For Quick Alerts
ALLOW NOTIFICATIONS  
For Daily Alerts

ಮಲ್ಯ ಒಡೆತನದಲ್ಲಿದ್ದ 6 ಕಂಪನಿಗಳ ಸ್ಥಿತಿ ಗತಿ ಏನಾಗಿದೆ?

By Mahesh
|

ಕಿಂಗ್ ಆಫ್ ಗುಡ್ ಟೈಮ್ಸ್ ಎಂದು ಕರೆಸಿಕೊಳ್ಳುತ್ತಿದ್ದ ಮದ್ಯದ ದೊರೆಯಾಗಿ ಮೆರೆಯುತ್ತಿದ್ದ ಅಪ್ಪಟ ವ್ಯಾಪಾರಿ ವಿಜಯ್ ಮಲ್ಯ ಅವರು ಸಾಲ ಕೊಟ್ಟ ಬ್ಯಾಂಕ್ ಗಳ ವಿರುದ್ಧ ಕಾನೂನು ಸಮರ ಮುಂದುವರೆಸಿದ್ದಾರೆ.

 

ಎಸ್ ಬಿಐ ಸೇರಿದಂತೆ 17ಕ್ಕೂ ಅಧಿಕ ಬ್ಯಾಂಕುಗಳಿಂದ 9,000 ಕೋಟಿ ರು ಸಾಲ ಹೊತ್ತಿರುವ ಉದ್ದೇಶಪೂರ್ವಕ ಸುಸ್ತಿದಾರ ಮಲ್ಯ ಅವರು ಸಾಲ ವಾಪಸ್ ಮಾಡುವ ಬಗ್ಗೆ ಮಾತನಾಡಿದ್ದಾರೆ. ಆದರೆ, ಕಂತು ಕಂತಾಗಿ ಒಂದಿಷ್ಟು ಸಾವಿರ ಕೋಟಿ ರು ಮಾತ್ರ ನೀಡಬಲ್ಲೆ. ಬ್ಯಾಂಕುಗಳು ನನ್ನ ಅಸ್ತಿ ಬಗ್ಗೆ ವಿವರಣೆ ಕೇಳುವ ಅಗತ್ಯವಿಲ್ಲ. ನನ್ನ ಪತ್ನಿ, ಪುತ್ರ ಎಲ್ಲರೂ ಯುಎಸ್ ನಾಗರೀಕರಾಗಿದ್ದಾರೆ ಅವರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದು ಖಡಕ್ ಉತ್ತರ ನೀಡಿದ್ದಾರೆ.

ರೆಡ್ ಕಾರ್ನರ್ ನೋಟಿಸ್, ಜಾಮೀನು ರಹಿತ ವಾರೆಂಟ್, ಕೋರ್ಟ್ ಸಮನ್ಸ್ ಬಂದರೂ ಮಲ್ಯ ವಿಚಲಿತರಾಗಿಲ್ಲ. ಯುನೈಟೆಡ್ ಸ್ಪಿರೀಟ್ ಚೆರ್ಮನ್ ಸ್ಥಾನ ತೊರೆದು ಲಂಡನ್ ಗೆ ಹಾರಿರುವ ಮಲ್ಯ ಅವರಿಗೆ ಡಿಯಾಜಿಯೋ ಸಂಸ್ಥೆ ಸುಮಾರು 515 ಕೋಟಿ ರು ನೀಡಲು ಮುಂದಾಗಿತ್ತು.

ಆದರೆ, ಈ ಮೊತ್ತ ಮಲ್ಯ ಕೈ ಸೇರದಂತೆ ತಾತ್ಕಾಲಿಕವಾಗಿ ಜಪ್ತಿ ಮಾಡಲು ಡಿಆರ್ ಟಿ ಆದೇಶಿಸಿದೆ. ಜೊತೆಗೆ ಜಾರಿ ನಿರ್ದೇಶನಾಲಯದಿಂದ ಹಣ ದುರಪಯೋಗ ಕೇಸು ದಾಖಲಾಗಿದೆ. ಸದ್ಯಕ್ಕೆ ಮಲ್ಯ ಒಡೆತನದಲ್ಲಿದ್ದ ಕಂಪನಿಗಳ ಸ್ಥಿತಿಗತ್ತಿಯತ್ತ ಮುಂದೆ ಓದಿ...

ಕಿಂಗ್ ಫಿಷರ್ ಏರ್ ಲೈನ್ಸ್

ಕಿಂಗ್ ಫಿಷರ್ ಏರ್ ಲೈನ್ಸ್

2012 ರಲ್ಲಿ ಕಿಂಗ್ ಫಿಶರ್ ಸಿಬ್ಬಂದಿಗಳು ಸಂಬಳ ಸಿಕ್ಕಿಲ್ಲ ಎಂದು ಮುಷ್ಕರ ಹೂಡಿದ್ದರು. ಇದಾದ ಬಳಿಕ ಆದಾಯ ತೆರಿಗೆ ಇಲಾಖೆಯು ಕೆಎಫ್ ಎ ಖಾತೆಗಳನ್ನು ಜಫ್ತಿ ಮಾಡಿತು. ಮತ್ತೆ ವಿಮಾನ ಮೇಲಕ್ಕೆ ಏರಲಿಲ್ಲ. ಸಿಬ್ಬಂದಿಗಳಿಗೆ ಸಂಬಳವೂ ಸಿಕ್ಕಿಲ್ಲ. ವಿಮಾನಯಾನ ಸಂಸ್ಥೆಗಾಗಿ ಮಾಡಿದ ಸಾಲ ಇನ್ನಷ್ಟು ಕಂಪನಿಗಳನ್ನು ಬಲಿ ತೆಗೆದುಕೊಂಡಿತು.

ಮಂಗಳೂರು ಕೆಮಿಕಲ್ಸ್

ಮಂಗಳೂರು ಕೆಮಿಕಲ್ಸ್

ಮಂಗಳೂರು ಕೆಮಿಕಲ್ಸ್ ಸಂಸ್ಥೆ  ಈಗ ಅಡ್ವಾನ್ಟೆಜ್ ಸಮೂಹ ಸಂಸ್ಥೆ ಪಾಲಾಗಿದೆ. ಹೊಸ ಸಂಸ್ಥೆ ಶೇ 53.03 ಪಾಲು ಹೊಂದಿದೆ.

ಯುನೈಟೆಡ್ ಸ್ಪಿರೀಟ್ಸ್
 

ಯುನೈಟೆಡ್ ಸ್ಪಿರೀಟ್ಸ್

2013 ರಲ್ಲಿ 6,500 ಕೋಟಿ ರು ನೀಡಿದ ಡಿಯಾಜಿಯೋ ಸಂಸ್ಥೆ, ಯುನೈಟೆಡ್ ಸ್ಪಿರೀಟ್ಸ್ ನಲ್ಲಿ ಶೇ 27 ರಷ್ಟು ಪಾಲು ಹೊಂದಿತು. 2015 ರಲ್ಲಿ ಮಲ್ಯ ಅವರಿಗೆ ಬೋರ್ಡ್ ನಿಂದ ರಾಜೀನಾಮೆ ನೀಡಿ ಹೊರಹೋಗುವಂತೆ ಒತ್ತಡ ಹೇರಲಾಯಿತು.
2016 : ಮಲ್ಯ ಚೇರ್ಮನ್ ಹುದ್ದೆಯಿಂದ ಕೆಳಗಿಳಿದು, 75 ಮಿಲಿಯನ್ ಡಾಲರ್ ಮೊತ್ತ ಪಡೆದು ವಿದೇಶಕ್ಕೆ ಹಾರಿದರು.

ಯುನೈಟೆಡ್ ಬ್ರೂವರೀಸ್

ಯುನೈಟೆಡ್ ಬ್ರೂವರೀಸ್

2009 ರಲ್ಲಿ ಸ್ಕಾಟಿಶ್ ಅಂಡ್ ನ್ಯೂಕ್ಯಾಸಲ್ ಖರೀದಿಸಿದ್ದ ಹೈನೆಕೆನ್(Heineken) ಎನ್ ವಿ, ಯುಬಿ ಸಮೂಹದ ಪ್ರಚಾರಕ ಸಂಸ್ಥೆಯಾಗಿ ಮಾರ್ಪಟ್ಟಿತ್ತು. ನಂತರ ಯುನೈಟೆಡ್ ಬ್ರೂವರೀಸ್ ನ ಷೇರುಗಳನ್ನು ಹಂತ ಹಂತವಾಗಿ ಖರೀದಿಸುತ್ತಾ 2015 ರ ವೇಳೆಗೆ ಶೇ 42 ರಷ್ಟು ಪಾಲು ಪಡೆದು ಪ್ರಭುತ್ವ ಸ್ಥಾಪಿಸಿಕೊಂಡಿತು.

ಯುಬಿ ಇಂಜಿನಿಯರಿಂಗ್

ಯುಬಿ ಇಂಜಿನಿಯರಿಂಗ್

ಯುನೈಟೆಡ್ ಬ್ರೂವರೀಸ್ ಸೇರಿದ ಯುಬಿ ಇಂಜಿನಿಯರಿಂಗ್ ಲಿಮಿಟೆಡ್ ಆರಂಭದಿಂದಲೂ ನಷ್ಟದಲ್ಲೇ ಸಾಗಿದ ಕಂಪನಿ. 2014-15 ರಲ್ಲಿ 161 ಕೋಟಿ ರು ನಷ್ಟ ಅನುಭವಿಸಿತ್ತು. ಆದರೂ ಷೇರು ಪೇಟೆಯ ಪಟ್ಟಿಯಲ್ಲಿ ಹೆಸರು ಉಳಿಸಿಕೊಂಡಿದೆ.

ಮೆಕ್ಡೊವೆಲ್ ಹೋಲ್ಡಿಂಗ್ಸ್

ಮೆಕ್ಡೊವೆಲ್ ಹೋಲ್ಡಿಂಗ್ಸ್

ಯುನೈಟೆಡ್ ಸ್ಪಿರೀಟ್ಸ್ ಲಿಮಿಟೆಡ್ ಎಂದು ಈಗ ಕರೆಯಲ್ಪಡುವ ಸಂಸ್ಥೆ ಮುಂಚೆ ಮೆಕ್ ಡೊವೆಲ್ ಹೋಲ್ಡಿಂಗ್ಸ್ ಲಿಮಿಟೆಡ್ ಆಗಿತ್ತು. 2005 ಏಪ್ರಿಲ್ 1 ರ ನಂತರ ಬಾಂಬೆ ಹಾಗೂ ಕರ್ನಾಟಕ ಹೈಕೋರ್ಟ್ ಆದೇಶದಂತೆ ಮೂಲ ಕಂಪನಿ ಜತೆ ವಿಲೀನಗೊಳಿಸಲಾಯಿತು.

English summary

The Fate Of 6 Companies That Vijay Mallya Once Owned

King of good times or king of bad times, he remains at the centre of jokes and in the news. It is said that he flew to London, while the media claims he is absconding, he claims otherwise. There is around Rs 9000 crore debt from the tops banks, which he has failed to pay even after frequent reminders. Here are 6 companies which were once owned by him
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X