For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ಜಾರಿ ಪರಿಣಾಮ ಮ್ಯೂಚುವಲ್ ಫಂಡ್ ದುಬಾರಿ

By Siddu
|

ದೇಶದಾದ್ಯಂತ ಜಿಎಸ್ಟಿ ಮಸೂದೆ ಜಾರಿ ಬಂದ ನಂತರ ಆಗುವ ಲಾಭ-ನಷ್ಟಗಳ ಬಗ್ಗೆ ಅನೇಕ ಲೆಕ್ಕಾಚಾರಗಳು ನಡೆಯುತ್ತಲೇ ಇವೆ. ಉದ್ಯಮಿಗಳು, ಕಂಪನಿಗಳು ತಜ್ಞರಿಂದ, ಸಲಹೆಗಾರರಿಂದ ಮಾಹಿತಿ ಪಡೆಯುತ್ತಿದ್ದಾರೆ.

ದೇಶದಾದ್ಯಂತ ಏಕರೂಪದ ತೆರಿಗೆ ಜಾರಿ ಬಂದ ನಂತರ ಹೂಡಿಕೆದಾರರು ಮ್ಯೂಚುವಲ್ ಫಂಡ್ ಮೇಲೆ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ಮ್ಯೂಚುವಲ್ ಫಂಡ್ ಗಳು ಜಿಎಸ್ಟಿ ಜಾರಿ ನಂತರ ಶೇ. 3ರಷ್ಟು ತುಟ್ಟಿಯಾಗಲಿವೆ ಎಂದು ಮಾರುಕಟ್ಟೆ ಅಭಿಪ್ರಾಯ ಪಟ್ಟಿದೆ. ಸೇವಾ ತೆರಿಗೆ ಹೊರೆ ಹೆಚ್ಚಲಿರುವುದರಿಂದ ಹೂಡಿಕೆದಾರರು ಮ್ಯೂಚುವಲ್ ಫಂಡ್ ಮೇಲೆ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ಜಿಎಸ್ಟಿ ದರ ಯಾವ ಮಟ್ಟದಲ್ಲಿ ಇರಲಿದೆ ಎಂದು ಕಷ್ಟಕರ ಎಂದೇ ಭಾವಿಸಲಾಗಿದೆ. ಜಿಎಸ್ಟಿ ದರ ಶೇ. 18-22ರ ಮಧ್ಯೆ ನಿಗದಿಯಾಗಬಹುದು ಎಂಬುದು ತಜ್ಞರ ಅಭಿಮತ.

ಜಿಎಸ್ಟಿ ಜಾರಿ ಪರಿಣಾಮ ಮ್ಯೂಚುವಲ್ ಫಂಡ್ ದುಬಾರಿ

ಈಗ ಸೇವಾ ತೆರಿಗೆ ಶೇ. 15ರಷ್ಟಿದ್ದು, ಜಿಎಸ್ಟಿ ಮಸೂದೆ ಅಡಿಯಲ್ಲಿ ಶೇ. 18ರಷ್ಟಾಗಬಹುದು. ಹೀಗಾಗಿ ಹೂಡಿಕೆದಾರರು ಹೆಚ್ಚು ತೆರಿಗೆ ಪಾವತಿಸಬೇಕಾಗಿರುವುದರಿಂದ ಇದು ಜಿಎಸ್ಟಿ ಜಾರಿ ಪರಿಣಾಮ ಮ್ಯೂಚುವಲ್ ಫಂಡ್ ಕ್ಷೇತ್ರದಲ್ಲಿ ಪ್ರತಿಕೂಲ ಪ್ವಭಾವ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದಾಗಿ ಹೂಡಿಕೆದಾರರು ಹೆಚ್ಚುವರಿ ನಿರ್ವಹಣಾ ಶುಲ್ಕ ಪಾವತಿಸಬೇಕಾಗುತ್ತದೆ.

English summary

GST Impact: Mutual fund are expensive

Since the implementation of a uniform tax rate across the country, investors will need to spend more on mutual funds.
Story first published: Friday, August 12, 2016, 12:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X