For Quick Alerts
ALLOW NOTIFICATIONS  
For Daily Alerts

ದುಬಾರಿ ವಾಚ್‌ಗೆ ಸಿದ್ದು ಕಟ್ಟಬೇಕಾದ ತೆರಿಗೆ ಎಷ್ಟು?

|

ಎಲ್ಲೆಲ್ಲೂ ಸಿದ್ದರಾಮಯ್ಯ ಕೈಗಡಿಯಾರದ್ದೇ ಸುದ್ದಿ. ಸಮಾಜವಾದಿ ಹೆಸರಿನ ಸಿದ್ದರಾಮಯ್ಯ ದುಬಾರಿ ವಾಚ್ ಕಟ್ಟಿದ್ದಾರೆ ಎಂಬ ದುಂಬಾಲು. ಇದೆಲ್ಲ ಒಂದು ಕಡೆ ಇರಲಿ... ವಾಚ್ ನ ನಿಜವಾದ ಮೌಲ್ಯ ಎಷ್ಟು? ಅದು 60-70 ಲಕ್ಷ ಬಾಳುವುದೇ ಆದರೆ ಸಿಎಂ ಕಟ್ಟಬೇಕಾದ ತೆರಿಗೆ ಎಷ್ಟು? ಎಂಬ ಲೆಕ್ಕವನ್ನು ನೋಡಿಕೊಂಡು ಬರಬೇಕಾಗುತ್ತದೆ.

ವಜ್ರದ ಹರಳುಗಳನ್ನು ಹೊಂದಿರುವ ವಾಚ್ ನಿಜಕ್ಕೂ 70 ಲಕ್ಷ ರು. ಬೆಲೆ ಬಾಳುವುದೇ ಆಗಿದ್ದರೆ ಸಿದ್ದರಾಮಯ್ಯ 20 ಲಕ್ಷ ರು. ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಕೈಗಡಿಯಾರ ಕೊಡುಗೆಯಾಗಿ ಪಡೆದುಕೊಂಡಿದ್ದರೆ 80 ಸಿ ಅನ್ವಯ ಯಾವ ವಿನಾಯಿತಿಯೂ ಸಿಗುವುದಿಲ್ಲ. ಹೇಗೆ ಲೆಕ್ಕ ಹಾಕಿದರೂ ಸಿದ್ದರಾಮಯ್ಯ ಜುಲೈ 31, 2016ರ ಒಳಗೆ ತೆರಿಗೆ ಪಾವತಿ ಮಾಡಬೇಕು. ಸಿದ್ದರಾಮಯ್ಯ ಅವರ ಒಟ್ಟು ಆದಾಯಕ್ಕೆ ಈ ವಾಚ್ ನ ಮೌಲ್ಯ ಸಹ ಸೇರಿಕೊಳ್ಳುತ್ತದೆ.[80 ಸಿ ಬಿಟ್ಟು ತೆರಿಗೆ ವಿನಾಯಿತಿಗೆ 7 ಅತ್ಯುತ್ತಮ ತಂತ್ರಗಳು]

ದುಬಾರಿ ವಾಚ್‌ಗೆ ಸಿದ್ದು ಕಟ್ಟಬೇಕಾದ ತೆರಿಗೆ ಎಷ್ಟು?

ಆದರೆ ಮದುವೆ ಅಥವಾ ಇನ್ನಿತರ ಮಂಗಳ ಕಾರ್ಯದ ಸಂದರ್ಭದಲ್ಲಿ ಅಣ್ಣ ಅಥವಾ ತಂಗಿ ಅಥವಾ ಕುಟುಂಬದ ಯಾರಾದರೂ ಸಂಬಂಧಿಕರು ಗಿಫ್ಟ್ ಆಗಿ ವಾಚ್ ನೀಡಿದ್ದಾರೆ ಎಂದರೆ ಅದು ತೆರಿಗೆ ಲೆಕ್ಕದಿಂದ ಹೊರಗೆ ಉಳಿಯುತ್ತದೆ.[ಪ್ರಾಪರ್ಟಿ ಟ್ಯಾಕ್ಸ್ ಎಂದರೇನು? ಯಾರು ಕಟ್ಟಬೇಕು?]

ಕೈಗಡಿಯಾರದ ಮೇಲೆ ತೆರಿಗೆ ಲೆಕ್ಕ ಹೇಗೆ?
ಸದ್ಯದ ಆದಾಯ ತೆರಿಗೆ ಕಾನೂನು ಹೇಳುವಂತೆ 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಕೊಡುಗೆ ಪಡೆದುಕೊಂಡರೆ ತೆರಿಗೆ ಸಲ್ಲಿಕೆ ಮಾಡಬೇಕಾಗುತ್ತದೆ. ಕೂ ಗಡಿಯಾರದ ಒಟ್ಟು ಮೊತ್ತ ಮೊದಲೇ ಹೇಳಿದಂತೆ ಆದಾಯಕ್ಕೆ ಸೇರ್ಪಡೆಯಾಗುತ್ತದೆ. ಈ ಮೂಲಕ ಸಿದ್ದರಾಮಯ್ಯ ಶೇ. 30 ರಷ್ಟನ್ನು ತೆರಿಗೆಯಾಗಿ ಪಾವತಿ ಮಾಬೇಕಾಗುತ್ತದೆ.[ಹಾಲಿ ಮತ್ತು ಮಾಜಿಗಳ ನಡುವೆ ಮುಗಿಯದ 'ವಾಚ್'ಸಮರ]

ಕೈಗಡಿಯಾರದ ಒಟ್ಟು ಮೊತ್ತ ಎಷ್ಟು ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ ಇದೊಂದು ದುಬಾರಿ ವಾಚ್ ಎನ್ನುವುದು ಸಾಬೀತಾಗಿದೆ. ಸಿದ್ದರಾಮಯ್ಯ ಕಳೆದ ವರ್ಷ ಅಥವಾ ಈ ಹಣಕಾಸು ವರ್ಷದಲ್ಲೇ ವಾಚ್ ಪಡೆದುಕೊಂಡಿದ್ದರೂ ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.(ಗುಡ್ ರಿಟರ್ನ್ಸ್.ಇನ್)

Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X