For Quick Alerts
ALLOW NOTIFICATIONS  
For Daily Alerts

ಎಸ್ಬಿಐ ವಿಲೀನ: ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು

By Siddu Thorat
|

ದೇಶದಲ್ಲಿ ಚರ್ಚೆ ಆಗುತ್ತಿರುವ ಪ್ರಮುಖ ಸುದ್ದಿಗಳಲ್ಲಿ ಎಸ್ಬಿಐ ವಿಲೀನ ಮೇಲ್ಪಂಕ್ತಿಯಲ್ಲಿದೆ.

ಕೇಂದ್ರ ಸರ್ಕಾರದ ಜನವಿರೋಧಿ ಬ್ಯಾಂಕಿಂಗ್ ನೀತಿ ಖಂಡಿಸಿ ಸರ್ಕಾರಿ ಮತ್ತು ಖಾಸಗಿ ವಲಯದ ಹತ್ತು ಲಕ್ಷಕ್ಕೂ ಹೆಚ್ಚು ಬ್ಯಾಂಕ್ ನೌಕರರು (ಯುಎಫ್ ಬಿಯು ಅಡಿಯಲ್ಲಿ ಬರುವ 9 ಬ್ಯಾಂಕ್ ನೌಕರರ ಸಂಘಟನೆಗಳು) ಸೇರಿದಂತೆ ದೇಶದಾದ್ಯಂತ ಹಲವು ಬಾರಿ ಮುಷ್ಕರ ನಡೆಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಸೇರಿದಂತೆ ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕುಗಳ ಖಾಸಗೀಕರಣ ಮತ್ತು ವಿಲೀನ ಕೈಬಿಡಬೇಕು. ಬ್ಯಾಂಕಿಂಗ್ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಬಾರದು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ.

ಪ್ರತಿಯೊಬ್ಬರಲ್ಲೂ ಎಸ್ಬಿಐ ವಿಲೀನ ಬೇಕೆ/ಬೇಡವೆ? ಇದರ ಲಾಭ/ನಷ್ಟಗಳೇನು? ಇತ್ಯಾದಿ ಸಂಗತಿಗಳ ಬಗ್ಗೆ ತುಂಬಾ ಗೊಂದಲ ಇದೆ. ಇದಕ್ಕೆ ಸಂಬಂಧಿಸಿದ ಚಿತ್ರಣ ಇಲ್ಲಿ ನೀಡಲಾಗಿದೆ.

ಎಸ್ಬಿಐ ಚರಿತ್ರೆ

ಎಸ್ಬಿಐ ಚರಿತ್ರೆ

ಭಾರತೀಯ ಸ್ಟೇಟ್ ಬ್ಯಾಂಕ್ ಭಾರತದ ರಾಷ್ಟ್ರೀಕೃತ ಮತ್ತು ಖಾಸಗಿ ವಲಯದ ಬ್ಯಾಂಕಗಳ ಪೈಕಿ ಅತಿದೊಡ್ಡ ಬ್ಯಾಂಕ್ ಆಗಿದೆ. ಎಸ್ಬಿಐ ಹಣಕಾಸು ಸೇವೆ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ.
1806ರಲ್ಲಿ ಪ್ರಾರಂಭವಾದ ಈ ಬ್ಯಾಂಕ್ ನ್ನು ಇಂಪಿರಿಯಲ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಮುಂದೆ 1955ರಲ್ಲಿ ಭಾರತ ಸರ್ಕಾರ ಇದನ್ನು ರಾಷ್ಟ್ರೀಕೃತ ಬ್ಯಾಂಕ್ ಎಂದು ಘೋಷಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧೀನಕ್ಕೆ ಒಳಪಡಿಸಿತು. ದೇಶದೆಲ್ಲೆಡೆ ನೂರಾರು ಶಾಖೆಗಳನ್ನು ತೆರೆದಿರುವ ಎಸ್ಬಿಐ ತನ್ನ ವಿಶ್ವಾಸದ ಪ್ರತೀಕವಾಗಿ ಜಗತ್ತಿನ 32 ವಿವಿಧ ರಾಷ್ಟ್ರಗಳಲ್ಲಿ 92 ಶಾಖೆಗಳನ್ನು ತೆರೆದಿದೆ.
ಇದು ಬ್ಯಾಂಕಿಂಗ್, ವಿಮೆ, ಬಂಡವಾಳ ಮಾರುಕಟ್ಟೆ ಮತ್ತು ಕೈಗಾರಿಕೆಗಳೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸುವ ಉದ್ಯಮವಾಗಿದೆ.
ಸಾಲ, ಕ್ರೆಡಿಟ್ ಕಾರ್ಡ್, ಉಳಿತಾಯ, ವಾಹನ ಹೂಡಿಕೆ, ಎಸ್ಬಿಐ ಜೀವ ವಿಮೆ ಇದರ ಉತ್ಪನ್ನ ಕ್ಷೇತ್ರವಾಗಿದೆ.

ಎಸ್ಬಿಐ ವಿಲೀನ

ಎಸ್ಬಿಐ ವಿಲೀನ

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಸೇರಿದಂತೆ ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕುಗಳ ವಿಲೀನ ಮಾಡುವುದು ಎಸ್ಬಿಐ ಉದ್ದೇಶವಾಗಿದೆ. ಎಸ್ಬಿಐ ಮತ್ತು ಇದರ ಸ್ವಾಮ್ಯದ ಬ್ಯಾಂಕುಗಳು ವಿಲೀನಗೊಳ್ಳುವುದರಿಂದ ಎಸ್ಬಿಐ ಜಗತ್ತಿನ ಬೃಹತ್ ಬ್ಯಾಂಕಾಗಿ ಹೊರಹೊಮ್ಮಲಿದೆ. ಜತೆಗೆ ಬ್ಯಾಂಕಿಂಗ್ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಬೇಕೆಂಬುದು ಇದರ ಆಶಯ. ಶೇ. 4ರಷ್ಟು ಎಸ್ಬಿಐ ಷೇರುಗಳು ಹೆಚ್ಚಳಗೊಳ್ಳಲಿವೆ. ಈಗಾಗಲೇ ಇದರ ಸ್ವಾಮ್ಯದಲ್ಲಿರುವ ಐದು ಬ್ಯಾಂಕುಗಳು ವಿಲೀನಗೊಳ್ಳಲು ತಯಾರಿವೆ.

ಸ್ವಾಮ್ಯದಲ್ಲಿರುವ ಐದು ಬ್ಯಾಂಕುಗಳು

ಸ್ವಾಮ್ಯದಲ್ಲಿರುವ ಐದು ಬ್ಯಾಂಕುಗಳು

1. ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ
2. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
3.. ಸ್ಟೇಟ್ ಬ್ಯಾಂಕ್ ಆಫ್ ಟ್ರಾವಾನ್ಕೊರ್
4..ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ
5..ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್
ಈ ಎಲ್ಲಾ ಬ್ಯಾಂಕುಗಳು ವಿಲೀನಗೊಳ್ಳುವುದರಿಂದ ಎಸ್ಬಿಐ ಗೆ ಜಾಗತಿಕ ಮನ್ನಣೆ ಸಿಗಲಿದೆ ಮತ್ತು ಜಗತ್ತಿನ ಮೊದಲ 50 ಬ್ಯಾಂಕುಗಳ ಪಟ್ಟಿಯಲ್ಲಿ ಎಸ್ಬಿಐ ಸ್ಥಾನ ಪಡೆಯಲಿದೆ ಎಂದು ಎಸ್ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.

ಭಾರತೀಯ ಮಹಿಳಾ ಬ್ಯಾಂಕ್

ಭಾರತೀಯ ಮಹಿಳಾ ಬ್ಯಾಂಕ್

ಈ ಮೇಲಿನ ಐದು ಬ್ಯಾಂಕುಗಳೊಂದಿಗೆ ದೇಶದ ಮೊದಲ ಮಹಿಳಾ ಬ್ಯಾಂಕ್ ಎನಿಸಿರುವ ಭಾರತೀಯ ಮಹಿಳಾ ಬ್ಯಾಂಕ್ ಕೂಡ ಎಸ್ಬಿಐ ನೊಂದಿಗೆ ವಿಲೀನಗೊಳ್ಳುತ್ತಿದೆ. ಹೀಗಾಗಿ ಮಹಿಳಾ ಕ್ಷೇತ್ರದ ಬಹುದೊಡ್ಡ ಬ್ಯಾಂಕು ಸಹ ಸೇರ್ಪಡೆಯಾದಂತೆ ಆಗುತ್ತದೆ.

ವಿಲೀನದ ಪ್ರಯೋಜನಗಳು

ವಿಲೀನದ ಪ್ರಯೋಜನಗಳು

ಬ್ಯಾಂಕುಗಳನ್ನು ವಿಲೀನ ಮಾಡುವುದರಿಂದ ಎಸ್ಬಿಐ ಜಗತ್ತಿನ ಮೊದಲ 50 ಬ್ಯಾಂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ. ಇದು ಭಾರತೀಯರಲ್ಲಿ ಹೆಮ್ಮೆ ಮೂಡಿಸುವ ಸಂಗತಿ. ಖಾಸಗಿ ವಲಯಕ್ಕೆ ಉತ್ತಮ ಪೈಪೋಟಿ ಕೊಡಬಲ್ಲದು ಅಲ್ಲದೆ ತನ್ನ ಶಾಖೆಗಳಲ್ಲಿನ ಮಾನವ ಸಂಪನ್ಮೂಲವನ್ನು ಅಭಿವೃದ್ಧಿ ಪಡಿಸಲು ಸಾಧ್ಯ. ಸಾಲ ನೀಡುವಿಕೆ, ಠೇವಣಿಗಳ ಮೇಲೆ ಉತ್ತಮ ಲಾಭ ಸಿಗಬಹುದು. ಉತ್ತಮ ಸೇವೆ ನೀಡಲು, ತೊಡಕುಗಳನ್ನು ಹೋಗಲಾಡಿಸಲು ಸಾಧ್ಯ. ತ್ರೈಮಾಸಿಕ ಮತ್ತು ವಾರ್ಷಿಕ ಆದಾಯವನ್ನು ನಿರಂತರವಾಗಿ ಹೆಚ್ಚಿಸಬಹುದು. ಒಟ್ಟಿನಲ್ಲಿ ಜಾಗತಿಕ ವೇದಿಕೆಯಲ್ಲಿ ದೈತ್ಯ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಯಾವುದೇ ಸಂಶಯವಿಲ್ಲ.

ವಿಲೀನದ ಅನಾನುಕೂಲಗಳು

ವಿಲೀನದ ಅನಾನುಕೂಲಗಳು

ವೆಚ್ಚವನ್ನು ಕಡಿಮೆ ಮಾಡುವುದರ ಮುಖಾಂತರ ಅಥವಾ ಆದಾಯ ಹೆಚ್ಚು ಮಾಡುವುದರ ಮೂಲಕ ಮೌಲ್ಯವನ್ನು ಹೆಚ್ಚಿಸಬಲ್ಲವು.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ಖಾಸಗಿ ಬಂಡವಾಳ ಪ್ರಮಾಣ ಕಡಿಮೆಯಾಗಬಹುದು.
ಬ್ಯಾಂಕಿಂಗ್ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಾಗಬಹುದು. ವಿಲೀನಗೊಳ್ಳುವ ಬ್ಯಾಂಕುಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಲಿವೆ. ಎಸ್ಬಿಐ ಸುಪ್ರಿಂ ಪವರ್ ಅಗುವುದರಿಂದ ಅದರ ಅಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ವಿಲೀನಗೊಂಡ ಬ್ಯಾಂಕುಗಳು ಸ್ವತಂತ್ರವಾಗಿ ನಿರ್ಣಯ/ನಿರ್ಧಾರ ತೆಗೆದುಕೊಳ್ಳವುದು ಅಸಾಧ್ಯ ಆಗಬಹುದು.

ಜಾಗತಿಕ ಬ್ಯಾಂಕಾಗಿ ಹೊರಹೊಮ್ಮಲಿದೆ

ಜಾಗತಿಕ ಬ್ಯಾಂಕಾಗಿ ಹೊರಹೊಮ್ಮಲಿದೆ

ಒಂದು ವೇಳೆ ಬ್ಯಾಂಕುಗಳ ವಿಲೀನ ಯಶಸ್ವಿಯಾದರೆ ಎಸ್ಬಿಐ ಬ್ಯಾಂಕ್ ಜಗತ್ತಿನಲ್ಲಿ ಪ್ರಸಿದ್ದ ಬ್ಯಾಂಕ್ ಆಗಿ ಗುರುತಿಸಲಿದೆ. ಅಲ್ಲದೆ ಜಗತ್ತಿನ ಮೊದಲ 50 ಬ್ಯಾಂಕುಗಳ ಪಟ್ಟಿಯಲ್ಲಿ ಸ್ಥಾನಮಾನ ಪಡೆಯಲಿದೆ. ಒಟ್ಟಿನಲ್ಲಿ ಭಾರತದ ಒಂದು ಬ್ಯಾಂಕಿಗೆ ಜಾಗತಿಕ ಸ್ಥಾನ ಮತ್ತು ಮನ್ನಣೆ ಸಿಗಲಿದೆ.

ಬಂಡವಾಳ ಹೂಡಿಕೆ

ಬಂಡವಾಳ ಹೂಡಿಕೆ

ಬ್ಯಾಂಕಿಂಗ್ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಲಿದೆ. ಎಸ್ಬಿಐ ಹೂಡಿಕೆ ಪ್ರಮಾಣದಲ್ಲೂ ಗಣನೀಯ ಏರಿಕೆ ಆಗಲಿದೆ. ಬಂಡವಾಳ ಹೂಡಿಕೆ ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸು ಶಕ್ತಿ ಪಡೆಯಬಲ್ಲದು

Read more about: sbi ಎಸ್‌ಬಿಐ
English summary

Sbi merger process advantage-disadvantage to the public

Apparently under pressure from the government to assimilate six banks almost in one go, State Bank of India will bank on its experience of acquiring State Bank of Saurashtra (in 2008) and State Bank of Indore (in 2010) to push through the exercise.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X