For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ಸ್ಪಷ್ಟನೆ: 500 ಸಿಬ್ಬಂದಿ ವಜಾ ಮಾಡಿಲ್ಲ

By Siddu
|

ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ಜತೆಗಿನ ಒಪ್ಪಂದ ರದ್ದಾದ ಹಿನ್ನೆಲೆಯಲ್ಲಿ ಇನ್ಫೋಸಿಸ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ ಎಂಬ ಪತ್ರಿಕಾ ವರದಿಗಳನ್ನು ತಳ್ಳಿ ಹಾಕಿದೆ. ಮಾದ್ಯಮಗಳಲ್ಲಿ ಪ್ರಕಟವಾಗಿರುವ 500 ಸಿಬ್ಬಂದಿ ವಜಾ ವರದಿಯು ತಪ್ಪು ಮಾಹಿತಿಯಿಂದ ಒಳಗೊಂಡಿದೆ ಎಂದು ಹೇಳಿದೆ.

ಜತೆಗೆ ಅದಕ್ಕೆ ಪೂರಕವಾದ ಸಮಂಜಸ ಮಾಹಿತಿಯನ್ನು ನೀಡಿದ್ದು, ಅದರ ಸಂಕ್ಷಿಪ್ತ ನೋಟ ಇಲ್ಲಿದೆ.

ಆರ್ಬಿಎಸ್ ಗುತ್ತಿಗೆ ರದ್ದು

ಆರ್ಬಿಎಸ್ ಗುತ್ತಿಗೆ ರದ್ದು

ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ಜತೆಗಿನ ಒಪ್ಪಂದ ರದ್ದಾದ ಕಾರಣಕ್ಕೆ ಸಂಸ್ಥೆಗೆ ಆಗಿರುವ ನಷ್ಟದಿಂದಾಗಿ ಸಂಸ್ಥೆಯು ೫೦೦ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ ಎಂಬ ಪತ್ರಿಕಾ ವರದಿಗಳನ್ನು ದೇಶದ ಎರಡನೇ ಅತಿದೊಡ್ಡ ಸಾಪ್ಟ್ವೇರ್ ರಪ್ತು ಕಂಪನಿ ತಳ್ಳಿ ಹಾಕಿದೆ.

ಅದಕ್ಷತೆ ಮತ್ತು ಅಶಿಸ್ತು

ಅದಕ್ಷತೆ ಮತ್ತು ಅಶಿಸ್ತು

ಅದಕ್ಷತೆ ಮತ್ತು ಅಶಿಸ್ತಿನ ಕಾರಣಕ್ಕೆ ಕೆಲ ಉದ್ಯೋಗಿಗಳನ್ನು ಸಂಸ್ಥೆ ಬಿಡುವಂತೆ ಸೂಚಿಸಲಾಗಿದೆಯೇ ಹೊರತು ಅವರನ್ನು ಕೆಲಸದಿಂದ ತೆಗೆದು ಹಾಕಿಲ್ಲ ಎಂದು ಇನ್ಫೋಸಿಸ್ ಖಚಿತಪಡಿಸಿದೆ.

ತಪ್ಪು ಮಾಹಿತಿ

ತಪ್ಪು ಮಾಹಿತಿ

ಮಾದ್ಯಮಗಳಲ್ಲಿ ಪ್ರಕಟವಾಗಿರುವ 500 ಸಿಬ್ಬಂದಿ ವಜಾ ವರದಿಯು ತಪ್ಪು ಮಾಹಿತಿಯಿಂದ ಒಳಗೊಂಡಿದೆ. ಅಶಿಸ್ತಿನ ಕಾರಣಕ್ಕೆ ಸಂಸ್ಥೆ ಬಿಡುವಂತೆ ಸೂಚಿಸಿದ ಸಿಬ್ಬಂದಿ ಸಂಖ್ಯೆಯು ಅದಕ್ಕಿಂತ ಕಡಿಮೆ ಇದೆ ಎಂದು ಸಂಸ್ಥೆ ತಿಳಿಸಿದೆ.

ಆಪ್ತ ಸಮಾಲೋಚನೆಯ ನೆರವು

ಆಪ್ತ ಸಮಾಲೋಚನೆಯ ನೆರವು

ಕಂಪನಿಯ ನಿರೀಕ್ಷಿತ ಮಾನದಂಡದ ಕಾರ್ಯಕ್ಷಮತೆ ತಲುಪದ ಉದ್ಯೋಗಿಗಳಿಗೆ ಅವರ ಕೆಲಸದ ವೈಖರಿ ಸುಧಾರಿಸಿಕೊಳ್ಳ ಆಪ್ತಸಮಾಲೋಚನೆಯ ನೆರವು ನೀಡಲಾಗುವುದು. ಕಾರ್ಯದಕ್ಷತೆಯ ನಿರೀಕ್ಷೆಗಳನ್ನು ನಿರಂತರವಾಗಿ ತಲುಪಲು ವಿಫಲರಾದವರಿಗೆ ಬದಲಿ ಉದ್ಯೋಗ ನೋಡಿಕೊಳ್ಲಲು ಸೂಚಿಸಲಾಗುವುದು. ಈ ಮಾನದಂಡ ಎಲ್ಲ ಹಂತದ ಉದ್ಯೋಗಿಗಳಿಗೆ ಅನ್ವಯಿಸಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಇತರ ಯೋಜನೆಗಳಿಗೆ ನಿಯೋಜನೆ

ಇತರ ಯೋಜನೆಗಳಿಗೆ ನಿಯೋಜನೆ

ಆರ್ಬಿಎಸ್ ಗುತ್ತಿಗೆ ರದ್ದಾಗಿರುವುದರಿಂದ ಆಗಿರುವ ಆರ್ಥಿಕ ನಷ್ಟ ಸರಿದೂಗಿಸಲು 3 ಸಾವಿರದಷ್ಟು ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆ ಒಪ್ಪಂದ ರದ್ದತಿಯಿಂದ ಭಾಧಿತರಾದ ಸಿಬ್ಬಂದಿಗಳನ್ನು ಇತರ ಯೋಜನೆಗಳಿಗೆ ನಿಯೋಜಿಸಲಾಗುವುದು ಎಂದು ತಿಳಿಸಿದೆ.

English summary

Infosys said not dismissed 500 staff

Royal Bank of Scotland in the wake of the cancellation of the contract with the company laying off employees fired has denied press reports. In addition, given the complementary pertinent information, it's a brief look.
Story first published: Tuesday, August 23, 2016, 17:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X