For Quick Alerts
ALLOW NOTIFICATIONS  
For Daily Alerts

ಷೇರು ಮಾರುಕಟ್ಟೆಯಲ್ಲಿ ಕಡಿಮೆ ಹಣ ಹೂಡಿಕೆ ಹೇಗೆ?

|

ಷೇರು ಮಾರುಕಟ್ಟೆಯ ಬಗ್ಗೆ ತಿಳಿವಳಿಕೆ ಇಲ್ಲದೇ ಹಣ ಹೂಡಿಕೆ ಮಾಡಿದರೆ ನಷ್ಟ ಅನುಭವಿಸಬೇಕಾಗುತ್ತದೆ. ಮಾರುಕಟ್ಟೆಯ ಬಗ್ಗೆ ಮೂಲಭೂತ ತಿಳಿವಳಿಕೆಯನ್ನು ಹೊಂದಿರಬೇಕಾಗುತ್ತದೆ.

ಭಾರತದಲ್ಲಿ ಎರಡು ಬಗೆಯ ಮಾರುಕಟ್ಟೆ ವಿಧಾನಗಳು ಸಿಗುತ್ತದೆ. ಬಾಂಬೆ ಸ್ಟಾಕ್ ಏಜೆನ್ಸಿ (ಬಿಎಸ್ ಇ) ಮತ್ತು ನ್ಯಾಶನಲ್ ಸ್ಟಾಕ್ ಏಜೆನ್ಸಿ (ಎನ್ ಎಸ್ ಇ) ಎರಡು ಸ್ಟಾಕ್ ಏಜೆನ್ಸಿಗಳು ಕಾರ್ಯ ನಿರ್ವಹಿಸುತ್ತಿವೆ.

ಷೇರು ಮಾರುಕಟ್ಟೆಯಲ್ಲಿ ಕಡಿಮೆ ಹಣ ಹೂಡಿಕೆ ಹೇಗೆ?

ಚಿಕ್ಕ ಮೊತ್ತದ ಹಣ ಹೂಡಿಕೆ ಮಾಡಿ ಷೇರು ಮಾರುಕಟ್ಟೆಯಲ್ಲಿ ಮುಂದುವರಿಯಬೇಕು ಎಂದು ಅಂದುಕೊಂಡಿದ್ದರೆ ಈ ಕೆಳಗಿನ ಅಂಶಗಳನ್ನು ಅರಿತುಕೊಂಡಿರಬೇಕಾಗುತ್ತದೆ.

* ಬ್ಯಾಂಕ್ ಖಾತೆ
ಷೇರು ಮಾರುಕಟ್ಟೆಯಲ್ಲಿ ತೊಡಗಿಕೊಳ್ಳುವವರು ಬ್ಯಾಂಕ್ ಖಾತೆ ಹೊಂದಿರಬೇಕಾಗುತ್ತದೆ. ನಿಮ್ಮ ಹಣ ರವಾನೆ ಮತ್ತು ಖರೀದಿ ಎಲ್ಲ ತಂತ್ರವನ್ನು ಈ ಖಾತೆಯ ಆಧಾರದ ಮೇಲೆ ನಿಭಾಯಿಸಬೇಕಾಗುತ್ತದೆ.

* ಡಿಮಾಟ್ ಖಾತೆ

ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಭಾಗವಹಿಸಬೇಕು ಎಂದಾದರೆ ಡಿಮಾಟ್ ಖಾತೆಯನ್ನು ಹೊಂದಿರಬೇಕಾಗುತ್ತದೆ. ಅನೇಕ ಏಜೆನ್ಸಿಗಳು ಡಿಮಾಟ್ ಖಾತೆಯನ್ನು ನಿಮ್ಮ ಬ್ಯಾಂಕ್ ಖಾತೆ ಆಧಾರದಲ್ಲಿ ಮಾಡಿಕೊಡುತ್ತವೆ. ಇಲ್ಲಿ ಈಕ್ವಿಟಿ, ಮ್ಯೂಚುವಲ್ ಫಂಡ್ ಎಲ್ಲವನ್ನು ಖರೀದಿ ಮಾಡಬಹುದು.

* ಟ್ರೆಡಿಂಗ್ ಅಕೌಂಟ್

ಹೆಸರೇ ಸೂಚಿಸುವಂತೆ ಷೇರು ಖರೀದಿ ಮತ್ತು ಮಾರಾಟ ಇದೇ ಖಾತೆ ಆಧಾರದಲ್ಲಿ ನಡೆಯುತ್ತದೆ. ನಿಮ್ಮ ಡಿಮಾಟ್ ಖಾತೆ ಮತ್ತು ಉಳಿತಾಯ ಖಾತೆ ನಡುವಿನ ಕೊಂಡಿಯಾಗಿ ಟ್ರೇಡಿಂಗ್ ಅಕೌಂಟ್ ಕಾರ್ಯನಿರ್ವಹಿಸುತ್ತದೆ. ಕೆಲವೊಂದು ಬ್ಯಾಂಕ್ ಗಳಿ ಥ್ರೀ ಇನ್ ಒನ್ ಮಾದರಿಯ ಖಾತೆಯನ್ನು ಕೊಡಮಾಡುತ್ತವೆ.

* ಮಾರುಕಟ್ಟೆ ತಿಳಿವಳಿಕೆ

ಹಣಕಾಸಿನ ವ್ಯವಹಾರ, ಹೂಡಿಕೆ, ಪ್ರಮುಖ ಕಂಪನಿಗಳ ವಾರ್ಷಿಕ ವರದಿ, ವಾಣಿಜ್ಯ ಸುದ್ದಿಗಳ ಬಗ್ಗೆ ತಕ್ಕ ಮಟ್ಟಿನ ತಿಳಿವಳಿಕೆಯನ್ನಾದರೂ ಪಡೆದುಕೊಳ್ಳಲೇಬೇಕು. ದಲ್ಲಾಳಿಗಳಿಂದಲೂ ಮಾಹಿತಿ ಪಡೆದುಕೊಳ್ಳಲು ಸಾಧ್ಯವಿದೆ.

* ಚಿಕ್ಕ ಪ್ರಮಾಣ ಹಣದ ಹೂಡಿಕೆ ಹೇಗೆ?

ನೀವು ತೊಡಗಿಸಲಿರುವ ಹಣದ ಆಧಾರದಲ್ಲಿ ರಿಸ್ಕ್ ಫ್ಯಾಕ್ಟರ್ ಕುರಿತಾಗಿ ಹೇಳಬಹುದು. ನಿಮ್ಮ ವಯಸ್ಸು ಸಹ ಮಾರುಕಟ್ಟೆ ಪ್ರವೇಶ ಮತ್ತು ಮುಂದುವರಿಯಬೇಕಾದ ವಿಧಾನಗಳನ್ನು ತಿಳಿಸುತ್ತದೆ.

* ಹಣ ಹೂಡಿಕೆ ಮುನ್ನ ಮಾರಿಕಟ್ಟೆಯಲ್ಲಿ ಅನುಭವ ಹೊಂದಿದವರೊಂದಿಗೆ ಚರ್ಚೆ ಮಾಡಿ
* ಪ್ರತಿ ತಿಂಗಳು ನಿರ್ದಿಷ್ಟ ಮೊತ್ತದ ಹಣ ಹಾಕುವುದು ಉತ್ತಮ

* ಒಮ್ಮಲೇ ಅಷ್ಟೂ ಹಣ ಹೂಡಿಕೆ ಮಾಡದಿರುವುದೇ ಒಳಿತು

* ಕಡಿಮೆ ಲಾಭವಾದರೂ ಚಿಂತೆಯಿಲ್ಲ ಎಂಬ ಮನೋಭಾವದಲ್ಲಿಯೇ ಮಾರುಕಟ್ಟೆಯಲ್ಲಿ ಮುನ್ನಡೆಯಿರಿ.(ಗುಡ್ ರಿಟರ್ನ್ಸ್.ಇನ್)

English summary

Stock Market Basics: How To Start Investing With A Little Money?

Stock Market is a place an individual wishes to invest but only few go ahead as it requires ample knowledge and one wrong decision can wipe out all the savings. In India, trading can be done through Bombay Stock Exchange (BSE) and National Stock Exchanges (NSE) are two stock exchanges. There are different ways by which one can start investing such as online or through a stockbroker or investment firm. Here are share market basics to be carried before you start trading in stock market.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X