For Quick Alerts
ALLOW NOTIFICATIONS  
For Daily Alerts

ಷೇರುಮಾರುಕಟ್ಟೆಗೆ ಚೈತನ್ಯ, 2 ದಿನದಲ್ಲಿ ಸಾವಿರ ಅಂಕ ಏರಿಕೆ

By Madhusoodhan
|

ಮುಂಬೈ, ಮೇ, 26: ಕುಸಿತದ ಹಾದಿಯಲ್ಲಿ ಸಾಗಿ ಬಿದ್ದುಹೋಗಿದ್ದ ಷೇರು ಮಾರುಕಟ್ಟೆಗೆ ಇದೀಗ ಮತ್ತೆ ಚೈತನ್ಯ ಬಂದಿದೆ. ಬುಧವಾರ ಮತ್ತು ಗುರುವಾರ ಹೂಡಿಕೆದಾರರ ಪಾಲಿಗೆ ಶುಭದಿನಗಳಾಗಿ ಪರಿಣಮಿಸಿದೆ.

 

ಬುಧವಾರ 576 ಅಂಕಗಳ ಏರಿಕೆ ಕಂಡಿದ್ದ ಮಾರುಕಟ್ಟೆ ಗುರುವಾರ 485 ಅಂಕ ಏರಿಕೆ ದಾಖಲಿಸಿದೆ. 2105 ರ ಮಾರ್ಚ್ ನಂತರ ಮಾರುಕಟ್ಟೆ ಮತ್ತೆ ಏರಿಕೆಯ ಹಾದಿಗೆ ಮರಳಿದೆ.[2016ರ ಷೇರು ಮಾರುಕಟ್ಟೆ ರಜಾ ದಿನಗಳ ಪಟ್ಟಿ]

 
ಷೇರುಮಾರುಕಟ್ಟೆಗೆ ಚೈತನ್ಯ, 2 ದಿನದಲ್ಲಿ ಸಾವಿರ ಅಂಕ ಏರಿಕೆ

ಗುರುವಾರದ ಅಂತ್ಯಕ್ಕೆ ಸೆನ್ಸೆಕ್ಸ್ 26,366 ಅಂಕಗಳಿಗೆ ಕೊನೆಯಾದರೆ, ತಿಂಗಳುಗಳ ನಂತರ ನಿಫ್ಟಿ 8 ಸಾವಿರವನ್ನು ಕ್ರಾಸ್ ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ. 4 ಏರಿಕೆಯನ್ನು ದಾಖಲಿಸಿದೆ. ಆದರೆ ಫಾರ್ಮಾ ಷೇರುಗಳು ನಿಗದಿತ ಪ್ರಮಾಣದ ಏರಿಕೆ ದಾಖಲಿಸಿಲ್ಲ.[ಅತಿ ಕಡಿಮೆ ದಲ್ಲಾಳಿ ವೆಚ್ಚ ಪಡೆಯುವ ಕಂಪನಿಗಳಿವು]

ಟಾಟಾ ಸ್ಟೀಲ್, ರಿಲಾಯನ್ಸ್, ಕೋಲ್ ಇಂಡಿಯಾ ಹಿನ್ನಡೆ ಕಂಡಿವೆ. ಖಾಸಗಿ ವಲಯದ ಬ್ಯಾಂಕ್ ಗಳು ಹೆಚ್ಚಿನ ಸಾಧನೆ ಮಾಡಿವೆ. ಕರ್ಣಾಟಕ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಉತ್ತಮ ಗಳಿಕೆ ದಾಖಲಿಸಿವೆ.

ಟೆಕ್ ಮಹೀಂದ್ರಾ ಸಹ ಉತ್ತಮ ಲಾಭ ಕಂಡಿದೆ. ಯುರೋಪ್ ಮತ್ತು ಜರ್ಮನಿ ಮಾರುಕಟ್ಟೆಯಲ್ಲಿನ ಏರಿಕೆ ಮತ್ತು ನರೇಂದ್ರ ಮೋದಿ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿರುವ ಸಂಭ್ರಮ ದಿಢೀರ್ ಏರಿಕೆಗೆ ಕಾರಣವಾಗಿದೆ.

English summary

Positive global cues lifts Mumbai share market

Benchmark indices surged in trade for a second consecutive day, gaining more than 1000 points in 2-trading sessions. Hopes of an economic recovery, better than expected monsoon and solid global cues, pushed the benchmark indices higher. The Sensex ended the day higher by 485 points, led by a spectacular rally in Larsen and Toubro. The company reported a solid set of numbers for the quarter ending March 31, 2016, with profits and revenues mostly beating expectations. The stock ended the day higher by 13 per cent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X