾರಾಟವಾಗಿದ್ದು ದಾಖಲೆ. 339 ರು ಗೆ ಷೇರು ಸೋಮವಾರ ಅಂತ್ಯವಾಯಿತು. ಶೇ. 2.54 ಏರಿಕೆ ಸಾಧಿಸಿದ್ದು ವಿಶೇಷ.

ಗೋದ್ರೇಜ್ ಕನ್ಸೂಮರ್
ಗೋದ್ರೇಜ್ ಕನ್ಸೂಮರ್ನ ಷೇರುಗಳು ಶೇ. 5 ಏರಿಕೆ ಕಂಡವು. 1335 ರು. ಗೆ ದಿನದ ವ್ಯವಹಾರವನ್ನು ಅಂತ್ಯಮಾಡಿತು. ಒಂದು ಸಂದರ್ಭದಲ್ಲಿ 1360 ರು. ವರೆಗೂ ಮಾರಾಟವಾಗಿ ದಾಖಲೆ ನಿರ್ಮಾಣ ಮಾಡಿತ್ತು.

ಕಳೆದ ವಾರ ತೀವ್ರ ಇಳಿಕೆಯ ಹಾದಿಯಲ್ಲಿ ಸಾಗಿದ್ದ ಮಾರುಕಟ್ಟೆ ಶುಕ್ರವಾರದಿಂದ ಚೇತರಿಕೆ ಹಾದಿಗೆ ಮರಳಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಹೂಡಿಕೆದಾರರಿಗೆ ಅಭಯ ನೀಡಿದ್ದರು. ರುಪಾಯಿ ಸಹ ಸ್ಥಿರತೆ ಸಾಧಿಸಿಕೊಳ್ಳುತ್ತಿದ್ದು ಚೀನಾದ ಅರ್ಥ ವ್ಯವಸ್ಥೆಯಲ್ಲಿನ ಬದಲಾವಣೆ ಪರಿಣಾಮ ಕಡಿಮೆಯಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.

English summary

Stocks That Were In News On August 31, 2015

The Sensex ended the day with losses of 109 points, while the Nifty closed lower by 31 points. European markets were seeing pretty hefty cuts of almost one per cent. Here is the August 31, 2015.
Story first published: Monday, August 31, 2015, 19:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X