For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ Q4 ಫಲಿತಾಂಶ ಲಾಭಕ್ಕೆ ತಿರುಗಿದ್ದು ಹೇಗೆ?

By Mahesh
|

ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಸತತ ನಾಲ್ಕನೇ ಬಾರಿಗೆ ವಿಶ್ಲೇಷಕರ ನಿರೀಕ್ಷೆಗೂ ಮೀರಿದ ಲಾಭ ಗಳಿಸುವ ಮೂಲಕ ಭರ್ಜರಿ ಫಲಿತಾಂಶ ಹೊರ ಹಾಕಿದೆ. ಇನ್ಫೋಸಿಸ್ ಶುಕ್ರವಾರ (ಏಪ್ರಿಲ್ 15) ತನ್ನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ.

ಮತ್ತೊಮ್ಮೆ ಮಾರುಕಟ್ಟೆ ನಿರೀಕ್ಷೆಗೂ ಮೀರಿದ ಲಾಭ ಪಡೆದುಕೊಂಡಿದ್ದು, ಶೇ 16.2 ರಷ್ಟು ನಿವ್ವಳ ಲಾಭ ಹೆಚ್ಚಳ ಕಂಡು 3,597 ಕೋಟಿ ರು ಗಳಿಸಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಆದಾಯ ಶೇ 3.8ರಷ್ಟು ಏರಿಕೆಯಾಗಿದೆ. [ಈ ದಿನದ ಷೇರುಪೇಟೆ ವಹಿವಾಟು ಅಂಕಿ ಅಂಶ]

ಉತ್ತಮ ಫಲಿತಾಂಶ ಬಂದಿರುವ ಹಿನ್ನಲೆಯಲ್ಲಿ ಬೋರ್ಡ್ ನಿರ್ದೇಶಕರು ಪ್ರಸಕ್ತ ಆರ್ಥಿಕ ವರ್ಷಕ್ಕೆ 14.25 ರು ಅಂತಿಮ ಡಿವಿಡೆಂಡ್ ಶಿಫಾರಸು ಮಾಡಿದ್ದಾರೆ. ಮೋಹಿತ್ ಜೋಶಿ, ರವಿ ಕುಮಾರ್ ಎಸ್ ಹಾಗೂ ಸಂದೀಪ್ ದಡ್ಲಾನಿ ಅವರು ಸಂಸ್ಥೆಯ ಅಧ್ಯಕ್ಷರಾಗಿ ಈ ತ್ರೈಮಾಸಿಕ ಅವಧಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.[ಸಿಕ್ಕಾ ಬಂದ್ಮೇಲೆ ಇನ್ಫಿಗೆ ಶುಕ್ರದೆಸೆ, ಮತ್ತೆ ನಿರೀಕ್ಷೆ ಮೀರಿದ ಲಾಭ!]

ಇನ್ಫೋಸಿಸ್ ಪ್ರಸಕ್ತ ಆರ್ಥಿಕ ವರ್ಷಕ್ಕೆ ನೀಡಿರುವ ಆದಾಯ ಮಾರ್ಗದರ್ಶಿ ನೋಡಿದರೆ ಬಂಡವಾಳ ಹೂಡಿಕೆದಾರರಿಗೆ ಸಕತ್ ಖುಷಿ ನೀಡಲಿದೆ. ಶುಕ್ರವಾರ ಸದ್ಯಕ್ಕೆ ಷೇರುಪೇಟೆಗೆ ರಜೆ ಇದೆ. ಸೋಮವಾರ ಇನ್ಫೋಸಿಸ್ ನ ಷೇರುಗಳು ಜಂಗಲ್ ಬುಕ್ ಸಿನಿಮಾದ ಮೌಗ್ಲಿ ಥರ ಜಂಗನೆ ಮೇಲಕ್ಕೆ ಹಾರುವ ನಿರೀಕ್ಷೆಯಿದೆ.

ಸಿಕ್ಕಾ ಅವರ ಯೋಜನೆಗೆ ಸಿಕ್ಕ ಪ್ರತಿಫಲ

ಸಿಕ್ಕಾ ಅವರ ಯೋಜನೆಗೆ ಸಿಕ್ಕ ಪ್ರತಿಫಲ

ಸಿಕ್ಕಾ ಅವರ ಯೋಜನೆಗೆ ಸಿಕ್ಕ ಪ್ರತಿಫಲ ನಿರೀಕ್ಷೆ ಮೀರಿದ ಫಲಿತಾಂಶ ಸಿಕ್ಕಿದೆ. ಮತ್ತೊಮ್ಮೆ ಮಾರುಕಟ್ಟೆ ನಿರೀಕ್ಷೆಗೂ ಮೀರಿದ ಲಾಭ ಪಡೆದುಕೊಂಡಿದ್ದು, ಶೇ 16.2 ರಷ್ಟು ನಿವ್ವಳ ಲಾಭ ಹೆಚ್ಚಳ ಕಂಡು 3,597 ಕೋಟಿ ರು ಗಳಿಸಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಆದಾಯ ಶೇ 3.8ರಷ್ಟು ಏರಿಕೆಯಾಗಿದೆ. ಮಾರುಕಟ್ಟೆ ನಿರೀಕ್ಷೆ 3,500 ಕೋಟಿ ರು ನಷ್ಟಿತ್ತು.

ಮಾರ್ಜಿನ್ ದರ ಏರಿಕೆ ಅಚ್ಚರಿ

ಮಾರ್ಜಿನ್ ದರ ಏರಿಕೆ ಅಚ್ಚರಿ

ಬಡ್ಡಿ ಹಾಗೂ ತೆರಿಗೆ ಕಡಿತಕ್ಕೂ ಮುಂಚಿತವಾಗಿ ಸಿಗುವ ಆದಾಯ EBIT ಮಾರ್ಜಿನ್ ಕೂಡಾ ಅಚ್ಚರಿಯ ಏರಿಕೆ ಕಂದಿದೆ. ಇಬಿಐಟಿ ಶೇ 25.05 ರಷ್ಟು ಏರಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 24.9ರಷ್ಟಿತ್ತು.

ಇನ್ಫೋಸಿಸ್ ಸಂಸ್ಥೆಯ ಆಟ್ರಿಷನ್ ದರ

ಇನ್ಫೋಸಿಸ್ ಸಂಸ್ಥೆಯ ಆಟ್ರಿಷನ್ ದರ

ಕಳೆದ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಸಂಸ್ಥೆಯ ಆಟ್ರಿಷನ್ ದರ ಶೇ 18.1ರಷ್ಟು ಪ್ರಮಾಣದಲ್ಲಿತ್ತು. ಅದಕ್ಕೂ ಹಿಂದಿನ ತ್ರೈಮಾಸಿಕದಲ್ಲಿ ಶೇ 19.9ರಷ್ಟಿತ್ತು. ಅದರೆ, ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ 18ಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ.

ಆದಾಯ ಕೂಡಾ ನಿರೀಕ್ಷೆಗೂ ಮೀರಿ ಬಂದಿದೆ.

ಆದಾಯ ಕೂಡಾ ನಿರೀಕ್ಷೆಗೂ ಮೀರಿ ಬಂದಿದೆ.

ಮಾರ್ಚ್ 31, 2016ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಸಂಸ್ಥೆಯ ಆದಾಯ (ವರ್ಷದಿಂದ ವರ್ಷಕ್ಕೆ) ಶೇ 23.4 ರಷ್ಟು ಏರಿಕೆಯಾಗಿದ್ದು 16,550 ಕೋಟಿ ರು ಗಳಿಸಿದೆ. ಬೆಂಗಳೂರು ಮೂಲದ ಕಂಪನಿಯ ಒಟ್ಟಾರೆ ಮೌಲ್ಯ 62,441 ಕೋಟಿ ರು ನಷ್ಟಿದೆ. ಈ ಮುಂಚೆ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 15,902 ಕೋಟಿ ರು ನಷ್ಟಿತ್ತು.

ಆದಾಯ ಮಾರ್ಗದರ್ಶಿ

ಆದಾಯ ಮಾರ್ಗದರ್ಶಿ

ಬಂಡವಾಳ ಹೂಡಿಕೆದಾರರಿಗೆ ಆದಾಯ ಮಾರ್ಗದರ್ಶಿ ನೆರವಾಗಬಹುದು. ಡಾಲರ್ ಆದಾಯ ಗೈಡನ್ಸ್ 2016-17ರ ಆರ್ಥಿಕ ವರ್ಷಕ್ಕೆ ಶೇ 11.8 ರಿಂದ ಶೇ 13.8ರಷ್ಟು ಎಂದು ನೀಡಲಾಗಿದೆ. ಕರೆನ್ಸಿ ಆದಾಯ ಪ್ರಗತಿ ದರ ಶೇ 11.5 ರಿಂದ ಶೇ 13.5 ಎಂದು ಸೂಚಿಸಲಾಗಿದೆ. ಇದು ನಾಸ್ಕಾಂ ಸೂಚಿಸಿದ ಮಾರ್ಗದರ್ಶಿಗಿಂಗ ಉತ್ತಮವಾಗಿದ್ದು, ಹೆಚ್ಚಿನ ಹೂಡಿಕೆ ನಿರೀಕ್ಷಿಸಬಹುದು.

English summary

Quick Highlights Of The Upbeat Q4 Results From Infosys

Infosys once again outperformed analysts estimates on most counts and reported a good set of Q4 results for the quarter ending March 31, 2016.
Story first published: Friday, April 15, 2016, 15:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X