For Quick Alerts
ALLOW NOTIFICATIONS  
For Daily Alerts

ಸ್ಟಾರ್ಟ್ಅಪ್: ಭಾರತ 3ನೇ ಅತಿದೊಡ್ಡ ದೇಶ, ಮುಂಚೂಣಿಯಲ್ಲಿ ಬೆಂಗಳೂರು

By Siddu Thorat
|

ಭಾರತ ಸ್ಟಾರ್ಟ್ಅಪ್, ತಂತ್ರಜ್ಞಾನ ಹಾಗೂ ತಂತ್ರಜ್ಞಾನ ರಹಿತ ಕ್ಷೇತ್ರದಲ್ಲಿ ಜಾಗತಿಕವಾಗಿ ಮೇಲುಗೈ ಸಾಧಿಸುತ್ತಿದೆ. ಸ್ಟಾರ್ಟ್ಅಪ್ ಗಳ ಹಾಟ್ ಪೇವರಿಟ್ ಬಂಡವಾಳ ಹೂಡಿಕೆದಾರರ ಆಕರ್ಷಕ ದೇಶವಾಗಿ ಬದಲಾಗುತ್ತಿದ್ದು, ತನ್ನತ್ತ ಇಡೀ ಜಗತ್ತನ್ನೇ ಸೆಳೆಯುತ್ತಿದೆ.

ಭಾರತ ಸರ್ಕಾರ ನವೋದ್ಯಮಗಳಿಗೆ ಹೆಚ್ಚು ಪ್ರೋತ್ಸಾಹ ಕೊಡುತ್ತಿರುವುದರಿಂದ ಇದು ಎಲ್ಲರ ನೆಚ್ಚಿನ ಕ್ಷೇತ್ರವಾಗಿ ಬದಲಾಗುತ್ತಿದೆ.

ಭಾರತ 3ನೇ ಅತಿದೊಡ್ಡ ದೇಶ

ಭಾರತ 3ನೇ ಅತಿದೊಡ್ಡ ದೇಶ

ತಂತ್ರಜ್ಞಾನ ಆಧಾರಿತ ಸ್ಟಾರ್ಟ್ಅಪ್ ಗಳನ್ನು ಆರಂಭಿಸುವ ವಿಷಯದಲ್ಲಿ ಭಾರತ ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ದೇಶವಾಗಿದೆ. ಮೊದಲೆರಡು ಸ್ಥಾನಗಳಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್ ಗಳಿವೆ.

ಮಂಚೂಣಿಯಲ್ಲಿ ಬೆಂಗಳೂರು

ಮಂಚೂಣಿಯಲ್ಲಿ ಬೆಂಗಳೂರು

ಉದಯೋನ್ಮುಖ ನವೋದ್ಯಮಿಗಳಿಗೆ ಅವಕಾಶ ಕಲ್ಪಸಿ ಕೊಡುವುದರಲ್ಲಿ ಬೆಂಗಳೂರು ನಗರವು ದೇಶದ ಇತರ ನಗರಗಳಿಗಿಂತ ಮಂಚೂಣಿಯಲ್ಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದಾ(ಅಸೋಚಾಂ) ವರದಿಯಲ್ಲಿ ತಿಳಿಸಿದೆ.
ಅದರಲ್ಲೂ ಕರ್ನಾಟಕ ಸರ್ಕಾರ ರಾಜ್ಯದಲ್ಲಿ 20 ಸಾವಿರ ಸ್ಟಾರ್ಟಪ್ಸ್(ನವೋದ್ಯಮ) ಗಳನ್ನು ಆರಂಭಿಸುವ ಗುರಿ ಹೊಂದಿದೆ.

ದೇಶದ ಇನ್ನಿತರ ಜನಪ್ರಿಯ ತಾಣಗಳು

ದೇಶದ ಇನ್ನಿತರ ಜನಪ್ರಿಯ ತಾಣಗಳು

ಬೆಂಗಳೂರು ನಂತರ ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಚೆನ್ನೈ ನಗರಗಳೂ ಸ್ಟಾರ್ಟ್ಅಪ್ ಗಳ ಜನಪ್ರಿಯ ತಾಣಗಳಾಗಿವೆ.

ಬೆಂಗಳೂರು ಪಾಲು

ಬೆಂಗಳೂರು ಪಾಲು

ತಂತ್ರಜ್ಞಾನ ಆಧಾರಿತ ದೇಶಿ ಸ್ಟಾರ್ಟ್ಅಪ್ ಗಳಲ್ಲಿ ಸಾಪ್ಟ್ವೇರ್ ರಾಜಧಾನಿ ಖ್ಯಾತಿಯ ಬೆಂಗಳೂರು ಶೇ. 26ರಷ್ಟು ಪಾಲನ್ನು ಹೊಂದಿದೆ. ದೆಹಲಿ ಶೇ. 23 ಹಾಗೂ ಮುಂಬೈ ಶೇ. 17 ಪಾಲನ್ನು ಹೊಂದಿದೆ.

ತಂತ್ರಜ್ಞಾನ ಮತ್ತು ತಂತ್ರಜ್ಞಾನ ರಹಿತ 5ನೇ ದೇಶ

ತಂತ್ರಜ್ಞಾನ ಮತ್ತು ತಂತ್ರಜ್ಞಾನ ರಹಿತ 5ನೇ ದೇಶ

ತಂತ್ರಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೊರತಾದ ಒಟ್ಟಾರೆ ಸ್ಟಾರ್ಟ್ಅಪ್ ಗಳ ವಿಷಯದಲ್ಲಿ ಭಾರತವು ವಿಶ್ವದಲ್ಲಿಯೇ 5ನೇ ಅತಿದೊಡ್ಡ ದೇಶವಾಗಿದೆ. ಅಮೆರಿಕ 83 ಸಾವಿರ ಸ್ಟಾರ್ಟ್ಅಪ್ ಗಳೊಂದಿಗೆ ಮೊದಲ ಸ್ಥಾನ ಮತ್ತು ಭಾರತ ಹಾಗೂ ಚೀನಾ ತಲಾ ಹತ್ತು ಸಾವಿರ ಸ್ಟಾರ್ಟ್ಅಪ್ ಗಳೊಂದಿಗೆ 5ನೇ ಸ್ಥಾನದಲ್ಲಿ ಇವೆ.

ಬಂಡವಾಳ ಹೂಡಿಕೆ

ಬಂಡವಾಳ ಹೂಡಿಕೆ

ಸ್ಟಾರ್ಟ್ಅಪ್ ಗಳಲ್ಲಿ ಹಣ ತೊಡಗಿಸಲು ಬಂಡವಾಳ ಹೂಡಿಕೆದಾರರು ತುಂಬಾ ಆಸಕ್ತಿ ಹೊಂದಿದ್ದಾರೆ ಎಂದು ಅಸೋಚಾಂ ತಿಳಿಸಿದೆ.

ಡಿಜಿಟಲ್ ಇಂಡಿಯ

ಡಿಜಿಟಲ್ ಇಂಡಿಯ

ಭಾರತದಲ್ಲಿಯೇ ತಯಾರಿಸಿ, ಸ್ಟಾರ್ಟ್ಅಪ್ ಭಾರತ ಮತ್ತು ಡಿಜಿಟಲ್ ಇಂಡಿಯ ಕಾರ್ಯಕ್ರಮ ದೇಶದಲ್ಲಿ ಉದ್ಯಮಶೀಲತೆ ಬೆಳೆಯಲು ಗಮನಾರ್ಹ ಕೊಡುಗೆ ನೀಡುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಾಟ್ ಪೇವರಿಟ್ ಸಿಟಿ

ಹಾಟ್ ಪೇವರಿಟ್ ಸಿಟಿ

ಸಿಲಿಕಾನ್ ಸಿಟಿ ಪ್ರಸಿದ್ದಿಯ ಪಡೆದಿರುವ ನಗರ ಬೆಂಗಳೂರು. ಜಾಗತಿಕವಾಗಿ ಐಟಿ-ಬಿಟಿ ಹಾಗೂ ನವೋದ್ಯಮಿಗಳ ಹಾಟ್ ಪೇವರಿಟ್ ತಾಣ. ಇಲ್ಲಿ ಅಸಂಖ್ಯಾತ ಐಟಿ-ಬಿಟಿ ಹಾಗೂ ನವೋದ್ಯಮಗಳು ನೆಲೆಯೂರಿ ಯಶಸ್ಸನ್ನು ಕಂಡಿವೆ.

Read more about: start up ನವೋದ್ಯಮ
English summary

StartUp : India is 3rd largest country, Bangalore in Forefront

India is the third largest in the world in terms of starting a technology-based startup. There are two positions in the United States and England. America in the first position and England is second position.
Story first published: Monday, August 22, 2016, 15:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X