For Quick Alerts
ALLOW NOTIFICATIONS  
For Daily Alerts

ಕನ್ನಡದಲ್ಲಿ ಬಂತು ಕೋಟಕ್ ಆಪ್, ಇಂಟರ್ನೆಟ್ಟೂ ಬೇಕಿಲ್ಲ

|

ಜನರ ಪ್ರೀತಿಗೆ ಪಾತ್ರವಾಗಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ ಕನ್ನಡ ಭಾಷೆಯಲ್ಲಿ ಹೊಸ ಮೊಬೈಲ್ ಅಲ್ಪಿಕೇಶನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಡಿಜಿಟಲ್ ಬ್ಯಾಂಕಿಂಗ್ ಗೆ ಒತ್ತು ನೀಡುವ ಸಲುವಾಗಿ 'ಕೋಟಕ್ ಭಾರತ್' ಹೆಸರಿನಲ್ಲಿ ಅಪ್ಲಿಕೇಶನ್ ಹೊರತಂದಿದೆ. ಇದರಲ್ಲೇನು ಹೊಸತನ ಅಂತೀರಾ? ಅಲ್ಲೇ ಇರೋದಿ, ಈ ಅಪ್ಲಿಕೇಶನ್ ಅಂತರ್ಜಾಲ ಸಂಪರ್ಕ ಇಲ್ಲದೆನೂ ಕಾರ್ಯನಿರ್ವಹಿಸುತ್ತದೆ.

 

ಕನ್ನಡಕ್ಕೆ ಸಂಬಂಧಿಸಿ ಹೇಳುವುದಾದರೆ ಇದು ಮೊಟ್ಟ ಮೊದಲ ಪ್ರಯತ್ನ ಎಂದೇ ಹೇಳಬಹುದು. ಅಪ್ಲಿಕೇಶನ್ ಮುಖಾಂತರ ದಿನವೊಂದಕ್ಕೆ 2500 ರು. ದಷ್ಟು ಹಣವನ್ನು ಟ್ರಾನ್ಸ್ ಫರ್ ಮಾಡಲು ಅವಕಾಶ ಕಲ್ಪಿಸಲಾಗಿದೆ.[ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ಸಂಖ್ಯೆ ನೋಂದಣಿ ಏಕೆ?]

 
ಕನ್ನಡದಲ್ಲಿ ಬಂತು ಕೋಟಕ್ ಆಪ್, ಇಂಟರ್ನೆಟ್ಟೂ ಬೇಕಿಲ್ಲ

ಗ್ರಾಹಕರು ಬ್ಯಾಂಕ್ ನಲ್ಲಿ ನೋಂದಣಿ ಮಾಡಿಸಿದ ಮೊಬೈಲ್ ಸಂಖ್ಯೆ ಆಧಾರದಲ್ಲಿಯೇ ಅಪ್ಲಿಕೇಶನ್ ಕಾರ್ಯನಿರ್ವಹಿಸಲಿದೆ. ಹಾಗಾಗಿ ಯಾವುದೇ ಬಗೆಯ ಆತಂಕಗಳಿಗೆ ಒಳಗಾಗಬೇಕಾಗಿಲ್ಲ ಎಂದು ಬ್ಯಾಂಕ್ ತಿಳಿಸಿದೆ.[ಬದಲಾದ ಕಾಲದಲ್ಲಿ ಪ್ಯಾನ್ ಕಾರ್ಡ್ ಎಲ್ಲೆಲ್ಲಿ ಅಗತ್ಯ?]

ಹಣ ರವಾನೆ ನಂತರ ಗ್ರಾಹಕರ ಮೊಬೈಲ್ ಸಂಖ್ಯೆ ಬ್ಯಾಂಕ್ ವ್ಯವಹಾರದ ಮಾಹಿತಿಯನ್ನು ಕಳಿಸಿಕೊಡುತ್ತದೆ. ಗ್ರಾಹಕರು ತಮ್ಮ ಉಳಿತಾಯ ಖಾತೆ, ಚಾಲ್ತಿ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಸಹ ಅಪ್ಲಿಕೇಶನ್ ಮುಖಾಂತರ ಮ್ಯಾನೇಜ್ ಮಾಡಲು ಸಾಧ್ಯವಿದೆ. ಸದ್ಯಕ್ಕೆ ಅಪ್ಲಿಕೇಶನ್ ಹಿಂದಿ, ಇಂಗ್ಲಿಷ್, ಗುಜರಾತಿ, ಮರಾಠಿ, ತಮಿಳು ಮತ್ತು ಕನ್ನಡ ಭಾಷೆಯಲ್ಲಿ ಲಭ್ಯವಿದೆ.

ಅಪ್ಲಿಕೇಶನ್ ಬಳಕೆ ಮುಖಾಂತರ ಡಿಟಿಚ್ ಸೇವೆ, ಆಧಾರ್ ಕಾರ್ಡ್ ಲಿಂಕ್, ಎಟಿಎಂ ಹುಡುಕಾಟ, ಸುರಕ್ಷಾ ಭೀಮಾ ಯೋಜನೆ ದಾಖಲು ಸೇರಿದಂತೆ ವಿವಿಧ ವಿಮಾ ಯೋಜನೆ ಸೌಲಭ್ಯಕ್ಕೆ ಹೆಸರು ದಾಖಲಿಸಲು ಅವಕಾಶವಿದೆ(ಗುಡ್ ರಿಟರ್ನ್ಸ್.ಇನ್)

English summary

Kotak Rolls Out Mobile Banking App In Kannada With No Internet

Kotak Mahindra Bank (KMB) today announced the launch of Kotak Bharat app in Kannada, a mobile solution that requires no Internet connectivity, as part of its inclusive digital banking philosophy. KMB is India's first bank to achieve this distinction, which encourages cashless transactions by enabling customers to transfer up to Rs 2,500 per day and at a time, it said.
Story first published: Tuesday, October 13, 2015, 17:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X