For Quick Alerts
ALLOW NOTIFICATIONS  
For Daily Alerts

ಡಾಲರ್ ಎದುರು ಮಂಡಿಯೂರಿದ ರುಪಾಯಿ

|

ಮುಂಬೈ, ಡಿಸೆಂಬರ್, 15: ಡಾಲರ್ ಎದುರು ರುಪಾಯಿ ಮಂಡಿಯೂರಿದೆ. ಸೋಮವಾರದ ಅಂತ್ಯಕ್ಕೆ ರುಪಾಯಿ ಎರಡು ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ.
ಸೋಮವಾರ 21 ಪೈಸೆ ಕಳೆದೊಕೊಂಡ ರುಪಾಯಿ ಕಳೆದ ಎರಡು ವರ್ಷಗಳಲ್ಲೇ ಕನಿಷ್ಠ ಮಟ್ಟವಾದ 67.09 ಮಟ್ಟಕ್ಕೆ ತಲುಪಿದೆ. ಹಿಂದಿ ವಾರದ ಕೊನೆಗೆ ರುಪಾಯಿ ಮೌಲ್ಯ 66.88ರಷ್ಟಿತ್ತು.

ಶೇ 0.31ರಷ್ಟು ಅಪಮೌಲ್ಯಕ್ಕೆ ಒಳಗಾಗಿ ಕಳೆದ 27 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಯಿತು. ಅಮೆರಿಕದ ಫೆಡರಲ್ ಬ್ಯಾಂಕ್‌ ಬಡ್ಡಿ ದರ ಹೆಚ್ಚಿಸಲಿದೆ ಎಂಬ ವಿಶ್ಲೇಷಣೆಯಿಂದ ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಅಸ್ಥಿರತೆ ಮೂಡಿಸಿದೆ. ಇದರಿಂದಾಗಿ ಷೇರು ಮಾರುಕಟ್ಟೆ ಸಹ ಕುಸಿತ ಕಂಡಿದೆ.[ಪ್ರಕೃತಿ ಮುನಿಸಿಂದ ಆರ್ಥಿಕ ಸಂಕಷ್ಟ ತಪ್ಪಿಸಿಕೊಳ್ಳಲು 5 ಉಪಾಯ]

ಡಾಲರ್ ಎದುರು ಮಂಡಿಯೂರಿದ ರುಪಾಯಿ

ಇನ್ನೊಂದೆಡೆ ಡಾಲರ್‌ಗೆ ಬೇಡಿಕೆ ಹೆಚ್ಚಿದೆ. ಈ ಎಲ್ಲ ಸಂಗತಿಗಳು ರೂಪಾಯಿ ಅಪಮೌಲ್ಯಕ್ಕೆ ಕಾರಣವಾಗಿವೆ. 2015ರಲ್ಲಿ ಇದುವರೆಗೆ ರೂಪಾಯಿ ಡಾಲರ್‌ ವಿರುದ್ಧ ಶೇ 5.90ರಷ್ಟು ಅಪಮೌಲ್ಯಕ್ಕೆ ಒಳಗಾಗಿದೆ.[ಜಿಎಸ್‌ಟಿ ಬಿಲ್ ಪಾಸಾದರೆ ಯಾವ ಷೇರುಗಳಿಗೆ ಲಾಭ?]

ಷೇರು ಮಾರುಕಟ್ಟೆ ಸಹ ಕಳೆದ ಕೆಲ ದಿನಗಳಿಂದ ಅಲ್ಲೋಲ ಕಲ್ಲೋಲಕ್ಕೆ ಒಳಗಾಗಿತದ್ದು ಹೂಡಿಕೆದಾರರು ನಷ್ಟ ಅನುಭವಿಸುತ್ತಲೇ ಇದ್ದಾರೆ. ರಿಸರ್ವ್ ಬ್ಯಾಂಕ್ ಮತ್ತು ಆರ್ಥಿಕ ಇಲಾಖೆ ರುಪಾಯಿ ಅಪಮೌಲ್ಯ ತಡೆಯಲು ಮಧ್ಯ ಪ್ರವೇಶ ಮಾಡುವ ಸಂಭವವಿದೆ.

English summary

Rupee Recovers From 2 Year Lows; Trades At 67.06 To The Dollar

The Indian rupee recovered marginally from 2 year lows and was last trading at Rs 67.06, to the US dollar, after closing at 67.09 on Monday. Jitters were felt across currency markets, following a 2-day US Fed meeting later today, in which it is widely expected to hike interest rates.
Story first published: Tuesday, December 15, 2015, 13:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X