For Quick Alerts
ALLOW NOTIFICATIONS  
For Daily Alerts

ಮೊದಲ ತ್ರೈಮಾಸಿಕ: ಲಾಭ-ನಷ್ಟದ ಲೆಕ್ಕಾಚಾರ

By Siddu
|

ಈಗಾಗಲೇ ಅನೇಕ ಕಂಪನಿಗಳು ತಮ್ಮ ಮೊದಲ ತ್ರೈಮಾಸಿಕದ ಫಲಿತಾಂಶವನ್ನು ಬಿಡುಗಡೆಗೊಳಿಸಿವೆ. ಕೆಲವು ಲಾಭ ಗಳಿಸಿದ್ದರೆ ಮತ್ತೆ ಕೆಲವು ನಷ್ಟ ಅನುಭವಿಸಿವೆ.

ಎಸ್ಬಿಎಂ, ಮಾರುತಿ ಸುಜುಕಿ, ಐಡಿಎಫ್ಸಿ, ಎಸ್ಬಿಟಿ, ವಿ-ಗಾರ್ಡ್ ಕಂಪನಿಗಳು ಮೊದಲ ತ್ರೈಮಾಸಿಕದ ಫಲಿತಾಂಶ ಬಿಡುಗಡೆ ಮಾಡಿದ್ದು ಅವುಗಳ ವಿವರ ಇಲ್ಲಿದೆ. (ಷೇರುಗಳು)

ಎಸ್ಬಿಎಂ(SBM)

ಎಸ್ಬಿಎಂ(SBM)

* ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ರೂ. 472 ಕೋಟಿ ನಷ್ಟ ಅನುಭವಿಸಿದೆ.
* ವಸೂಲಿಯಾಗದ ಸಾಲದ ಪ್ರಮಾಣ(ಎನ್ ಪಿಎ) ಹೆಚ್ಚಾಗಿದೆ. ಜತೆಗೆ ಭವಿಷ್ಯದಲ್ಲಿನ ನಷ್ಟ ಭರಿಸಲು ತೆಗೆದಿರಿಸಿರುವ ರೂ. 132 ಕೋಟಿಗಳಿಂದ ರೂ. 1036 ಕೋಟಿಗಳಿಗೆ ಅಂದರೆ ಎಂಟು ಪಟ್ಟು ಹೆಚ್ಚಾಗಿ ನಷ್ಟ ಸಂಭವಿಸಿದೆ.
* ಹಿಂದಿನ ವರ್ಷದ ಇದೇ ಅವಧಿಯಲ್ಲಿ ರೂ. 94 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿತ್ತು.
* ಸರಾಸರಿ ಎನ್ ಪಿಎ ರೂ. 2214 ಕೋಟಿಗಳಿಂದ ರೂ. 4323 ಕೋಟಿಗಳಿಗೆ ಏರಿಕೆ ಕಂಡಿವೆ. ಒಟ್ಟು ವರಮಾನ ರೂ. ೧೯೫೨ ಕೋಟಿಗಳಿಂದ ರೂ. 1988 ಕೋಟಿಗಳಿಗೆ ಅಲ್ಪ ಏರಿಕೆ ಕಂಡಿದೆ.

ಮಾರುತಿ ಸುಜುಕಿ

ಮಾರುತಿ ಸುಜುಕಿ

* ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ಇಂಡಿಯಾದ ನಿವ್ವಳ ಲಾಭವು ಶೇ. 23ರಷ್ಟು ಹೆಚ್ಚಾಗಿದ್ದು, ರೂ. 1486 ಕೋಟಿಗಳಿಗೆ ತಲುಪಿದೆ.
* ಹಿಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂ. 1208 ಕೋಟಿ ನಿವ್ವಳ ಲಾಭ ಗಳಿಸಿತ್ತು. ಕಚ್ಚಾ ಸರಕಿನ ವೆಚ್ಚ ತಗ್ಗಿರುವುದು ಮತ್ತು ಕಾರ್ಯಾಚರಣೆ ಹೊರತಾದ ವರಮಾನದಲ್ಲಿ ಏರಿಕೆ ಕಂಡಿದೆ.
* ನಿವ್ವಳ ಮಾರಾಟವು ಶೇ. 12ರಷ್ಟು ಹೆಚ್ಚಾಗಿದ್ದು, ರೂ. 13078 ಕೋಟಿಗಳಿಂದ ರೂ. 14654 ಕೋಟಿಗಳಿಗೆ ಏರಿಕೆ ಕಂಡಿದೆ.

ಐಡಿಎಫ್ಸಿ(IDFC)

ಐಡಿಎಫ್ಸಿ(IDFC)

* ಖಾಸಗಿ ವಲಯದ ಐಡಿಎಫ್ಸಿ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 60ರಷ್ಟು ನಿವ್ವಳ ಲಾಭ ಗಳಿಸಿದ್ದು, ರೂ. 265 ಕೋಟಿಗಳಿಗೆ ತಲುಪಿದೆ.
* ನಿವ್ವಳ ಬಡ್ಡಿ ಆದಾಯ, ಬಡ್ಡಿ ಗಳಿಕೆಯ ವ್ಯತ್ಯಾಸದಲ್ಲಿ ಮತ್ತು ವಿಸ್ತಾರದಲ್ಲಿ ಶೇ. 25ರಷ್ಟು ಏರಿಕೆಯಾಗಿದ್ದು, 515 ಕೋಟಿಗಳಿಗೆ ತಲುಪಿದೆ.
* ಹಿಂದಿನ ಫಲಿತಾಂಶಕ್ಕೆ ಹೊಲಿಸಿದರೆ ನಿವ್ವಳ ಲಾಭ ಶೇ. 2.1ರಿಂದ ಶೇ. 2.4ಕ್ಕೆ ಹೆಚ್ಚಳ ಕಂಡಿದೆ.

ಎಸ್ಬಿಟಿ(SBT)

ಎಸ್ಬಿಟಿ(SBT)

* ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಖಾಸಗಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಟ್ರಾವನ್ಕೊರ್ ರೂ. 742.89 ನಷ್ಟ ಅನುಭವಿಸಿದೆ.
* ಕಳೆದ ಹಣಕಾಸು ವರ್ಷದಲ್ಲಿ ಇದರ ನಿವ್ವಳ ಲಾಭ ರೂ. 81.32 ಕೋಟಿಗಳಷ್ಟಿತ್ತು.

* ವಸೂಲಿಯಾಗದ ಸಾಲದ ಪ್ರಮಾಣ(ಎನ್ ಪಿಎ) ರೂ. 1170 ಕೋಟಿ ಇದ್ದು, ಜತೆಗೆ ಭವಿಷ್ಯದಲ್ಲಿನ ನಷ್ಟ ಭರಿಸಲು ತೆಗೆದಿರಿಸಿರುವ ಹೆಚ್ಚುವರಿ ಮೊತ್ತದಿಂದಾಗಿ ಹೆಚ್ಚಾಗಿ ನಷ್ಟ ಸಂಭವಿಸಿದೆ.

ವಿ-ಗಾರ್ಡ್

ವಿ-ಗಾರ್ಡ್

* ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 70.03ರಷ್ಟು ನಿವ್ವಳ ಲಾಭ ಗಳಿಸಿದ್ದು, ರೂ. 42.78 ಕೋಟಿಗಳಿಗೆ ತಲುಪಿದೆ.
* ಕಂಪನಿ ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 25.16 ಕೋಟಿ ರೂ.ಗಳ ನಿವ್ವಳ ಲಾಭಗಳಿಸಿತ್ತು.
* ಕಂಪನಿಯ ತಲಾ ಒಂದು ಷೇರು ಶೇ. 5.05 ಅಂದರೆ ರೂ. 1563ಕ್ಕೆ ಬಿಎಸ್ಇ ಯಲ್ಲಿ ಮಾರಾಟವಾಗುತ್ತಿದ್ದವು.

 </a></strong></strong><a href=infosys result" title=" infosys result" /> infosys result

English summary

Q1 results: profit -loss calculations

sbm, Maruti Suzuki, idfc, sbt, V-Guard companies has released their first quarterresults. here given their their details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X