For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ಕಾರ್ಡ್ ಸಾಲ: ಚಿಂತಿಸಬೇಕಾದ ವಿಷಯವೇ!

|

ಕ್ರೆಡಿಟ್ ಕಾರ್ಡ್ ಮೇಲಿನ ಸಾಲ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ವಿವಿಧ ಬ್ಯಾಂಕ್ ಗಳು ನೀಡಿದ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಖರೀದಿ ಮಾಡುತ್ತಿರುವವರ ಸಂಖ್ಯೆ ಲೆಕ್ಕಕ್ಕೆ ಸಿಗದ ರೀತಿಯಲ್ಲಿ ಹೆಚ್ಚಾಗುತ್ತಿದೆ.

 

ಆದರೆ ನಿಜವಾದ ಪ್ರಶ್ನೆ ಇರುವುದು, ಈ ಸಾಲ ನಮ್ಮ ಆರ್ಥಿಕ ವ್ಯವಸ್ಥೆ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಆಧಾರದ ಮೇಲೆ.

 

ಹೌದು ಈ ವಿಚಾರವನ್ನು ಯಾಕೆ ನಾವೆಲ್ಲ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಆರ್ಥಿಕ ಸಲಹೆಗಾರರಾದ ಡಾ. ಸೌಮ್ಯ ಕಾಂತಿ ಘೋಷ್ ರಾಜ್ಯಸಭಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಬಿಚ್ಚಿದ್ದಾರೆ.[ಕ್ರೆಡಿಟ್‌ ಕಾರ್ಡ್‌ದಾರ ಸಾವನ್ನಪ್ಪಿದರೆ ಬಾಕಿ ಯಾರು ನೀಡಬೇಕು?]

ಕ್ರೆಡಿಟ್ ಕಾರ್ಡ್ ಸಾಲ: ಚಿಂತಿಸಬೇಕಾದ ವಿಷಯವೇ!

ಕಳೆದ 10 ವರ್ಷಗಳ ಪರ್ಸನಲ್ ಲೋನ್ ಮತ್ತು ಕ್ರೆಡಿಟ್ ಕಾರ್ಡ್ ಮೇಲಿನ ಸಾಲದ ಆಧಾರದಲ್ಲಿ ವಿವರಗಳನ್ನು ಹೇಳಿದ್ದು ಈ ಕೆಳಗಿನ ಅಂಶಗಳನ್ನು ಉಲ್ಲೇಖ ಮಾಡಿದ್ದಾರೆ.

ಕೆಳಗಿನ ಅಂಶಗಳನ್ನು ಗಮನಿಸಿ
* ಡಿಪಾಸಿಟ್ ಮತ್ತು ಕ್ರೆಡಿಟ್ ಕಾರ್ಡ್ ನಡುವಿನ ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳಬೇಕು. ಕಳೆದ ವರ್ಷ ಕಮರ್ಷಿಯಲ್ ಬ್ಯಾಂಕ್ ಗಳ ಡಿಪಾಸಿಟ್ ಬೆಳವಣಿಗೆ 53 ವರ್ಷಗಳಿಗಿಂತ ಕೆಳಕ್ಕೆ ಬಂದಿತ್ತು. ಶೇ, 9.9ಕ್ಕೆ ಇಳಿದಿತ್ತು. ಆದರೆ ನಂತರ ಸುಧಾರಿಸಿಕೊಂಡಿದ್ದು ಶೇ. 11 ಕ್ಕೆ ಏರಿತು.

* ಪರ್ಸನಲ್ ಲೋನ್ ಆಧಾರದ ಮೇಲೆ ಇಂಕ್ರಿಮೆಂಟಲ್ ಲೆಂಡಿಂಗ್ ಗ್ರೌಥ್ ಸಹ ಇಳಿಕೆ ಕಂಡಿತು. ಆದರೆ ಕ್ರೆಡಿಟ್ ಕಾರ್ಡ್ ಲೋನ್ ಏರಿಕೆಯ ಹಾದಿಯಲ್ಲಿ ಸಾಗಿತು.[ಕ್ರೆಡಿಟ್ ಕಾರ್ಡ್ ಇದ್ದರೆ ಸಿಗುವ 6 ಲಾಭಗಳು ಯಾವವು?]

*ಕಳದ ಒಂದು ವರ್ಷದ ಅವಧಿಯಲ್ಲಿ ಕ್ರೆಡಿಟ್ ಕಾರ್ಡ್ ಮೇಲಿನ ಸಾಲದ ಪ್ರಮಾಣ ಬರೋಬ್ಬರಿ ಶೇ. 15.5 ರಷ್ಟು ಏರಿಕೆಯನ್ನು ದಾಖಲಿಸಿತು.

* ಗೃಹ ಸಾಲ ಪಡೆದುಕೊಳ್ಳುವ ಸಂದರ್ಭ ಎದುರಾದಾಗ ಕ್ರೆಡಿಟ್ ಕಾರ್ಡ್ ಮೇಲಿನ ಸಾಲ ಪಡೆದುಕೊಂಡು ಆರ್ಥಿಕ ವ್ಯವಸ್ಥೆ ನಿಭಾಯಿಸಿದ ಉದಾಹರಣೆಗಳು ಇವೆ.

ಈ ಎಲ್ಲ ಅಂಶಗಳನ್ನು ಗಮನಿಸಿದರೆ ಜನರು ಸುಲಭವಾಗಿ ಸಿಗುವ ಕ್ರೆಡಿಟ್ ಕಾರ್ಡ್ ಸಾಲದ ಮೊರೆ ಹೋಗುತ್ತಿರುವುದು ಕಂಡುಬರುತ್ತಿದೆ. ನಮ್ಮ ಹಣಕಾಸು ವ್ಯವಸ್ಥೆಯನ್ನು ಇದು ಬುಡಮೇಲು ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಗೊತ್ತಿಲ್ಲದೆ ಸಾಲ ಮಾಡಿ ಬಿಡುವ ನಾವು ಆಮೇಲೆ ಅಧಿಕ ಬಡ್ಡಿ ನೀಡಲಾಗದೇ ಒದ್ದಾಡುತ್ತೇವೆ. ಇದೆಲ್ಲದಕ್ಕೆ ಉತ್ತರ ಕಂಡುಕೊಳ್ಳುವ ಹೊತ್ತಿಗೆ ನಮ್ಮ ಹಣಕಾಸು ಸ್ಥಿತಿ ಬಿಗಡಾಯಿಸಿ ಹೋಗಿರುತ್ತದೆ.(ಗುಡ್ ರಿಟರ್ನ್ಸ್.ಇನ್)

English summary

India's Rising Credit Card Debt Should Worry You

The rise in credit card outstandings in itself is not so much of a worry as much as two accompanying factors. First, industrial credit– or loans made to businesses or corporations – is not keeping pace and history shows that it usually comes ahead of personal credit growth. Moreover, debit card spends, which often keep pace – suggesting increasing consumer spending propensity–are actually declining.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X