For Quick Alerts
ALLOW NOTIFICATIONS  
For Daily Alerts

ಷೇರು ಮಾರುಕಟ್ಟೆಗೆ ನಾರಾಯಣ ಹೃದಯಾಲಯ, ಏನು? ಎತ್ತ?

|

ಹೆಲ್ತ್ ಕೇರ್ ಸೇವೆ ನೀಡುವುದರಲ್ಲಿ ಅಗ್ರಗಣ್ಯ ಎನಿಸಿಕೊಂಡಿರುವ ಬೆಂಗಳೂರು ಮೂಲದ ನಾರಾಯಣ ಹೃದಯಾಲಯ ಷೇರು ಮಾರುಕಟ್ಟೆಯನ್ನು ಅಧಿಕೃತವಾಗಿ ಪ್ರವೇಶ ಮಾಡುತ್ತಿದೆ.

ನಾರಾಯಣ ಹೃದಯಾಲಯ ಇನಿಶಿಯಲ್ ಪಬ್ಲಿಕ್ ಆಫರಿಂಗ್(ಇಪಿಒ) ಮೂಲಕ ಡಿಸೆಂಬರ್ 17 ರಂದು ಮಾರುಕಟ್ಟೆ ಪ್ರವೇಶ ಮಾಡಲಿದೆ. ಕಳೆದ ಸೆಪ್ಟೆಂಬರ್ 29 ರಂದೇ ಕಂಪನಿ ಸೆಬಿಗೆ ಷೇರು ಮಾರುಕಟ್ಟೆ ಪ್ರವೇಶಕ್ಕೆ ಮನವಿ ಸಲ್ಲಿಕೆ ಮಾಡಿ ದಾಖಲೆಗಳನ್ನು ನೀಡಿತ್ತು. ನಂತರ ನವೆಂಬರ್ 27 ರಂದು ಅನುಮತಿಯೂ ಸಿಕ್ಕಿತ್ತು.

2000ನೇ ಇಸವಿಯಲ್ಲಿ ಆರಂಭವಾದ ಕಂಪನಿ ಸದ್ಯ 23 ಆಸ್ಪತ್ರೆಗಳನ್ನು ಹೊಂದಿದೆ. ಇದರಲ್ಲಿ 8 ಹೃದ್ರೋಗ ಸಂಸ್ಥೆಗಳು ಸೇರಿವೆ. ಡಾ. ದೇವಿ ಪ್ರಸಾದ್ ಶೆಟ್ಟಿ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ.[ಟಾಟಾ ಮೋಟಾರ್ಸ್ ಡಿವಿಆರ್ ಷೇರು ಖರೀದಿಗೆ 5 ಕಾರಣಗಳು]

ಷೇರು ಮಾರುಕಟ್ಟೆಗೆ ನಾರಾಯಣ ಹೃದಯಾಲಯ, ಏನು? ಎತ್ತ?

ನಾರಾಯಣ ಹೃದಯಾಲಯದ ಐಪಿಒ ಬಗ್ಗೆ ತಿಳಿದುಕೊಳ್ಳಬೇಕಾದ 7 ಅಂಶಗಳು

1. ನೀವು 245 ರಿಂದ 250 ರು. ಒಳಗಡೆ ಬಿಡ್ ಮಾಡಿ ಷೇರು ಖರೀದಿ ಮಾಡಬಹುದು.

2. ಈಕ್ವಿಟಿ ಷೇರಿಗೆ ಮೇಲಿನ ದರ ನಿಗದಿ ಮಾಡಲಾಗಿದ್ದು ಷೇರು ಹಂಚಿಕೆ ನಂತರ ಸಂಸ್ಥೆಯ ಬಂಡವಾಳ 601 ಕೋಟಿ ರು. ನಿಂದ 613 ಕೋಟಿಗೆ ಏರಲಿದೆ.

3. ಡಿಸೆಂಬರ್ 17ಕ್ಕೆ ಐಪಿಒ ಮಾರುಕಟ್ಟೆ ಪ್ರವೇಶ ಮಾಡಲಿದ್ದು ಡಿಸೆಂಬರ್ 21ಕ್ಕೆ ಅಂತ್ಯವಾಗಲಿದೆ.[ಡಿಮಾಟ್ ಖಾತೆಗೂ ಮುನ್ನ ಈ 6 ಅಂಶ ತಿಳಿದುಕೊಂಡಿರಬೇಕು]

4. ನಾರಾಯಣ ಹೃದಯಾಲಯದೊಂದಿಗೆ ಜೆಪಿ ಮಾರ್ಗನ್, ಅಶೋಕ ಇನ್ ವೆಸ್ಟ್ ಮೆಂಟ್ ಹೋಲ್ಡಿಂಗ್ಸ್, ಅಂಬಾದೇವಿ ಹೋಲ್ಡಿಂಗ್ಸ್ ಕೈ ಜೋಡಿಸಲಿವೆ.

5. ಮೇಲೆ ಹೇಳಿದ ಪ್ರಮೋಟರ್ ಗಳು ಶೇ. 65 ಷೇರುಗಳ ಮೇಲೆ ಹಕ್ಕು ಸಾಧಿಸಲಿವೆ.

6. ನೀವು ಎನ್ ಎಸ್‌ ಸಿ ಮತ್ತು ಬಿಎಸ್ ಸಿಯಲ್ಲಿ ಷೇರು ಖರೀದಿ ಮಾಡಬಹುದು. ಮಿನಿಮಮ್ 60 ಷೇರುಗಳನ್ನು(ಲಾಟ್) ಖರೀದಿ ಮಾಡಲೇಬೇಕು.

7. ಆಕ್ಸಿಸ್ ಕ್ಯಾಪಿಟಲ್, ಐಡಿಎಫ್ ಸಿ ಸೆಕ್ಯೂರಿಟಿಸ್, ಜಫೆರೀಸ್ ಮೂಲಕ ಷೇರು ಖರೀದಿ ಸುಲಭ ಸಾಧ್ಯವಿದೆ.

ಕೊನೆ ಮಾತು: ಹೆಲ್ತ್ ಕೇರ್ ವಿಭಾಗಕ್ಕೆ ಸಂಬಂಧಿಸಿ ಡಿಸೆಂಬರ್ ತಿಂಗಳಲ್ಲಿ ನಾರಾಯಣ ಹೃದಯಾಲಯ ಷೇರು ಬಿಡುಗಡೆ ಮಾಡುತ್ತಿರುವ 3ನೇ ಕಂಪನಿಯಾಗಿದೆ. ಲಾಲ್ ಪಾಥ್ ಲ್ಯಾಬ್ಸ್ ಮತ್ತು ಅಲ್ಕೆಮ್ ಲ್ಯಾಬೋರಟೊರೀಸ್ ಡಿಸೆಂಬರ್ 8ರಂದು ಐಪಿಒ ಬಿಡುಗಡೆ ಮಾಡಿದ್ದವು.

English summary

Narayana Hrudayalaya IPO: 7 Things To Know

The Bengaluru-based healthcare service provider, Narayana Hrudayalaya's Initial Public Offering (IPO) will hit the capital market on December 17. The company had filed its draft red herring prospectus (DRHP) with SEBI on 29 September. The market regulator issued its final observation regarding the IPO on 27 November. Here are 7 things to know about the company's IPO.
Story first published: Friday, December 11, 2015, 15:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X