For Quick Alerts
ALLOW NOTIFICATIONS  
For Daily Alerts

ರಿಲಾಯನ್ಸ್ ಜಿಯೊ ವಿವಾದ: ಟೆಲಿಕಾಂ ಕಾರ್ಯದರ್ಶಿ ಜತೆ ಅಂಬಾನಿ ಮಾತುಕತೆ

By Siddu
|

ರಿಲಾಯನ್ಸ್ ಇಂಡಸ್ಟ್ರಿಸ್ ಚೇರಮನ್ ಮುಖೇಶ್ ಅಂಬಾನಿ ಟೆಲಿಕಾಂ ಕಾರ್ಯದರ್ಶಿ ಜೆಎಸ್ ದೀಪಕ್ ರನ್ನು ಬೇಟಿಯಾಗಿ ತನ್ನ ದೂರಸಂಪರ್ಕ ಉದ್ಯಮ ರಿಲಾಯನ್ಸ್ ಜಿಯೊ ಕುರಿತು ಚರ್ಚೆ ನಡೆಸಿದ್ದಾರೆ ಎಂದು ವರದಿ ಆಗಿದೆ. ಈ ಪ್ರಸಕ್ತ ಬೆಳವಣಿಗೆಯಲ್ಲಿ ಆದ ಚರ್ಚೆಯ ವಿವರ ಇಲ್ಲಿದೆ ನೋಡಿ.

ಟೆಲಿಕಾಂ ಕಂಪನಿಗಳ ದೂರು ಹಿನ್ನೆಲೆ

ಟೆಲಿಕಾಂ ಕಂಪನಿಗಳ ದೂರು ಹಿನ್ನೆಲೆ

ರಿಲಾಯನ್ಸ್ ಜಿಯೊ ಇನ್ಫೊಕಾಂ ಕಂಪನಿ ದೇಶದಾದ್ಯಂತ 1.5 ಮಿಲಿಯನ್ ಗ್ರಾಹಕರಿಗೆ ಪರೀಕ್ಷಾರ್ಥ ಸೋಗಿನಲ್ಲಿ ಮುಕ್ತವಾಗಿ ಕೊಟ್ಟಿರುವ ಎಲ್ಲಾ ರೀತಿಯ ಸಂಪರ್ಕಗಳನ್ನು ಹಿಂಪಡೆಯಲು ತಿಳಿಸುವಂತೆ ದೇಶದ ಉನ್ನತ ಟೆಲಿಕಾಂ ಕಂಪನಿಗಳಾದ ಏರರ್ಟೆಲ್, ಐಡಿಯಾ, ವೋಡಾಪೊನ್ ಇಂಡಿಯಾ ಟೆಲಿಕಾಂ ಇಲಾಖೆಗೆ ಈ ಹಿಂದೆ ದೂರು ಸಲ್ಲಿಸಿದ್ದವು.

ರಿಲಾಯನ್ಸ್ ಜಿಯೊ 4ಜಿ ಸೇವೆ

ರಿಲಾಯನ್ಸ್ ಜಿಯೊ 4ಜಿ ಸೇವೆ

ದೂರು ನೀಡಿದ ಹಿನ್ನೆಲೆಯಲ್ಲಿ ಟೆಲಿಕಾಂ ಕಾರ್ಯದರ್ಶಿಯನ್ನು ಬೇಟಿಯಾಗಿ ದೇಶದಾದ್ಯಂತ 1.5 ಮಿಲಿಯನ್ ಗ್ರಾಹಕರಿಗೆ ಪರೀಕ್ಷಾರ್ಥವಾಗಿ ಒದಗಿಸುತ್ತಿರುವ ರಿಲಾಯನ್ಸ್ ಜಿಯೊ 4ಜಿ ಸೇವೆಯ ಕುರಿತು ಮಾಹಿತಿ ನೀಡಿದರು.

COAI ಮತ್ತು ಜಿಯೊ
 

COAI ಮತ್ತು ಜಿಯೊ

ಸೆಲ್ಯೂಲರ್ ಅಪರೇಟರ್ಸ್ ಅಸೋಸಿಯೇಷನ್ ಮತ್ತು ರಿಲಾಯನ್ಸ್ ಪರಸ್ಪರ ಚರ್ಚೆ ನಡೆಸಿ ಹಿಂದೆ ಆಗಿದ್ದ ಸಮಸ್ಯೆ ಮತ್ತು ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದವು.
ಪರೀಕ್ಷಾರ್ಥವಾಗಿ ನೀಡಿದ್ದ ಸೇವೆಗಳನ್ನು ಮುಂಬರುವ ತಿಂಗಳುಗಳಲ್ಲಿ ಪೂರ್ಣವಾಗಿ ವಾಣಿಜ್ಯಾತ್ಮಕ ಸೇವೆಗಳಿಗೆ ಉನ್ನತೀಕರಿಸಲಾಗುವುದು ಹೇಳಿದೆ.

ಪರವಾನಗಿ ಒಪ್ಪಂದದ ಉಲ್ಲಂಘನೆ

ಪರವಾನಗಿ ಒಪ್ಪಂದದ ಉಲ್ಲಂಘನೆ

ಪ್ರಸ್ತುತ ಇರುವ ಪರವಾನಗಿ ಷರತ್ತಿನ ಪ್ರಕಾರ ಯಾವುದೇ ಪರೀಕ್ಷಾರ್ಥ, ಉಚಿತ ಧ್ವನಿ, ದತ್ತಾಂಶಗಳ ಸೇವೆ ಅಥವಾ ಪ್ರಯೋಗಗಳಿಗಾಗಿ ಅನುಮತಿ ಇರುವುದಿಲ್ಲ. ಆದರೆ ರಿಲಾಯನ್ಸ್ ಜಿಯೊ ಪೂರ್ಣ ಪ್ರಮಾಣದ ಸೇವೆಗಳನ್ನು ಒದಗಿಸುತ್ತಿದೆ ಎಂದು
ಸೆಲ್ಯೂಲರ್ ಅಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಹೇಳಿತ್ತು.

2-3 ಚಂದಾದಾರರು ಸಕ್ರಿಯ

2-3 ಚಂದಾದಾರರು ಸಕ್ರಿಯ

1.5 ಮಿಲಿಯನ್ ಗ್ರಾಹಕರಿಗೆ ಪ್ರಯೋಗ ಹಂತದಲ್ಲಿ ಒದಗಿಸುತ್ತಿರುವ ಸೇವೆಯ ಕುರಿತು ಉದ್ಯಮ ಭಾರಿ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ 2-3 ಮಿಲಿಯನ್ ಚಂದಾದಾರರು ಹೊಸದಾಗಿ ಸಕ್ರಿಯರಾಗಿದ್ದಾರೆಂದು ಆರೋಪಿಸಲಾಗಿದೆ.

ರಿಲಾಯನ್ಸ್ ಜಿಯೊ ಹಿಟ್

ರಿಲಾಯನ್ಸ್ ಜಿಯೊ ಹಿಟ್

ಈಗಾಗಲೇ ಇರುವ ೪ಜಿ ಸೇವೆ ಹಾಗೂ ಇಂಟರ್ ಕನೆಕ್ಷನ್ ಗಳನ್ನು ನಿರ್ವಾಹಕರು ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತಿಲ್ಲ ರಿಲಾಯನ್ಸ್ ಜಿಯೊ ಪ್ರತಿಕ್ರಿಯಿಸಿದೆ.

ಟ್ರಾಯ್ ಗೆ ಜಿಯೊ ಪತ್ರ

ಟ್ರಾಯ್ ಗೆ ಜಿಯೊ ಪತ್ರ

ವಾಣಿಜ್ಯಾತ್ಮಕವಾಗಿ ಈ ಸೇವೆಗಳನ್ನು ಬಿಡುಗಡೆಗೊಳಿಸುವ ಮುನ್ನ 12,727 ೭ ಮೊಬೈಲ್ ಇಂಟರ್ ಕನೆಕ್ಷನ್ ಸೇವೆಗಳು ಮತ್ತು ಕರೆ ಸೇವೆಗಾಗಿ  3068 ಎಸ್ಟಿಡಿ ಪಾಯಿಂಟ್ ಗಳು ಬೇಕು ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ(TRAI) ಜಿಯೊ ತಿಳಿಸಿದೆ.

English summary

Mukesh Ambani Meets Telecom Secretary, Updates On RJio's Plans

eliance Industries Chairman Mukesh Ambani on Friday met Telecom Secretary JS Deepak to discuss rollout plans of his telecom venture Reliance Jio, which has accused incumbent players of not releasing sufficient interconnection ports during its test run of services.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X